ಹ್ಯೂಮನ್ ವೆಲ್ಫೇರ್ ಫೌಂಡೇಶನ್ ವತಿಯಿಂದ ನಾಳೆ ಅಮ್ಮುಂಜೆಯಲ್ಲಿ ವಿದ್ಯಾರ್ಥಿ ಮಾಹಿತಿ ಕಾರ್ಯಾಗಾರ - Karavali Times ಹ್ಯೂಮನ್ ವೆಲ್ಫೇರ್ ಫೌಂಡೇಶನ್ ವತಿಯಿಂದ ನಾಳೆ ಅಮ್ಮುಂಜೆಯಲ್ಲಿ ವಿದ್ಯಾರ್ಥಿ ಮಾಹಿತಿ ಕಾರ್ಯಾಗಾರ - Karavali Times

728x90

29 August 2020

ಹ್ಯೂಮನ್ ವೆಲ್ಫೇರ್ ಫೌಂಡೇಶನ್ ವತಿಯಿಂದ ನಾಳೆ ಅಮ್ಮುಂಜೆಯಲ್ಲಿ ವಿದ್ಯಾರ್ಥಿ ಮಾಹಿತಿ ಕಾರ್ಯಾಗಾರ


 

ಬಂಟ್ವಾಳ (ಕರಾವಳಿ ಟೈಮ್ಸ್) : ಹ್ಯೂಮನ್ ವೆಲ್ಫೇರ್ ಫೌಂಡೇಶನ್ ಬಡಕಬೈಲು ಇದರ ಆಶ್ರಯದಲ್ಲಿ ಎಸ್ಸೆಸ್ಸೆಲ್ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಮಾಹಿತಿ ಕಾರ್ಯಾಗಾರ ಹಾಗೂ ಎಸ್ಸೆಸ್ಸೆಲ್ಸಿ-ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಆಗಸ್ಟ್ 30 ರಂದು ಭಾನುವಾರ (ನಾಳೆ) ಬೆಳಿಗ್ಗೆ 10 ಗಂಟೆಗೆ ಅಮ್ಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ. 

ಅಮ್ಮುಂಜೆ ಶಾಲಾ ಸಂಚಾಲಕ, ಮನಪಾ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ ಕಾರ್ಯಾಗಾರ ಉದ್ಘಾಟಿಸುವರು. ಹ್ಯೂಮನ್ ಫೌಂಡೇಶನ್ ಸ್ಥಾಪಕಾಧ್ಯಕ್ಷ ಇಬ್ರಾಹಿಂ ನವಾಝ್ ಅಧ್ಯಕ್ಷತೆ ವಹಿಸುವರು. ಬಂಟ್ವಾಳ ಗ್ರಾಮಾಂತರ ಪಿಎಸ್ಸೈ ಪ್ರಸನ್ನ ಎಂ.ಎಸ್., ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ನಿರ್ದೇಶಕ ದೇವದಾಸ ಹೆಗ್ಡೆ, ಮನಪಾ ಇಂಜಿನಿಯರ್ ಅಬ್ದುಲ್ ಖಾದರ್, ಅಮ್ಮುಂಜೆ ಶಾಲಾ ಮುಖ್ಯ ಶಿಕ್ಷಕಿ ಲೀನಾ ಪಿಂಟೋ, ಉದ್ಯಮಿಗಳಾದ ಮುಹಮ್ಮದ್ ಶರೀಫ್, ಎಂ.ಜಿ. ಮುಹಮ್ಮದ್ ರಿಯಾಝ್, ಉಮೇಶ್ ಕಸಾಪ ಸದಸ್ಯ ಡಿ.ಎ. ಅಬೂಬಕ್ಕರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. 

ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿಯನ್ನು ವಾಟ್ಸಪ್ ಸಂಖ್ಯೆ 9902090170 ಅಥವಾ 9535347529 ಅಥವಾ +971558921366 ಗೆ ಕಳುಹಿಸಬಹುದು. ವಿದ್ಯಾರ್ಥಿಗಳು ಈ ಮಾಹಿತಿ ಕಾರ್ಯಾಗಾರದ ಸದುಪಯೋಗಪಡೆದುಕೊಳ್ಳಬಹುದು ಎಂದು ಫೌಂಡೇಶನ್ ಪ್ರಕಟಣೆ ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಹ್ಯೂಮನ್ ವೆಲ್ಫೇರ್ ಫೌಂಡೇಶನ್ ವತಿಯಿಂದ ನಾಳೆ ಅಮ್ಮುಂಜೆಯಲ್ಲಿ ವಿದ್ಯಾರ್ಥಿ ಮಾಹಿತಿ ಕಾರ್ಯಾಗಾರ Rating: 5 Reviewed By: karavali Times
Scroll to Top