ಕೊರೋನಾ ಸಂಧಿಗ್ದ ಘಟ್ಟದಲ್ಲಿ ಸಾಗಿದ ಟೆಸ್ಟ್ ಸರಣಿ ಆಂಗ್ಲರ ಕೈ ವಶ, ಕ್ರಿಕೆಟ್ ದೈತ್ಯರಿಗೆ ವಿರೋಚಿತ ಸೋಲು - Karavali Times ಕೊರೋನಾ ಸಂಧಿಗ್ದ ಘಟ್ಟದಲ್ಲಿ ಸಾಗಿದ ಟೆಸ್ಟ್ ಸರಣಿ ಆಂಗ್ಲರ ಕೈ ವಶ, ಕ್ರಿಕೆಟ್ ದೈತ್ಯರಿಗೆ ವಿರೋಚಿತ ಸೋಲು - Karavali Times

728x90

28 July 2020

ಕೊರೋನಾ ಸಂಧಿಗ್ದ ಘಟ್ಟದಲ್ಲಿ ಸಾಗಿದ ಟೆಸ್ಟ್ ಸರಣಿ ಆಂಗ್ಲರ ಕೈ ವಶ, ಕ್ರಿಕೆಟ್ ದೈತ್ಯರಿಗೆ ವಿರೋಚಿತ ಸೋಲು



ಮ್ಯಾಂಚೆಸ್ಟರ್ (ಕರಾವಳಿ ಟೈಮ್ಸ್) : ನಾಲ್ಕು ತಿಂಗಳ ಬಳಿಕ ಕೊರೋನಾ ಸಂಧಿಗ್ದ ಘಟ್ಟದಲ್ಲಿ ಆರಂಭವಾದ ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲಂಡ್ ತಂಡ ವೆಸ್ಟ್ ಇಂಡೀಸ್ ತಂಡವನ್ನು ಪರಾಭವಗೊಳಿಸಿ ಸರಣಿ ಕೈವಶ ಮಾಡಿಕೊಂಡಿದೆ.

 ಕ್ರಿಸ್ ವೋಕ್ಸ್ (50ಕ್ಕೆ 5) ಮತ್ತು ಸ್ಟುವರ್ಟ್ ಬ್ರಾಡ್ (36ಕ್ಕೆ 4) ಅವರ ಅತ್ಯಮೋಘ ಬೌಲಿಂಗ್ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ತಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 269  ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. 

ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಇಂಗ್ಲಂಡ್ 2-1 ಅಂತರದಲ್ಲಿ ವಶಪಡಿಸಿಕೊಂಡಿದೆ.

ಇಲ್ಲಿನ ಎಮಿರೇಟ್ಸ್ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ಪಂದ್ಯದ ಐದನೇ ದಿನವಾದ ಮಂಗಳವಾರ 399 ರನ್ ಗಳ ಕಠಿಣ ಗುರಿ ಬೆನ್ನಟ್ಟಿದ್ದ ವಿಂಡೀಸ್ ಪಡೆ, 37.1  ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 129 ರನ್ ಗಳಿಗೆ ಇನ್ನಿಂಗ್ಸ್ ಮುಕ್ತಾಯಗೊಳಿಸಿ ಸುಲಭವಾಗಿ ಆಂಗ್ಲರಿಗೆ ಶರಣಾಯಿತು.

ಇದರಿಂದಾಗಿ ವಿಸ್ಡನ್ ಟ್ರೋಫಿ ಉಳಿಸಿಕೊಳ್ಳುವ ಜೇಸನ್ ಹೋಲ್ಡರ್ ಬಳಗದ ಕನಸು ಭಗ್ನಗೊಂಡಿತು. 










  • Blogger Comments
  • Facebook Comments

0 comments:

Post a Comment

Item Reviewed: ಕೊರೋನಾ ಸಂಧಿಗ್ದ ಘಟ್ಟದಲ್ಲಿ ಸಾಗಿದ ಟೆಸ್ಟ್ ಸರಣಿ ಆಂಗ್ಲರ ಕೈ ವಶ, ಕ್ರಿಕೆಟ್ ದೈತ್ಯರಿಗೆ ವಿರೋಚಿತ ಸೋಲು Rating: 5 Reviewed By: karavali Times
Scroll to Top