ಮೆಲ್ಕಾರ್ : ರಾದ್ದಾಂತ ನಡೆಸುತ್ತಿದ್ದ ವ್ಯಕ್ತಿಯ ನಿಯಂತ್ರಿಸಲು ಬಂದ ಪೊಲೀಸರ ಮೇಲೆ ಹಲ್ಲೆ - Karavali Times ಮೆಲ್ಕಾರ್ : ರಾದ್ದಾಂತ ನಡೆಸುತ್ತಿದ್ದ ವ್ಯಕ್ತಿಯ ನಿಯಂತ್ರಿಸಲು ಬಂದ ಪೊಲೀಸರ ಮೇಲೆ ಹಲ್ಲೆ - Karavali Times

728x90

9 July 2020

ಮೆಲ್ಕಾರ್ : ರಾದ್ದಾಂತ ನಡೆಸುತ್ತಿದ್ದ ವ್ಯಕ್ತಿಯ ನಿಯಂತ್ರಿಸಲು ಬಂದ ಪೊಲೀಸರ ಮೇಲೆ ಹಲ್ಲೆ ಬಂಟ್ವಾಳ (ಕರಾವಳಿ ಟೈಮ್ಸ್) : ಇಲ್ಲಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮೆಲ್ಕಾರ್ ಎಂಬಲ್ಲಿ ಜುಲೈ 9 ರಂದು ಗುರುವಾರ ರಾತ್ರಿ ಲಾರಿ ಚಾಲಕರಿಗೆ ಹಾಗೂ ಸಾರ್ವಜನಿಕರಿಗೆ ಗಲಾಟೆಯಾಗುತ್ತಿದೆ ಎಂಬುದಾಗಿ ಬಂದ ಮಾಹಿತಿಯ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪನಿರೀಕ್ಷಕ ಶೈಲೇಶ್ ಟಿ ಅವರು ಇಲಾಖಾ ವಾಹನದಲ್ಲಿ ಪಿಸಿ 2449ನೇ ನಿರಂಜನ್ ಅವರೊಂದಿಗೆ ತೆರಳಿದ್ದು, ಸದರಿ ಸ್ಥಳಕ್ಕೆ ಎಚ್ ಸಿ ದೇವಪ್ಪ ಹಾಗೂ ಪಿಸಿ ಮಲ್ಲಿಕಸಾಬ್ ಅವರನ್ನು ಬರಹೇಳಿ ಸದ್ರಿ ಸ್ಥಳಕ್ಕೆ ಬೇಟಿ ನೀಡಲಾಗಿ ಸ್ಥಳದಲ್ಲಿ ಕೈಯಲ್ಲಿ ಕಬ್ಬಿಣದ ರಾಡ್ ಹಿಡಿದು ಗಲಾಟೆ ಮಾಡುತ್ತಿದ್ದ ಕಲ್ಲಡ್ಕ ಸಮೀಪದ ಬಲ್ಲೆಕೋಡಿ ನಿವಾಸಿ ಸುಲೈಮಾನ್ ಎಂಬವರ ಪುತ್ರ ಅಬ್ದುಲ್ ಸಲಾಂ (28) ಎಂಬಾತನ ಬಳಿ ತೆರಳಿ  ಗಲಾಟೆಯನ್ನು ನಿಯಂತ್ರಿಸಲು ಪ್ರಯತ್ನಿಸಿದಾಗ ಆತ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿ ಕೈಯಲ್ಲಿದ್ದ ಮಾರಕಾಯುಧವಾದ ಕಬ್ಬಿಣದ ರಾಡಿನಲ್ಲಿ ಏಕಾಏಕಿಯಾಗಿ ಕೊಲೆ ಮಾಡುವ ಉದ್ದೇಶದಿಂದ ಪೊಲೀಸರಿಗೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

 ಸ್ಥಳದಲ್ಲಿದ್ದ ಇಲಾಖಾ ವಾಹನವನ್ನು  ರಾಡ್ ನಿಂದ ಹೊಡೆದು ಕಾಲಿನಿಂದ ತುಳಿದು ಕೈಯಿಂದ ಹೊಡೆದು ಜಖಂಗೊಳಿಸಿರುತ್ತಾನೆ. ಈತನ ರಾದ್ದಾಂತದಿಂದ ಸುಮಾರು 10 ಸಾವಿರ ರೂಪಾಯಿ ನಷ್ಟ ಸಂಭವಿಸಿದ್ದು,  ಈ ಸಂದರ್ಭ ಸ್ಥಳದಲ್ಲಿ ಸೇರಿದ ಸಾರ್ವಜನಿಕರು ಹಲ್ಲೆ ನಡೆಯುವುದನ್ನು ತಡೆಯಲು ಬಂದು ಆರೋಪಿಗೆ ಸಾರ್ವಜನಿಕವಾಗಿ ಥಳಿಸಿದ್ದು ಈತನಿಗೂ ಗಾಯಗಳಾಗಿರುತ್ತವೆ. ಈತನನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದ್ದು,  ಹಲ್ಲೆಗೊಳಗಾದ ಸಹಾಯಕ ಪೊಲೀಸ್ ಉಪನಿರೀಕ್ಷಕ ಶೈಲೇಶ್ ಟಿ ಮತ್ತು ಇತರ 3 ಪೊಲೀಸರು ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತಾರೆ.

  ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ : 353, 504, 506, 332, 307,427  ಐಪಿಸಿ ಮತ್ತು 2ಎ ಕೆಪಿಡಿಎಲ್ ಪಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಮೆಲ್ಕಾರ್ : ರಾದ್ದಾಂತ ನಡೆಸುತ್ತಿದ್ದ ವ್ಯಕ್ತಿಯ ನಿಯಂತ್ರಿಸಲು ಬಂದ ಪೊಲೀಸರ ಮೇಲೆ ಹಲ್ಲೆ Rating: 5 Reviewed By: karavali Times
Scroll to Top