ಚಿಕ್ಕಬಳ್ಳಾಪುರ : ಆಶಾ ಫೌಂಡೇಶನ್ ವತಿಯಿಂದ ಕಿಟ್ ವಿತರಣೆ - Karavali Times ಚಿಕ್ಕಬಳ್ಳಾಪುರ : ಆಶಾ ಫೌಂಡೇಶನ್ ವತಿಯಿಂದ ಕಿಟ್ ವಿತರಣೆ - Karavali Times

728x90

30 May 2020

ಚಿಕ್ಕಬಳ್ಳಾಪುರ : ಆಶಾ ಫೌಂಡೇಶನ್ ವತಿಯಿಂದ ಕಿಟ್ ವಿತರಣೆ



ಚಿಕ್ಕಬಳ್ಳಾಪುರ (ಕರಾವಳಿ ಟೈಮ್ಸ್) : ಕೊರೋನಾ ಲಾಕ್‍ಡೌನ್ ಸಂದರ್ಭ ಬಡವರ್ಗದ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿರುವುದನ್ನು ಮನಗಂಡು ಬಡ ಜನತೆಗೆ ಸಾಧ್ಯವಾದ ಮಟ್ಟಿಗೆ ಸಹಾಯ ಮಾಡುವ ಉದ್ದೇಶದಿಂದ ಚಿಕ್ಕಬಳ್ಳಾಪುರ ಆಶಾ ಫೌಂಡೇಶನ್ ವತಿಯಿಂದ ಬಡ ಕುಟುಂಬಗಳಿಗೆ ದಿನಸಿ ಕಿಟ್‍ಗಳನ್ನು ವಿತರಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ, ಮನಃಶಾಸ್ತ್ರಜ್ಞರಾದ ಆಶಾ ಮಂಚನಬಲೆ ಅವರು ಕಿಟ್ ವಿತರಣೆಗೆ ಚಾಲನೆ ನೀಡಿದರು. ಈ ಸಂದರ್ಭ ವಿ.ಎಸ್.ಟಿ. ಫೌಂಡೇಶನ್ ಅಧ್ಯಕ್ಷೆ ಮಧುಮತಿ ಸುರೇಂದ್ರ ಬಾಬು, ಕಾರ್ಯದರ್ಶಿ ಸುರೇಂದ್ರ ಬಾಬು, ಸಮಾಜ ಸೇವಕ ಗಿರೀಶ್, ಸ್ಟುಡಿಯೋ ಶ್ರೀನಿವಾಸ, ಪ್ರಜ್ವಲ್ ಮೊದಲಾದವರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ಚಿಕ್ಕಬಳ್ಳಾಪುರ : ಆಶಾ ಫೌಂಡೇಶನ್ ವತಿಯಿಂದ ಕಿಟ್ ವಿತರಣೆ Rating: 5 Reviewed By: karavali Times
Scroll to Top