ಅಯೋಧ್ಯೆ : ರಾಮಮಂದಿರದ ಪ್ರಮುಖ ಅರ್ಚಕ ಹಾಗೂ 16 ಮಂದಿ ಭದ್ರತಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ - Karavali Times ಅಯೋಧ್ಯೆ : ರಾಮಮಂದಿರದ ಪ್ರಮುಖ ಅರ್ಚಕ ಹಾಗೂ 16 ಮಂದಿ ಭದ್ರತಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ - Karavali Times

728x90

30 July 2020

ಅಯೋಧ್ಯೆ : ರಾಮಮಂದಿರದ ಪ್ರಮುಖ ಅರ್ಚಕ ಹಾಗೂ 16 ಮಂದಿ ಭದ್ರತಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್



ಲಕ್ನೋ (ಕರಾವಳಿ ಟೈಮ್ಸ್) :
ಅಯೋಧ್ಯೆ ರಾಮಮಂದಿರದ ಪ್ರಮುಖ ಅರ್ಚಕ ಹಾಗೂ 16 ಮಂದಿ ಭದ್ರತಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಶಿಷ್ಯ ಪ್ರದೀಪ್ ದಾಸ್ ಅವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸದ್ಯ ಅವರನ್ನು ಹೋಂ ಐಸೋಲೇಷನ್‍ಗೆ ಒಳಪಡಿಸಲಾಗಿದೆ. ರಾಮ ಮಂದಿರದ ಉಸ್ತುವಾರಿಯನ್ನು ನಾಲ್ಕು ಮಂದಿ ಅರ್ಚಕರಿಗೆ ವಹಿಸಲಾಗಿದೆ. ಅದರಲ್ಲಿ ದಾಸ್ ಪ್ರಮುಖರಾಗಿದ್ದಾರೆ. ಸದ್ಯ ದೇವಾಲಯದಲ್ಲಿ ಕರ್ತವ್ಯದಲ್ಲಿದ್ದ 16 ಮಂದಿ ಭದ್ರತಾ ಸಿಬ್ಬಂದಿಗೆ ಕೂಡ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

    ಆಗಸ್ಟ್ 5 ರಂದು ರಾಮಂದಿರದ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮ ನೆರವೇರಲಿದ್ದು, ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಸಾಧ್ಯತೆ ಇದೆ. ಇದೀಗ ಕೊರೊನಾ ವೈರಸ್ ಭೀತಿಯಿಂದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಯಾರೂ ಅಯೋಧ್ಯಗೆ ಬರಬೇಡಿ. ಕಾರ್ಯಕ್ರಮವನ್ನು ಟಿಯಲ್ಲೇ ವೀಕ್ಷಿಸಿ ಎಂದು ರಾಮ ಮಂದಿರ ಟ್ರಸ್ಟ್ ಸದಸ್ಯರು ಈಗಾಗಲೇ ಮನವಿ ಮಾಡಿಕೊಂಡಿದ್ದಾರೆ.

    ಕೊರೊನಾ ಹಿನ್ನೆಲೆಯಲ್ಲಿ ಕೇವಲ 200 ಜನರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗುತ್ತಿದೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಮಾಡಿಕೊಡುವಂತೆ ಭಕ್ತರಲ್ಲಿ ವಿನಂತಿಸಿಕೊಳ್ಳಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ತಲಾ 50 ಮಂದಿಗೆ ಪ್ರತ್ಯೇಕ ಬ್ಲಾಕ್‍ಗಳನ್ನು ರಚಿಸಲಾಗುವುದು. ಅದರಲ್ಲಿ ಒಂದು ಬ್ಲಾಕ್ ರಾಜಕೀಯ ಮುಖಂಡರಿಗೆ ಮೀಸಲಿಟ್ಟರೆ, ಇನ್ನೊಂದು ಬ್ಲಾಕ್‍ನಲ್ಲಿ ದೇವಾಲಯದ ಆಡಳಿತಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಮತ್ತೊಂದು ಅರ್ಚಕರು ಮತ್ತು ಧಾರ್ಮಿಕ ಮುಖಂಡರಿಗೆ ಮೀಸಲಿಡಲಾಗುತ್ತಿದೆ ಎನ್ನಲಾಗಿದೆ.

    ಭೂಮಿ ಪೂಜೆ ಸಮಾರಂಭದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಮೊದಲಾದವರು ಭಾಗವಹಿಸಲಿದ್ದಾರೆ.






  • Blogger Comments
  • Facebook Comments

0 comments:

Post a Comment

Item Reviewed: ಅಯೋಧ್ಯೆ : ರಾಮಮಂದಿರದ ಪ್ರಮುಖ ಅರ್ಚಕ ಹಾಗೂ 16 ಮಂದಿ ಭದ್ರತಾ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ Rating: 5 Reviewed By: karavali Times
Scroll to Top