ಕಲ್ಲಡ್ಕ : ಶ್ರೀರಾಮ ಶಾಲೆಯಲ್ಲಿ “ಉಪ್ಪಡ್ ಪಚ್ಚಿಲ್ ಆಯನೊ” - Karavali Times ಕಲ್ಲಡ್ಕ : ಶ್ರೀರಾಮ ಶಾಲೆಯಲ್ಲಿ “ಉಪ್ಪಡ್ ಪಚ್ಚಿಲ್ ಆಯನೊ” - Karavali Times

728x90

26 June 2020

ಕಲ್ಲಡ್ಕ : ಶ್ರೀರಾಮ ಶಾಲೆಯಲ್ಲಿ “ಉಪ್ಪಡ್ ಪಚ್ಚಿಲ್ ಆಯನೊ”







ಬಂಟ್ವಾಳ (ಕರಾವಳಿ ಟೈಮ್ಸ್) : ಉಪ್ಪಡ್ ಪಚ್ಚಿಲ್ ಆರಂಭಿಸಿದವಳು ತಾಯಿ. ಆಕೆಯೇ ಮೊದಲ ವಿಜ್ಞಾನಿ. ಹಲಸಿನ ಹಣ್ಣಿನಲ್ಲಿ ಅಪಾರ ಪ್ರೋಟಿನ್ ಅಂಶಗಳಿವೆ. ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.

ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಪ್ಪಡ್ ಪಚ್ಚಿಲ್ ಆಯನೊ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಆಹಾರ ಸಂಸ್ಕøತಿಯನ್ನು ಉಳಿಸಲು ಇಂಥ ಕಾರ್ಯಕ್ರಮಗಳು ನಡೆಯಬೇಕು ಎಂದರು.

ಕಾರ್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಉಪಾಧ್ಯಕ್ಷ ನಾರಾಯಣ ಗೌಡ, ಆಡಳಿತ ಮಂಡಳಿ ಸದಸ್ಯರಾದ ಆರ್ ಚೆನ್ನಪ್ಪ ಕೊಟ್ಯಾನ್, ಹೊಯ್ಸಳ ರಾಷ್ಟ್ರ ಸೇವಿಕಾ ಸಮಿತಿಯ ಪ್ರಾಂತ ಕಾರ್ಯಕಾರಿಣಿ ಸದಸ್ಯೆ ಕಮಲ ಪ್ರಭಾಕರ್ ಭಟ್, ಶಾಲಾಭಿವೃದ್ದಿ ಸಮಿತಿ ಸದಸ್ಯರಾದ ಜಯರಾಮ, ಪದ್ಮನಾಭ, ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಲಕ್ಷ್ಮೀ ರಘುರಾಜ್, ಮಲ್ಲಿಕಾ ಶೆಟ್ಟಿ, ಶ್ರೀರಾಮ ವಿದ್ಯಾಕೇಂದ್ರದ ಕೋಶಧಿಕಾರಿ ಶಿವಗಿರಿ ಸತೀಶ ಭಟ್, ಶಾಲಾ ಮುಖ್ಯ ಶಿಕ್ಷಕ ರವಿರಾಜ್ ಕಣಂತೂರು, ಮಾತೃ ಭಾರತಿಯ ಪದಾಧಿಕಾರಿಗಳಾದ ಸೌಮ್ಯ, ಬೇಬಿ, ರಾಜಶ್ರೀ ಮೊದಲಾದವರು ಭಾಗವಹಿಸಿದ್ದರು.








  • Blogger Comments
  • Facebook Comments

0 comments:

Post a Comment

Item Reviewed: ಕಲ್ಲಡ್ಕ : ಶ್ರೀರಾಮ ಶಾಲೆಯಲ್ಲಿ “ಉಪ್ಪಡ್ ಪಚ್ಚಿಲ್ ಆಯನೊ” Rating: 5 Reviewed By: karavali Times
Scroll to Top