ಆಗಸ್ಟ್ 2ರವರೆಗೆ ಪ್ರತಿ ಭಾನುವಾರ ಲಾಕ್‍ಡೌನ್ : ರಾಜ್ಯ ಸರಕಾರದಿಂದ ಅಧಿಕೃತ ಆದೇಶ - Karavali Times ಆಗಸ್ಟ್ 2ರವರೆಗೆ ಪ್ರತಿ ಭಾನುವಾರ ಲಾಕ್‍ಡೌನ್ : ರಾಜ್ಯ ಸರಕಾರದಿಂದ ಅಧಿಕೃತ ಆದೇಶ - Karavali Times

728x90

28 June 2020

ಆಗಸ್ಟ್ 2ರವರೆಗೆ ಪ್ರತಿ ಭಾನುವಾರ ಲಾಕ್‍ಡೌನ್ : ರಾಜ್ಯ ಸರಕಾರದಿಂದ ಅಧಿಕೃತ ಆದೇಶ



ಬೆಂಗಳೂರು (ಕರಾವಳಿ ಟೈಮ್ಸ್) : ಜುಲೈ 5 ರಿಂದ ಆಗಸ್ಟ್ 2ರವರೆಗೆ ಪ್ರತಿ ಭಾನುವಾರ ಲಾಕ್‍ಡೌನ್ ಮಾಡಲಾಗುವುದು ಎಂದು ಸರಕಾರ ಅಧಿಕೃತ ಆದೇಶ ಹೊರಡಿಸಿದೆ. ಸರಕಾರಿ ನೌಕರರಿಗೆ 2020 ಜುಲೈ 10 ರಿಂದ ಆಗಸ್ಟ್ 8 ರವರಗೆ ಪ್ರತಿ ಶನಿವಾರ ರಜೆ ಇರಲಿದೆ.

ರಾಜ್ಯದ್ಯಾಂತ ರಾತ್ರಿ 8 ರಿಂದ ಬೆಳಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಕರ್ಫ್ಯೂ ಅವಧಿಯಲ್ಲಿ ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ ವ್ಯಕ್ತಿಗಳ ಚಲನೆಯನ್ನು ನಿಷೇಧಿಸಿ ಸರಕಾರ ಆದೇಶದಲ್ಲಿ ತಿಳಿಸಿದೆ.

ರಾತ್ರಿ ಕರ್ಫ್ಯೂ ವೇಳೆಯಲ್ಲಿ ಆಸ್ಪತ್ರೆ ಸೇವೆಗಳು, ಮೆಡಿಕಲ್, ಅಗತ್ಯ ವಸ್ತು ಸೇವೆಗಳು, ಹಾಲು, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು, ಅಗತ್ಯ ವಸ್ತು/ ಸೇವೆಗಳ ವಾಹನಗಳ ಸಂಚಾರ, ಕೊರೋನಾ ವಾರಿಯರ್ಸ್ ವಾಹನ ಸಂಚಾರ, ಓಡಾಟಕ್ಕೆ ಅವಕಾಶ ಇರುತ್ತದೆ.

ಮಾಲ್‍ಗಳು, ಸೂಪರ್ ಮಾರ್ಕೆಟ್‍ಗಳು, ದೇವಸ್ಥಾನ, ಮಸೀದಿ, ಚರ್ಚ್, ಮದ್ಯದ ಅಂಗಡಿಗಳು, ಬಾರ್,  ಹೋಟೆಲ್ ಡೈನಿಂಗ್, ರೆಸ್ಟೋರೆಂಟ್, ಖಾಸಗಿ ವಾಹನ ಸಂಚಾರಗಳು ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.








  • Blogger Comments
  • Facebook Comments

0 comments:

Post a Comment

Item Reviewed: ಆಗಸ್ಟ್ 2ರವರೆಗೆ ಪ್ರತಿ ಭಾನುವಾರ ಲಾಕ್‍ಡೌನ್ : ರಾಜ್ಯ ಸರಕಾರದಿಂದ ಅಧಿಕೃತ ಆದೇಶ Rating: 5 Reviewed By: karavali Times
Scroll to Top