ಬಿಎಸ್ ವೈ ಆರೋಗ್ಯ ಸ್ಥಿರ : ಮಣಿಪಾಲ್ ಆಸ್ಪತ್ರೆ ಬುಲೆಟಿನ್ ಬಿಡುಗಡೆ - Karavali Times ಬಿಎಸ್ ವೈ ಆರೋಗ್ಯ ಸ್ಥಿರ : ಮಣಿಪಾಲ್ ಆಸ್ಪತ್ರೆ ಬುಲೆಟಿನ್ ಬಿಡುಗಡೆ - Karavali Times

728x90

9 August 2020

ಬಿಎಸ್ ವೈ ಆರೋಗ್ಯ ಸ್ಥಿರ : ಮಣಿಪಾಲ್ ಆಸ್ಪತ್ರೆ ಬುಲೆಟಿನ್ ಬಿಡುಗಡೆ

 


ಬೆಂಗಳೂರು (ಕರಾವಳಿ ಟೈಮ್ಸ್) : ಕೋವಿಡ್-19 ಸೋಂಕಿಗೆ ತುತ್ತಾಗಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮಣಿಪಾಲ್ ಆಸ್ಪತ್ರೆ ಮಾಹಿತಿ ನೀಡಿದೆ.


ಈ ಬಗ್ಗೆ ಪ್ರಕಟನೆ ಹೊರಡಿಸಿರುವ ಮಣಿಪಾಲ್ ಆಸ್ಪತ್ರೆ ವೈದ್ಯರ ತಂಡ, ಆಸ್ಪತ್ರೆಗೆ ದಾಖಲಾದ ದಿನದಿಂದ ಚಿಕಿತ್ಸೆಗೆ ಒಳಪಟ್ಟಿರುವ ಸಿಎಂ ಯಡಿಯೂರಪ್ಪ ಅವರ ಆರೋಗ್ಯ ಸ್ಥಿರವಾಗಿದೆ. ಚಿಕಿತ್ಸೆಗೆ ಯಡಿಯೂರಪ್ಪ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ನಮ್ಮ ಆಸ್ಪತ್ರೆಯ ತಜ್ಞ ವೈದ್ಯರು ಯಡಿಯೂರಪ್ಪನವರ ಜೊತೆ ನಿಕಟ ಸಂಪರ್ಕದಲ್ಲಿದ್ದು ಆರೋಗ್ಯದ ಬಗ್ಗೆ ಗಮನವಹಿಸಿದ್ದಾರೆ ಎಂದು ತಿಳಿಸಿದ್ದಾರೆ. 


ಕೊರೊನಾ ಪಾಸಿಟಿವ್ ವರದಿ ಬಂದ  ಹಿನ್ನೆಲೆಯಲ್ಲಿ ಆಗಸ್ಟ್ 2 ರಂದು ಸಿ.ಎಂ. ಯಡಿಯೂರಪ್ಪ ಅವರು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. 


ಆಸ್ಪತ್ರೆಯಿಂದಲೇ ಸಿಎಂ ಬಿಎಸ್ ವೈ ಅವರು ಕಡತಗಳಿಗೆ ಸಹಿ ಹಾಕುವ ಕಾರ್ಯದಲ್ಲಿ ತೊಡಗಿದ್ದು, ಪ್ರವಾಹ ಮತ್ತು ಕೊರೋನಾ ವೈರಸ್ ನಿರ್ವಹಣೆ ಕುರಿತಂತೆ ಆಸ್ಪತ್ರೆಯಿಂದಲೇ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಇದೇ ವೇಳೆ ಹೃದಯಾಘಾತದಿಂದ ನಿಧನರಾದ ಕರ್ನಾಟಕ ಆಡಳಿತ ಸೇವಾ ಅಧಿಕಾರಿ ಎಚ್. ಗಂಗಾಧರಯ್ಯ ಅವರ ನಿಧನಕ್ಕೆ ಸಿಎಂ ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಸರ್ಕಾರಿ ಸಕಲ ಗೌರವಗಳೊಂದಿಗೆ ಗಂಗಾಧರಯ್ಯ ಅವರ ಅಂತ್ಯಕ್ರಿಯೆ ನಡೆಸುವ ಕುರಿತು ಭರವಸೆ ನೀಡಿದ್ದಾರೆ. ಅಂತೆಯೇ ಗಂಗಾಧರಯ್ಯ ಅವರ ಕುಟುಂಬಸ್ಥರಿಗೆ 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದು, ಅವರ ಕುಟುಂಬಸ್ಥರಲ್ಲಿ ಒಬ್ಬರಿಗೆ ಸರ್ಕಾರ ಕೆಲಸ ನೀಡುವ ಕುರಿತು ಭರವಸೆ ನೀಡಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಬಿಎಸ್ ವೈ ಆರೋಗ್ಯ ಸ್ಥಿರ : ಮಣಿಪಾಲ್ ಆಸ್ಪತ್ರೆ ಬುಲೆಟಿನ್ ಬಿಡುಗಡೆ Rating: 5 Reviewed By: karavali Times
Scroll to Top