ಸರಕಾರದ ವಿರುದ್ದ 2 ಸಾವಿರ ಕೋಟಿ ಭ್ರಷ್ಟಾಚಾರ ಆರೋಪಿಸಿದ ಸಿದ್ದು, ಡಿಕೆಶಿಗೆ ಬಿಜೆಪಿಯಿಂದ ಲೀಗಲ್ ನೋಟಿಸ್ - Karavali Times ಸರಕಾರದ ವಿರುದ್ದ 2 ಸಾವಿರ ಕೋಟಿ ಭ್ರಷ್ಟಾಚಾರ ಆರೋಪಿಸಿದ ಸಿದ್ದು, ಡಿಕೆಶಿಗೆ ಬಿಜೆಪಿಯಿಂದ ಲೀಗಲ್ ನೋಟಿಸ್ - Karavali Times

728x90

31 July 2020

ಸರಕಾರದ ವಿರುದ್ದ 2 ಸಾವಿರ ಕೋಟಿ ಭ್ರಷ್ಟಾಚಾರ ಆರೋಪಿಸಿದ ಸಿದ್ದು, ಡಿಕೆಶಿಗೆ ಬಿಜೆಪಿಯಿಂದ ಲೀಗಲ್ ನೋಟಿಸ್


ಬೆಂಗಳೂರು (ಕರಾವಳಿ ಟೈಮ್ಸ್) : ಕೊರೊನಾ ಉಪಕರಣ ಖರೀದಿಯಲ್ಲಿ ರಾಜ್ಯ ಸರಕಾರ 2 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆಸಿದೆ ಎಂದು ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಇದೀಗ ಬಿಜೆಪಿ ಲೀಗಲ್ ನೋಟಿಸ್ ಜಾರಿ ಮಾಡಲಾಗಿದೆ.

    ರಾಜ್ಯ ಸರಕಾರದ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಈ ಹಿಂದೆ ತಿಳಿಸಿತ್ತು. ಅದರಂತೆ ಸದ್ಯ ನೋಟಿಸ್ ಜಾರಿ ಮಾಡಲಾಗಿದ್ದು, ಮಾಹಿತಿಯೇ ಇಲ್ಲದೆ ಹೇಗೆ 2 ಸಾವಿರ ಕೋಟಿ ಆರೋಪ ಮಾಡಿದ್ದೀರಿ ಎಂದು ನೋಟಿಸ್‍ನಲ್ಲಿ ಪ್ರಶ್ನಿಸಿದೆ.

    ರಾಜ್ಯ ಸರಕಾರದ ನಾಲ್ಕು ಇಲಾಖೆಗಳಲ್ಲಿ ಕೊರೊನಾ ಹೆಸರಿನಲ್ಲಿ ಭ್ರಷ್ಟಾಚಾರ ನಡೆದಿದೆ. ಸುಮಾರು 2 ಸಾವಿರ ಕೋಟಿ ರೂಪಾಯಿ ಹೆಚ್ಚು ಅಕ್ರಮ ನಡೆದಿದೆ. ನಾವು ಸರಕಾರಕ್ಕೆ ಲೆಕ್ಕಕೊಡಿ ಎಂದು ಪತ್ರ ಬರೆದರೂ ಮಾಹಿತಿ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು. ಸರಕಾರ ಯಾವುದೇ ಮಾಹಿತಿ ನೀಡಿಲ್ಲ ಎಂದಾದರೆ 2 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂಬ ಬಗ್ಗೆ ಕಾರಣ ಹಾಗೂ ದಾಖಲೆ ನೀಡಿ, ಇಲ್ಲವಾದರೆ ನಿಮ್ಮ ಆರೋಪವನ್ನು ವಾಪಸ್ ಪಡೆಯಿರಿ. ಬೇಷರತ್ ಕ್ಷಮೆ ಯಾಚಿಸಿ ಎಂದು ನೋಟಿಸ್‍ನಲ್ಲಿ ಬಿಜೆಪಿ ಆಗ್ರಹಿಸಿದೆ.









  • Blogger Comments
  • Facebook Comments

0 comments:

Post a comment

Item Reviewed: ಸರಕಾರದ ವಿರುದ್ದ 2 ಸಾವಿರ ಕೋಟಿ ಭ್ರಷ್ಟಾಚಾರ ಆರೋಪಿಸಿದ ಸಿದ್ದು, ಡಿಕೆಶಿಗೆ ಬಿಜೆಪಿಯಿಂದ ಲೀಗಲ್ ನೋಟಿಸ್ Rating: 5 Reviewed By: karavali Times
Scroll to Top