ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಿ ಎಂದು ಯೋಗೀಶ್ವರ್ ಕೇಳಿಕೊಂಡಿದ್ದರು : ರಾಜಕೀಯ ವಲಯದಲ್ಲಿ ಡಿಕೆಶಿ ಹೊಸ ಬಾಂಬ್ - Karavali Times ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಿ ಎಂದು ಯೋಗೀಶ್ವರ್ ಕೇಳಿಕೊಂಡಿದ್ದರು : ರಾಜಕೀಯ ವಲಯದಲ್ಲಿ ಡಿಕೆಶಿ ಹೊಸ ಬಾಂಬ್ - Karavali Times

728x90

30 July 2020

ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಿ ಎಂದು ಯೋಗೀಶ್ವರ್ ಕೇಳಿಕೊಂಡಿದ್ದರು : ರಾಜಕೀಯ ವಲಯದಲ್ಲಿ ಡಿಕೆಶಿ ಹೊಸ ಬಾಂಬ್



ಬೆಂಗಳೂರು (ಕರಾವಳಿ ಟೈಮ್ಸ್) : ಮೇಲ್ಮನೆ‌ ಸದಸ್ಯರಾಗುವುದಕ್ಕಿಂತ ಹದಿನೈದು ದಿನ ಮೊದಲು ಸಿ ಪಿ ಯೋಗೀಶ್ವರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ನನಗೆ ಕೇಳಿಕೊಂಡಿದ್ದರು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ರಾಜಕೀಯ ವಲಯದಲ್ಲಿ ಮತ್ತೊಂದು ಹೊಸ ಬಾಂಬ್ ಸ್ಪೋಟಿಸಿದ್ದಾರೆ. 

 ಮೇಲ್ಮನೆ ಸ್ಥಾನಕ್ಕೇರುವ ಮೊದಲು ಬಿಜೆಪಿಯ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಗೆ ಸೇರಿಸಿಕೊಳ್ಳಿ ಎಂದು ಮನವಿ ಮಾಡಿದ್ದರು ಎಂದು ಡಿಕೆಶಿ ಹೇಳಿಕೆ ನೀಡಿದ್ದಾರೆ. ಡಿ.ಕೆ.ಶಿ ಹಾಗೂ ಕುಮಾರಸ್ವಾಮಿ ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡುತ್ತಾರೆ ಎಂದು ಸಿ.ಪಿ. ಯೋಗೇಶ್ವರ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಿವಕುಮಾರ್, ಹದಿನೈದು ದಿನಗಳ ಹಿಂದೆ ಸಿ.ಪಿ. ಯೋಗೇಶ್ವರ್, ತಮ್ಮನ್ನು ಭೇಟಿಯಾಗಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುತ್ತಾರೆ. 
ಹೀಗಾಗಿ ಕಾಂಗ್ರೆಸ್ ಸೇರಲು ಇಚ್ಛಿಸಿದ್ದೇನೆ. ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವಂತೆ ಮನವಿ ಮಾಡಿದ್ದರು. ಆದರೆ ನಾನು ಮಾತ್ರ ಇದಕ್ಕೆ ಒಪ್ಪದೆ, ನೀವು ಬಿಜೆಪಿಯಲ್ಲಿಯೇ ನಿಯತ್ತಾಗಿ ಇರುವಂತೆ ತಿಳಿ ಹೇಳಿದ್ದೆ. ಆದರೆ ಈಗ ಏಕೆ ನಮ್ಮ ಬಗ್ಗೆ ಹೀಗೆ ಮಾತನಾಡಿದ್ದಾರೆಯೋ ಗೊತ್ತಿಲ್ಲ. ಆಗ ಮನವಿ ಮಾಡಿ ಈಗ ನನ್ನ ವಿರುದ್ಧ ಮಾತನಾಡುತ್ತಿರುವ ಸಿ.ಪಿ. ಯೋಗೇಶ್ವರ್ ಗೆ ಬುದ್ಧಿ ಸ್ಥಿಮಿತದಲ್ಲಿ ಇಲ್ಲದಂತೆ ಕಾಣುತ್ತದೆ ಎಂದು ಪ್ರತಿಕ್ರಿಯಿಸಿದ್ದಾರೆ.









  • Blogger Comments
  • Facebook Comments

0 comments:

Post a Comment

Item Reviewed: ಕಾಂಗ್ರೆಸ್ಸಿಗೆ ಸೇರಿಸಿಕೊಳ್ಳಿ ಎಂದು ಯೋಗೀಶ್ವರ್ ಕೇಳಿಕೊಂಡಿದ್ದರು : ರಾಜಕೀಯ ವಲಯದಲ್ಲಿ ಡಿಕೆಶಿ ಹೊಸ ಬಾಂಬ್ Rating: 5 Reviewed By: karavali Times
Scroll to Top