ಕೊಡಗಿನಲ್ಲಿ ಮುಂದುವರಿದ ಮಳೆಯಬ್ಬರ : ಭೂ ಕುಸಿತ ಭೀತಿಯಿಂದ ಜಿಲ್ಲಾಧಿಕಾರಿ ಕಛೇರಿ ಶಿಫ್ಟ್ - Karavali Times ಕೊಡಗಿನಲ್ಲಿ ಮುಂದುವರಿದ ಮಳೆಯಬ್ಬರ : ಭೂ ಕುಸಿತ ಭೀತಿಯಿಂದ ಜಿಲ್ಲಾಧಿಕಾರಿ ಕಛೇರಿ ಶಿಫ್ಟ್ - Karavali Times

728x90

7 August 2020

ಕೊಡಗಿನಲ್ಲಿ ಮುಂದುವರಿದ ಮಳೆಯಬ್ಬರ : ಭೂ ಕುಸಿತ ಭೀತಿಯಿಂದ ಜಿಲ್ಲಾಧಿಕಾರಿ ಕಛೇರಿ ಶಿಫ್ಟ್

 


ಮಡಿಕೇರಿ (ಕರಾವಳಿ ಟೈಮ್ಸ್) : ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಜಿಲ್ಲೆಯ ವಿವಿಧೆಡೆ ಭೂ ಕುಸಿತ ಸಂಭವಿಸುತ್ತಿದೆ. ಕೊಡಗು ಜಿಲ್ಲಾಧಿಕಾರಿ ಕಚೇರಿ ಬಳಿಯೂ ಭೂ ಕುಸಿತ ಉಂಟಾಗುತ್ತಿದ್ದು, ಇದರಿಂದ ಕಚೇರಿಯನ್ನು ತಾತ್ಕಾಲಿಕ ಸ್ಥಳಾಂತರ ಮಾಡಲಾಗಿದೆ.


ಮಡಿಕೇರಿ - ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿರುವುದರಿಂದ ತಜ್ಞರ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಪ್ರಮುಖ ವಿಭಾಗಗಳನ್ನು ಸ್ಥಳಾಂತರ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಮಡಿಕೇರಿ ನಗರಸಭಾ ಕಾಯಾ೯ಲಯಕ್ಕೆ ಪ್ರಕೃತಿ ವಿಕೋಪ ಸಂಬಂಧಿತ ಕಚೇರಿ ಸ್ಥಳಾಂತರ ಮಾಡಲಾಗಿದ್ದು, ಉಳಿದ ಇಲಾಖಾ ಕಚೇರಿಗಳು ಸದ್ಯಕ್ಕೆ ಬಂದ್ ಮಾಡಲಾಗಿದೆ. ನಗರಸಭಾ ಕಾಯಾ೯ಲಯದಿಂದಲೇ ಮಳೆ ಇಳಿಮುಖಗೊಳ್ಳುವವರೆಗೆ ಜಿಲ್ಲಾಧಿಕಾರಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಕಛೇರಿ ಪ್ರಕಟಣೆ ತಿಳಿಸಿದೆ.


2013 ರಲ್ಲಿ ಇಲ್ಲಿನ ಜಿಲ್ಲಾಧಿಕಾರಿ ಕಛೇರಿ ಕಟ್ಟಡ ಉದ್ಘಾಟನೆಗೊಂಡಿದ್ದು, ಒಟ್ಟು ಮೂರು ಮಹಡಿಗಳಿವೆ. ಇಲ್ಲಿಗೆ ಸಮೀಪದ ಬರೆ ಕುಸಿತ ಉಂಟಾಗಿರುವುದರಿಂದ ಕಟ್ಟಡಕ್ಕೂ ಇದರಿಂದ ಸಮಸ್ಯೆಯಾಗುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ನಗರಸಭೆಗೆ ಜಿಲ್ಲಾಡಳಿತದ ಆಡಳಿತ ಕಚೇರಿಯನ್ನು ಸ್ಥಳಾಂತರಿಸಲಾಗಿದೆ. ಅದೇ ರೀತಿ ಕಂಟ್ರೋಲ್‌ ರೂಂ ಕೂಡ ನಗರಸಭೆಗೆ ಸ್ಥಳಾಂತರಗೊಂಡಿದೆ. 


ಕೊಡಗಿನಲ್ಲಿ ಈ ಬಾರಿಯು ಭಾರೀ ಮಳೆ ಸುರಿಯುತ್ತಿದೆ. ಮೊನ್ನೆ ತಲ ಕಾವೇರಿ ಅರ್ಚಕರ ಮನೆ ಮೇಲೆ ಭೂ ಕುಸಿತ ಉಂಟಾಗಿದ್ದು ಸಂಪೂರ್ಣ ಮನೆ ನೆಲಸಮವಾಗಿತ್ತು. ಅರ್ಚಕರು ಕೂಡ ಸಾವನಪ್ಪಿದ್ದರು. ಬಿಡುವಿಲ್ಲದೆ ಮಳೆ ಸುರಿಯುತ್ತಿರುವುದರಿಂದ ಕಾರ್ಯಾಚರಣೆ ಕೂಡ ಕಷ್ಟವಾಗಿದೆ.   2018ರಲ್ಲೂ ಭಾರೀ ಮಳೆ ಸುರಿದ ಪರಿಣಾಮ ಹಲವಾರು ಮಂದಿ ಮನೆ, ಮಠ ಕಳೆದುಕೊಂಡಿದ್ದರು. ಪ್ರಾಣ ಹಾನಿ ಕೂಡಾ ಸಂಭವಿಸಿತ್ತು.   • Blogger Comments
  • Facebook Comments

0 comments:

Post a Comment

Item Reviewed: ಕೊಡಗಿನಲ್ಲಿ ಮುಂದುವರಿದ ಮಳೆಯಬ್ಬರ : ಭೂ ಕುಸಿತ ಭೀತಿಯಿಂದ ಜಿಲ್ಲಾಧಿಕಾರಿ ಕಛೇರಿ ಶಿಫ್ಟ್ Rating: 5 Reviewed By: karavali Times
Scroll to Top