ಇಂದಿನಿಂದ ವಿಶೇಷ ರೈಲುಗಳ ಸಂಚಾರ ಆರಂಭ - Karavali Times ಇಂದಿನಿಂದ ವಿಶೇಷ ರೈಲುಗಳ ಸಂಚಾರ ಆರಂಭ - Karavali Times

728x90

12 May 2020

ಇಂದಿನಿಂದ ವಿಶೇಷ ರೈಲುಗಳ ಸಂಚಾರ ಆರಂಭ80 ಸಾವಿರ ಪ್ರಯಾಣಿಕರ ಟಿಕೆಟ್ ಬುಕ್ಕಿಂಗ್ : 16 ಕೋಟಿ ಹಣ ಸಂಗ್ರಹ

ವಿಶೇಷ ರೈಲುಗಳು ಎಸಿ ಬೋಗಿಗಳು


ನವದೆಹಲಿ (ಕರಾವಳಿ ಟೈಮ್ಸ್) : ಲಾಕ್‍ಡೌನ್ ಹಿನ್ನೆಲೆಯಲ್ಲಿ ಸುಮಾರು 80 ಸಾವಿರ ಪ್ರಯಾಣಿಕರು ರೈಲ್ವೆ ಟಿಕೆಟ್‍ಗಳು ಬುಕ್ ಆಗಿದ್ದು ಇದರಿಂದಾಗಿ 16 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಇಂದಿನಿಂದ ರೈಲು ಸಂಚಾರ ಆರಂಭಗೊಳ್ಳಲಿದ್ದು, ನವದೆಹಲಿಯಿಂದ ಮದ್ಯಪ್ರದೇಶದ ಬಿಸ್ಲಾಪುರಕ್ಕೆ ರೈಲು ಸಂಚರಿಸಲಿದೆ. ವಿಶೇಷ ರೈಲುಗಳ ಬುಕಿಂಗ್ ಸೋಮವಾರ ಸಂಜೆ 6 ಗಂಟೆಯಿಂದ ಆರಂಭವಾಗಿದೆ. ಮುಂದಿನ ಏಳು ದಿನಗಳವರೆಗೆ ವಿಶೇಷ ರೈಲುಗಳಿಗಾಗಿ ಇದುವರೆಗೆ 16.15 ಕೋಟಿ ರೂಪಾಯಿಗಳ 45,533 ಬುಕಿಂಗ್ ದಾಖಲಿಸಲಾಗಿದ್ದು,. ಸುಮಾರು 82,317 ಪ್ರಯಾಣಿಕರು ಈ ಬುಕಿಂಗ್‍ನಲ್ಲಿ ಪ್ರಯಾಣಿಸಲಿದ್ದಾರೆ.

ರೈಲ್ವೆ ಇಲಾಖೆ ಸೋಮವಾರ 15 ವಿಶೇಷ ರೈಲುಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಮಂಗಳವಾರದಿಂದ ಅನುಷ್ಠಾನಗೊಳ್ಳಲಿದೆ ಪ್ರಯಾಣಿಕರಿಗೆ ತಮಗೆ ಬೇಕಾದ ಆಹಾರ ಕೊಂಡೊಯ್ಯುವಂತೆ ಸೂಚಿಸಿದೆ. ಜೊತೆಗೆ ಆರೋಗ್ಯ ತಪಾಸಣೆಗಾಗಿ ರೈಲು ಹೊರಡುವ ಸುಮಾರು 90 ನಿಮಿಷಗಳ ಮೊದಲು ನಿಲ್ದಾಣಗಳಿಗೆ ತಲುಪುವಂತೆ ಸೂಚಿಸಿದೆ.

ರೈಲಿನಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಆರೋಗ್ಯ ಸೇತು ಆಪ್ ಡೌನ್‍ಲೋಡ್ ಮಾಡಿಕೊಳ್ಳುವುದು ಕಡ್ಡಾಯ ಎಂದು ಸೂಚಿಸಿದೆ. ಮಂಗಳವಾರದಿಂದ ಸಂಚರಿಸುವ ವಿಶೇಷ ರೈಲುಗಳು ಎಸಿ ಬೋಗಿಗಳಾಗಿವೆ.

ಈ ರೈಲುಗಳ ದರವು ರಾಜಧಾನಿ ಎಕ್ಸ್‍ಪ್ರೆಸ್ ರೈಲುಗಳ ದರಕ್ಕೆ ಸಮನಾಗಿರುತ್ತದೆ ಮತ್ತು ಪ್ರಯಾಣಿಕರು ಏಳು ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬಹುದು ಎಂದು ರೈಲ್ವೆ ಇಲಾಖೆ ತಿಳಿಸಿದೆ. 
  • Blogger Comments
  • Facebook Comments

0 comments:

Post a Comment

Item Reviewed: ಇಂದಿನಿಂದ ವಿಶೇಷ ರೈಲುಗಳ ಸಂಚಾರ ಆರಂಭ Rating: 5 Reviewed By: karavali Times
Scroll to Top