ಕೋವಿಡ್-19 ಪರೀಕ್ಷೆಗೆ ದೇಶದಲ್ಲಿ ಏಕರೂಪ ದರ ನಿಗದಿಪಡಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ - Karavali Times ಕೋವಿಡ್-19 ಪರೀಕ್ಷೆಗೆ ದೇಶದಲ್ಲಿ ಏಕರೂಪ ದರ ನಿಗದಿಪಡಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ - Karavali Times

728x90

19 June 2020

ಕೋವಿಡ್-19 ಪರೀಕ್ಷೆಗೆ ದೇಶದಲ್ಲಿ ಏಕರೂಪ ದರ ನಿಗದಿಪಡಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ



ನವದೆಹಲಿ (ಕರಾವಳಿ ಟೈಮ್ಸ್) : ದೇಶದ್ಯಾಂತ ಕೊರೊನಾ ಪರೀಕ್ಷೆಗೆ ಏಕರೂಪದ ದರ ನಿಗದಿಪಡಸುವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಕೊರೊನಾ ರೋಗಿಗಳಿಗೆ ಉತ್ತಮ ಚಿಕಿತ್ಸೆ, ಮೃತ ದೇಹಗಳನ್ನು ವ್ಯವಸ್ಥಿತ ಅಂತ್ಯ ಸಂಸ್ಕಾರ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂ ದೂರು ದಾಖಲಿಸಿಕೊಂಡಿತ್ತು. ನ್ಯಾ. ಅಶೋಕ್ ಭೂಷಣ್ ನೇತೃತ್ವದ ಪೀಠ ಈ ಅರ್ಜಿ ವಿಚಾರಣೆ ನಡೆಸಿತು.

ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುತಿದೆಯೇ ಇಲ್ಲವೇ ಎನ್ನುವುದು ಪರಿಶೀಲಿಸಲು ಸರಕಾರ ತಜ್ಞರ ತಂಡ ರಚಿಸಬೇಕು. ಈ ತಜ್ಞರ ತಂಡಗಳು ಆಸ್ಪತ್ರೆಗಳಿಗೆ ಪದೇ ಪದೇ ಭೇಟಿ ನೀಡಿ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲಾ ಕೊರೊನಾ ವಾರ್ಡ್‍ಗಳಲ್ಲಿ ಸಿಸಿಟಿವಿ ಅಳವಡಿಬೇಕು ಎಂದು ಪೀಠ ಸೂಚಿಸಿದೆ.

ಜೊತೆಗೆ ತಜ್ಞರ ತಂಡ, ಮೃತ ದೇಹಗಳ ಅಂತ್ಯ ಸಂಸ್ಕಾರದಲ್ಲಿರುವ ದೋಷಗಳನ್ನು ಸರಿಪಡಿಸಬೇಕು.  ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಪರೀಕ್ಷೆ ವಿಭಿನ್ನ ದರಗಳನ್ನು ನಿಗದಿಪಡಿಸದೆ ಎಲ್ಲಾ ರಾಜ್ಯಗಳಲ್ಲಿ ಒಂದೇ ದರ ನಿಗದಿಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಆದೇಶಿಸಿದೆ.
  • Blogger Comments
  • Facebook Comments

0 comments:

Post a Comment

Item Reviewed: ಕೋವಿಡ್-19 ಪರೀಕ್ಷೆಗೆ ದೇಶದಲ್ಲಿ ಏಕರೂಪ ದರ ನಿಗದಿಪಡಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ Rating: 5 Reviewed By: karavali Times
Scroll to Top