ಪೌರ ಕಾರ್ಮಿಕರ ಆರೋಗ್ಯ ರಕ್ಷಣೆ ಆದ್ಯ ಕರ್ತವ್ಯ : ರಾಯಪ್ಪ - Karavali Times ಪೌರ ಕಾರ್ಮಿಕರ ಆರೋಗ್ಯ ರಕ್ಷಣೆ ಆದ್ಯ ಕರ್ತವ್ಯ : ರಾಯಪ್ಪ - Karavali Times

728x90

26 June 2020

ಪೌರ ಕಾರ್ಮಿಕರ ಆರೋಗ್ಯ ರಕ್ಷಣೆ ಆದ್ಯ ಕರ್ತವ್ಯ : ರಾಯಪ್ಪ




ಉಳ್ಳಾಲ (ಕರಾವಳಿ ಟೈಮ್ಸ್) : ಪೌರ ಕಾರ್ಯಕರ್ತರ ಆರೋಗ್ಯ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಕೊರೋನಾ ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪೌರ ಕಾರ್ಮಿಕರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುಷ್ ಇಲಾಖೆ ಮತ್ತು ಆಯುಷ್ ಫೆಡರೇಷನ್ ನೀಡುವ ಮಾತ್ರೆಗಳು ಸಹಕಾರಿಯಾಗಿದೆ. ಇದನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಉಳ್ಳಾಲ ನಗರಸಭಾ ಪೌರಾಯುಕ್ತ ರಾಯಪ್ಪ ಹೇಳಿದರು.

ಉಳ್ಳಾಲ ನಗರಸಭಾ ಕಚೇರಿಯಲ್ಲಿ ಆಯುಷ್ ಫೆಡರೇಷನ್ ಆಫ್ ಇಂಡಿಯಾ ದ.ಕ.ಜಿಲ್ಲೆ ಮತ್ತು ಮಂಗಳೂರು ಇದರ ಆಶ್ರಯದಲ್ಲಿ ಆಯುಷ್ ಇಲಾಖೆಯ ಸಹಯೋಗದೊಂದಿಗೆ ಉಳ್ಳಾಲ ಪೌರ ಕಾರ್ಮಿಕರಿಗೆ ಆಯುಷ್ ರೋಗ ರಕ್ಷಕ ಮಾತ್ರೆಗಳ ವಿರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ನಗರ ಸ್ವಚ್ಛವಾದರೆ ಉಳ್ಳಾಲದ ಜನರ ಆರೋಗ್ಯಕ್ಕೆ ಸಮಸ್ಯೆ ಬರುವುದಿಲ್ಲ. ಇಂತಹ ಸ್ವಚ್ಚ ಕಾರ್ಯ ಮಾಡುವ ಪೌರ ಕಾರ್ಮಿಕರ ಆರೋಗ್ಯ ರಕ್ಷಣೆಗೆ ಹೆಚ್ಚನ ಆದ್ಯತೆ ನೀಡಬೇಕು. ಪ್ರತಿಯೊಬ್ಬ ಕಾರ್ಮಿಕರು ಕಸ ವಿಲೇವಾರಿಗೆ ತೆರಳಿದಾಗ ಜಾಗ್ರತೆ ವಹಿಸುವುದು ಅತ್ಯಂತ ಅವಶ್ಯಕವಾಗಿದೆ. ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಳ್ಳಿ ಎಂದು ಸಲಹೆ ನೀಡಿದರು.

ಜಿಲ್ಲಾ ಆಯುಷ್ ಫೆಡರೇಷನ್ ಜಿಲ್ಲಾಧ್ಯಕ್ಷ ಕೃಷ್ಣ ಗೋಖಲೆ ಮಾತನಾಡಿ ಕೊರೋನಾ ಸೋಂಕಿನಂತಹ ಸಾಂಕ್ರಾಮಿಕ ರೋಗದಿಂದ ನಾವು ಸಂಕಷ್ಟದ ಸ್ಥಿತಿಯಲ್ಲಿದ್ದೇವೆ. ಈ ರೋಗಕ್ಕೆ ಚಿಕಿತ್ಸೆ ಇಲ್ಲ. ಆದರೆ ಈ ರೋಗ ಬರದಂತೆ ಜಾಗೃತಿ ವಹಿಸುವುದು ಆತ್ಯಂತ ಅಗತ್ಯ. ನಮ್ಮ ದೇಹದಲ್ಲಿ ರೋಗ ನಿರೋದಕ ಶಕ್ತಿಯನ್ನು ಹೆಚ್ಚು ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಆಯುರ್ವೇದ ಶಾಸ್ತ್ರದಲ್ಲಿ ಸಿದ್ಧ ಪಡಿಸಿದ ರೋಗ ರಕ್ಷಕ ಕಿಟ್‍ಗಳನ್ನು ನೀಡುತ್ತಿದ್ದು, ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.

ಉಳ್ಳಾಲ ಆರೋಗ್ಯ ಕೇಂದ್ರದ ಆಯುಷ್ ವಿಭಾಗದ ಆರೋಗ್ಯಾಧಿಕಾರಿ ಡಾ ಸಹನಾ, ಆಯುಷ್ ಫೆಡರೇಷನ್ ಆಫ್ ಇಂಡಿಯಾ ಇದರ ಜಿಲ್ಲಾ ಕೋಶಾಧಿಕಾರಿ ಹಾಗೂ ಶಾಫಿ ಕ್ಲಿನಿಕ್ ವೈದ್ಯಾಧಿಕಾರಿ ಡಾ. ಝೈನುದ್ದೀನ್, ಮಂಗಳೂರು ಆಯುಷ್ ಫೆಡರೇಷನ್ ಆಫ್ ಇಂಡಿಯಾದ ಕಾರ್ಯದರ್ಶಿ ಡಾ. ಸುದೀಂದ್ರ, ಉಳ್ಳಾಲ ನಗರಸಭಾ ಪರಿಸರ ವಿಭಾಗದ ಅಭಿಯಂತರ ಯಾಸ್ಮಿನ್ ಸುಲ್ತಾನ್ ಮೊದಲಾದವರು ಭಾಗವಹಿಸಿದ್ದರು.








  • Blogger Comments
  • Facebook Comments

0 comments:

Post a Comment

Item Reviewed: ಪೌರ ಕಾರ್ಮಿಕರ ಆರೋಗ್ಯ ರಕ್ಷಣೆ ಆದ್ಯ ಕರ್ತವ್ಯ : ರಾಯಪ್ಪ Rating: 5 Reviewed By: karavali Times
Scroll to Top