ಉತ್ತರ ಪ್ರದೇಶದಲ್ಲಿ ಭಾರೀ ಮಳೆ : ಗುಡುಗು-ಮಿಂಚಿನ ಆರ್ಭಟಕ್ಕೆ ಐತಿಹಾಸಿಕ ತಾಜ್‍ಮಹಲ್ ಕಟ್ಟಡಕ್ಕೆ ಹಾನಿ - Karavali Times ಉತ್ತರ ಪ್ರದೇಶದಲ್ಲಿ ಭಾರೀ ಮಳೆ : ಗುಡುಗು-ಮಿಂಚಿನ ಆರ್ಭಟಕ್ಕೆ ಐತಿಹಾಸಿಕ ತಾಜ್‍ಮಹಲ್ ಕಟ್ಟಡಕ್ಕೆ ಹಾನಿ - Karavali Times

728x90

31 May 2020

ಉತ್ತರ ಪ್ರದೇಶದಲ್ಲಿ ಭಾರೀ ಮಳೆ : ಗುಡುಗು-ಮಿಂಚಿನ ಆರ್ಭಟಕ್ಕೆ ಐತಿಹಾಸಿಕ ತಾಜ್‍ಮಹಲ್ ಕಟ್ಟಡಕ್ಕೆ ಹಾನಿ



ಆಗ್ರಾ (ಕರಾವಳಿ ಟೈಮ್ಸ್) : ಉತ್ತರ ಪ್ರದೇಶದ ಕೆಲ ಪ್ರದೇಶಗಳಲ್ಲಿ ಶುಕ್ರವಾರ ರಾತ್ರಿಯಿಂದ ಸುರಿಯುತ್ತಿರುವ  ಭಾರೀ ಮಳೆ, ಗಾಳಿ, ಗುಡುಗು, ಸಿಡಿಲಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇಲ್ಲಿನ ಆಗ್ರಾದ ಪ್ರಮುಖ ಪ್ರವಾಸಿ ತಾಣವಾಗಿರುವ ಐತಿಹಾಸಿಕ ಕಟ್ಟಡ ತಾಜ್‍ಮಹಲ್‍ಗೂ ಹಾನಿ ಸಂಭವಿಸಿದೆ.

ತಾಜ್‍ಮಹಲ್ ಕಟ್ಟಡದ ಮುಖ್ಯ ದ್ವಾರ ಹಾಗೂ ಎತ್ತರದ ಗುಂಬಜ್ ಕೆಳ ಭಾಗದ ಅಮೃತ ಶಿಲೆಯ ರೇಲಿಂಗ್‍ಗೂ ಹಾನಿಯಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಮಾಧಿಯ ಮೇಲ್ಭಾಗಕ್ಕೂ ಹಾನಿಯಾಗಿದ್ದು, ತಾಜ್‍ಮಹಲ್ ಆವರಣದಲ್ಲಿದ್ದ ಕೆಲ ಮರಗಳು ಬುಡ ಸಮೇತ ಕಿತ್ತು ಬಂದಿರುವುದಾಗಿ ಎಎಸ್‍ಐ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ಬಸಂತ್ ಕುಮಾರ್ ಮಾಹಿತಿ ನೀಡಿದ್ದಾರೆ.

ಇದಕ್ಕೂ ಮೊದಲು ಪ್ರಕೃತಿ ವಿಕೋಪದ ಕಾರಣದಿಂದ ಹಲವು ಬಾರಿ ತಾಜ್‍ಮಹಲ್ ಹಾನಿಗೊಳಗಾಗಿತ್ತು ಎನ್ನಲಾಗಿದೆ. 2018 ರ ಎಪ್ರಿಲ್ ತಿಂಗಳಲ್ಲಿ ಸುರಿದ ಭಾರೀ ಮಳೆಗೆ ತಾಜ್‍ಮಹಲ್ ಪ್ರವೇಶ ದ್ವಾರದಲ್ಲಿದ್ದ ಪಿಲ್ಲರಿಗೆ ಹಾನಿಯಾಗಿತ್ತು ಎಂದು ವರದಿಗಳು ತಿಳಿಸಿವೆ. 
  • Blogger Comments
  • Facebook Comments

1 comments:

Item Reviewed: ಉತ್ತರ ಪ್ರದೇಶದಲ್ಲಿ ಭಾರೀ ಮಳೆ : ಗುಡುಗು-ಮಿಂಚಿನ ಆರ್ಭಟಕ್ಕೆ ಐತಿಹಾಸಿಕ ತಾಜ್‍ಮಹಲ್ ಕಟ್ಟಡಕ್ಕೆ ಹಾನಿ Rating: 5 Reviewed By: karavali Times
Scroll to Top