ಸುಳ್ಳು ವದಂತಿ : ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಹರಿದು ಬಂದ ವಲಸೆ ಕಾರ್ಮಿಕರು - Karavali Times ಸುಳ್ಳು ವದಂತಿ : ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಹರಿದು ಬಂದ ವಲಸೆ ಕಾರ್ಮಿಕರು - Karavali Times

728x90

8 May 2020

ಸುಳ್ಳು ವದಂತಿ : ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಹರಿದು ಬಂದ ವಲಸೆ ಕಾರ್ಮಿಕರು



ಮಂಗಳೂರು (ಕರಾವಳಿ ಟೈಮ್ಸ್) : ಮಂಗಳೂರಿನಿಂದ ಉತ್ತರ ಭಾರತ ರಾಜ್ಯಗಳಿಗೆ ರೈಲಿನ ವ್ಯವಸ್ಥೆ ಮಾಡಲಾಗಿದೆ ಎಂಬ ವದಂತಿ ಯಾರೋ ಹಬ್ಬಿದ ಪರಿಣಾಮ ಸಾವಿರಾರು ವಲಸೆ ಕಾರ್ಮಿಕರು ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣ ಬಳಿ ಗುಂಪು ಸೇರಿ, ಪ್ರತಿಭಟನೆ ನಡೆಸಿದರು.

ಉತ್ತರ ಭಾರತದ ವಲಸೆ ಕಾರ್ಮಿಕರು ರೈಲು ಮೂಲಕ ತಮ್ಮನ್ನು ಊರಿಗೆ ಕಳುಹಿಸುತ್ತಾರೆ ಎಂಬ ವದಂತಿ ನಂಬಿ ಬೆಳಗ್ಗೆನಿಂದಲೇ ರೈಲು ನಿಲ್ದಾಣದಲ್ಲಿ ಸೇರಿದ್ದರು. ಆದರೆ ರೈಲೇ ಸಿಬ್ಬಂದಿ ಯಾವುದೇ ರೈಲ್ವೇ ವ್ಯವಸ್ಥೆ ಮಾಡಿಲ್ಲ ಎಂದು ಹೇಳಿ ಸೇರಿದ ವಲಸೆ ಕಾರ್ಮಿಕರನ್ನು ಅಲ್ಲಿಂದ ತೆರಳುವಂತೆ ಸೂಚಿಸಿದ್ದರು. ಆದರೆ ವಲಸೆ ಕಾರ್ಮಿಕರು ಮಾತ್ರ ಪಟ್ಟು ಬಿಡದೇ ರೈಲು ವ್ಯವಸ್ಥೆ ಕಲ್ಪಿಸುವಂತೆ ಪೆÇೀಸ್ಟರ್ ಹಿಡಿದು ಪ್ರತಿಭಟನೆ ನಡೆಸಿದರು.

ಈ ವೇಳೆ ಸ್ಥಳದಿಂದ ಹೋಗುವಂತೆ ಪೆÇಲೀಸರು ಮನವೊಲಿಕೆಗೆ ಪ್ರಯತ್ನಪಟ್ಟರೂ ಕಾರ್ಮಿಕರು ಪೆÇಲೀಸರ ಮಾತನ್ನು ಕೇಳದೆ, ಉಪವಾಸವಿದ್ದರೂ ಪರವಾಗಿಲ್ಲ ನಾವು ಜಾಗ ಬಿಟ್ಟು ಕದಲಲ್ಲ ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ಪೆÇಲೀಸರ ಜೊತೆ ವಾಗ್ವಾದ ನಡೆಸಿ ಕೈ ಕೈ ಮಿಲಾಯಿಸುವ ಹಂತ ತಲುಪಿ ಕೆಲ ಹೊತ್ತು ಆತಂಕ ಸೃಷ್ಟಿಯಾಯಿತು.

ನಂತರ ಸ್ಥಳಕ್ಕೆ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ಭೇಟಿ ನೀಡಿ, ಮೂರು ದಿನದೊಳಗೆ ರೈಲಿನ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ಉತ್ತರ ಭಾರತದ ವಲಸೆ ಕಾರ್ಮಿಕರು ಪ್ರತಿಭಟನೆ ಹಿಂದಕ್ಕೆ ತೆಗೆದುಕೊಂಡರು. ನಂತರ ಜಿಲ್ಲಾಡಳಿತದ ವತಿಯಿಂದ ಕಾರ್ಮಿಕರು ಬಂದ ಸ್ಥಳಕ್ಕೆ ಮರಳಲು ಸ್ಥಳೀಯ ಬಸ್ಸಿನ ವ್ಯವಸ್ಥೆ ಮಾಡಿಕೊಡಲಾಯಿತು.
  • Blogger Comments
  • Facebook Comments

0 comments:

Post a Comment

Item Reviewed: ಸುಳ್ಳು ವದಂತಿ : ಮಂಗಳೂರು ರೈಲ್ವೇ ನಿಲ್ದಾಣಕ್ಕೆ ಹರಿದು ಬಂದ ವಲಸೆ ಕಾರ್ಮಿಕರು Rating: 5 Reviewed By: karavali Times
Scroll to Top