ಮುಂಬಯಿ ತುಳು ಕನ್ನಡಿಗರ ಸಮಸ್ಯೆಗಳಿಗೆ ಸರಕಾರ ಸೂಕ್ತವಾಗಿ ಸ್ಪಂದಿಸಲಿ : ವೆಲ್ಪೇರ್ ಪಾರ್ಟಿ ಆಗ್ರಹ - Karavali Times ಮುಂಬಯಿ ತುಳು ಕನ್ನಡಿಗರ ಸಮಸ್ಯೆಗಳಿಗೆ ಸರಕಾರ ಸೂಕ್ತವಾಗಿ ಸ್ಪಂದಿಸಲಿ : ವೆಲ್ಪೇರ್ ಪಾರ್ಟಿ ಆಗ್ರಹ - Karavali Times

728x90

1 June 2020

ಮುಂಬಯಿ ತುಳು ಕನ್ನಡಿಗರ ಸಮಸ್ಯೆಗಳಿಗೆ ಸರಕಾರ ಸೂಕ್ತವಾಗಿ ಸ್ಪಂದಿಸಲಿ : ವೆಲ್ಪೇರ್ ಪಾರ್ಟಿ ಆಗ್ರಹ

ವೆಲ್ಪೇರ್ ಪಾರ್ಟಿ ಆಪ್ ಇಂಡಿಯ ಇದರ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ


ಮಂಗಳೂರು (ಕರಾವಳಿ ಟೈಮ್ಸ್) : ಮುಂಬೈ ತುಳು ಕನ್ನಡಿಗರ ಸಮಸ್ಯೆಗಳಿಗೆ ಸರಕಾರ ಸೂಕ್ತವಾಗಿ ಸ್ಪಂದಿಸಿ ಪರಿಹಾರ ಒದಗಿಸಿಕೊಡಬೇಕು ಎಂದು ವೆಲ್ಪೇರ್ ಪಾರ್ಟಿ ಆಪ್ ಇಂಡಿಯ ಇದರ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಮುಂಬೈ ತುಳುವರು ಮತ್ತು ಕನ್ನಡಿಗರೆಂದರೆ ಕೇವಲ ಉದ್ಯಮಿಗಳ ಕೂಟ ಮಾತ್ರವಾಗಿಲ್ಲ. ಅವರು ಸಾಕಷ್ಟು ಮಧ್ಯಮ ವರ್ಗದ ಜನರು ಹಾಗೂ ಕಾರ್ಮಿಕ ಬಡಪಾಯಿಗಳನ್ನು ಹೊಂದಿದ್ದು, ಕಳೆದ ಎರಡು ತಿಂಗಳುಗಳಿಂದ ಸರಿಯಾದ ಕೆಲಸವಿಲ್ಲದೆ, ವೇತನರಹಿತವಾಗಿ ತಮ್ಮ ಒಪೆÇ್ಪತ್ತಿನ ಆಹಾರಕ್ಕೂ ಬವಣೆ ಪಡುತ್ತಿರುವ ಸನ್ನಿವೇಶದಲ್ಲಿ ಅದೆಷ್ಟೋ ಜನರು ಹೇಗಾದರೂ ಒಮ್ಮೆ ಊರಿಗೆ ಮರಳಿದರೆ ಸಾಕು ಎನ್ನುವ ಬವಣೆಯಲ್ಲಿ ಬೇಯುತ್ತಿದ್ದಾರೆ. ಸರಕಾರ ಅವರವರ ಮನೆಗೆ ಸೇರಿಸುವ ವ್ಯವಸ್ಥೆಯ ಬಗ್ಗೆ ಏನಾದರೊಂದು ನಿರ್ಣಯವನ್ನು ಕ್ಷಿಪ್ರವಾಗಿ ಕೈಗೊಳ್ಳಬಹುದೆಂಬ ನಿರೀಕ್ಷೆಯಲ್ಲಿ ದಿನದೂಡುತ್ತಿದ್ದಾರೆ ಎಂದವರು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂಬೈ, ಪುಣೆ, ಮತ್ತು ಮಹಾರಾಷ್ಟ್ರದ ವಿವಿಧೆಡೆಗಳಲ್ಲಿ ಸಿಲುಕಿರುವ ವಿಶೇಷವಾಗಿ ಕರಾವಳಿ ವಲಯದ ತುಳುವರನ್ನು ಸೇರಿದಂತೆ ಎಲ್ಲಾ ಕನ್ನಡಿಗರನ್ನು ಸರಕಾರ ಅವರವರ ಮನೆಗಳಿಗೆ ಅಥವಾ ಅವರವರ ಕುಟುಂಬದವರಿಗೆ ತಲುಪಿಸುವ ಕಾರ್ಯವನ್ನು ಬಹಳ ತುರ್ತಾಗಿ ಕೈಗೊಳ್ಳಬೇಕಾಗಿದೆ ಎಂದು ಆಗ್ರಹಿಸಿರುವ ಸುಲೈಮಾನ್ ಕಲ್ಲರ್ಪೆ ಮಹಾರಾಷ್ಟ್ರದಲ್ಲಿ  ಕೊರೋನಾ ಭೀತಿಯು ಕರ್ನಾಟಕದಲ್ಲಿನ ಮಟ್ಟಕ್ಕಿಂತ ಅಧಿಕವೇ ಇರುವುದರಿಂದ, ಇನ್ನು ಇವರ ವಾಪಾಸಾತಿಗೆ ಮೀನಮೇಷವೆನಿಸುವುದರಿಂದಾಗಿ, ಪರಿಸ್ಥಿತಿ ಮತ್ತಷ್ಟು ಹದಗೆಟ್ಟು ಜನರನ್ನು ಅಪಾಯಕ್ಕೆ ದೂಡಿದಂತ ಸನ್ನಿವೇಶ ನಿರ್ಮಾಣಕ್ಕೆ ಕಾರಣವಾಗಬಹುದಲ್ಲದೆ, ಇವೆಲ್ಲವೂ ಸರಕಾರದ ನಿಷ್ಕ್ರಿಯ ನಿಲುವಿನಿಂದಾಗಿರುವುದರಿಂದ, ಸರಕಾರಕ್ಕೆ ಹೆಚ್ಚು ಪ್ರತಿಕೂಲವಾಗಿ ಪರಿಣಮಿಸಬಹುದು ಎಂಬುದನ್ನು ಸರಕಾರ ಮನಗಾಣಬೇಕಿದೆ ಎಂದಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಇನ್ನಷ್ಟು ದಿನಗಳನ್ನು ಮುಂದೂಡದೆ ಕೂಡಲೇ ಅವರನ್ನು ಹಂತ ಹಂತವಾಗಿ ಕರೆತರುವ ಹಾಗೂ ತರುವಾಯ ಅವರ ಕ್ವಾರಂಟೈನ್ ವ್ಯವಸ್ಥೆಗಳ ಸೂಕ್ತ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆಯನ್ನು ಮಾಡುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ. 
  • Blogger Comments
  • Facebook Comments

0 comments:

Post a Comment

Item Reviewed: ಮುಂಬಯಿ ತುಳು ಕನ್ನಡಿಗರ ಸಮಸ್ಯೆಗಳಿಗೆ ಸರಕಾರ ಸೂಕ್ತವಾಗಿ ಸ್ಪಂದಿಸಲಿ : ವೆಲ್ಪೇರ್ ಪಾರ್ಟಿ ಆಗ್ರಹ Rating: 5 Reviewed By: karavali Times
Scroll to Top