ಅಂತರಾಷ್ಟ್ರೀಯ ಪ್ರಯಾಣಿಕರ ಹೊಸ ಮಾರ್ಗ ಸೂಚಿ ಪ್ರಕಟಿಸಿದ ಗೃಹ ಸಚಿವಾಲಯ - Karavali Times ಅಂತರಾಷ್ಟ್ರೀಯ ಪ್ರಯಾಣಿಕರ ಹೊಸ ಮಾರ್ಗ ಸೂಚಿ ಪ್ರಕಟಿಸಿದ ಗೃಹ ಸಚಿವಾಲಯ - Karavali Times

728x90

3 August 2020

ಅಂತರಾಷ್ಟ್ರೀಯ ಪ್ರಯಾಣಿಕರ ಹೊಸ ಮಾರ್ಗ ಸೂಚಿ ಪ್ರಕಟಿಸಿದ ಗೃಹ ಸಚಿವಾಲಯ



ನವದೆಹಲಿ (ಕರಾವಳಿ‌ ಟೈಮ್ಸ್) : ಭಾರತಕ್ಕೆ ಬರುವ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರಿಗೆ ಗೃಹ ಸಚಿವಾಲಯ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ. ಕಳೆದ ಮೇ 24ರಂದು ಹೊರಡಿಸಲಾಗಿದ್ದ ಮಾರ್ಗಸೂಚಿಗೆ ಕೆಲವು ಬದಲಾವಣೆಗಳನ್ನು ಮಾಡಿ ಪರಿಷ್ಕೃತ ಮಾರ್ಗಸೂಚಿ ಹೊರಡಿಸಲಾಗಿದ್ದು, ಆಗಸ್ಟ್ 8 ರಿಂದ ಜಾರಿಗೆ ಬರಲಿದೆ.

ಪರಿಷ್ಕೃತ ಮಾರ್ಗಸೂಚಿಯಲ್ಲಿ ಮುಖ್ಯವಾದ ಬದಲಾವಣೆ ಎಂದರೆ ಪ್ರಯಾಣಿಕರು ಭಾರತಕ್ಕೆ ಬಂದಿಳಿದ ನಂತರ  ಕೊರೋನಾ ನೆಗೆಟಿವ್ ವರದಿ ತೋರಿಸಿದರೆ ಸಾಂಸ್ಥಿಕ ಕ್ವಾರಂಟೈನ್ ನಿಂದ ವಿನಾಯಿತಿ ಪಡೆದುಕೊಳ್ಳಬಹುದು. ಪ್ರಯಾಣಕ್ಕೆ 96 ಗಂಟೆ ಮೊದಲು ಕೋವಿಡ್ ತಪಾಸಣೆ ಮಾಡಿಸಿ ಅದರಲ್ಲಿ ನೆಗೆಟಿವ್ ಎಂದು ಬಂದಿರಬೇಕು.

ಆಗಸ್ಟ್ 31ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಈ ಹಿಂದೆ ಸಾಗರೋತ್ತರ ವಿಮಾನ ಹಾರಾಟಗಳನ್ನು ಜುಲೈ 30ರವರೆಗೆ ಮಾತ್ರ ನಿರ್ಬಂಧಿಸಲಾಗಿತ್ತು. ಇದೀಗ ಅದನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ. ಈ ನಿರ್ಬಂಧ ಅಂತಾರಾಷ್ಟ್ರೀಯ ಕಾರ್ಗೊ ಕಾರ್ಯಾಚರಣೆ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ ಅನುಮೋದನೆ ನೀಡಿರುವ ವಿಶೇಷ ವಿಮಾನಗಳಿಗೆ ಅನ್ವಯವಾಗುವುದಿಲ್ಲ.

ಹೊಸ ಮಾರ್ಗಸೂಚಿಯ ನಿಯಮಗಳು

1. ಪ್ರಯಾಣಕ್ಕೆ 72 ಗಂಟೆ ಮುನ್ನ newdelhiairport.in ವೆಬ್ ಸೈಟ್ ನಲ್ಲಿ ಪ್ರಯಾಣಿಕರು ಸ್ವಘೋಷಿತ ಅರ್ಜಿಯನ್ನು ತುಂಬಬೇಕು.

2. ವೆಬ್ ಸೈಟ್ ನಲ್ಲಿ ತಾವು ಪ್ರಯಾಣ ಮಾಡಿದ ನಂತರ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಗೆ ಒಳಪಡುತ್ತೇವೆ ಎಂದು ಬರೆದುಕೊಡಬೇಕು. ಅಂದರೆ ಅದು 7 ದಿನ ಪಾವತಿ ಮಾಡಿದ ಸಾಂಸ್ಥಿಕ ಕ್ವಾರಂಟೈನ್ ಮತ್ತು ಉಳಿದ 7 ದಿನ ಹೋಂ ಕ್ವಾರಂಟೈನ್.

3. ನೆಗೆಟಿವ್ ಆರ್ ಟಿ-ಪಿಸಿಆರ್ ತಪಾಸಣೆ ವರದಿಯನ್ನು ಪ್ರಯಾಣ ಮಾಡಿ ಬಂದ ನಂತರ ತೋರಿಸಿದರೆ ಸಾಂಸ್ಥಿಕ ಕ್ವಾಂರಟೈನ್ ನಿಂದ ವಿನಾಯ್ತಿ ಪಡೆಯಬಹುದು.

4. ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣ ಮಾಡಿ ಬಂದಿಳಿದ ನಂತರ ರಾಜ್ಯ ಸರ್ಕಾರಗಳು ತಮ್ಮ ಶಿಷ್ಟಾಚಾರ ಪ್ರಕಾರ ಕ್ವಾರಂಟೈನ್ ಗೆ ಒಳಪಡಿಸುವ ಪ್ರಕ್ರಿಯೆ ಮಾಡಬಹುದು.

5. ಪ್ರಯಾಣಿಕರು ಬಂದಿಳಿದ ನಂತರ ಸ್ಕ್ರೀನಿಂಗ್ ಮಾಡುವಾಗ ಕೊರೋನಾ ಲಕ್ಷಣ ಕಂಡುಬಂದರೆ ತಕ್ಷಣವೇ ಪ್ರತ್ಯೇಕಿಸಿ ಶಿಷ್ಟಾಚಾರ ಪ್ರಕಾರ ವೈದ್ಯಕೀಯ ಆರೈಕೆಗೆ ಕರೆದೊಯ್ಯಲಾಗುತ್ತದೆ.
  • Blogger Comments
  • Facebook Comments

0 comments:

Post a Comment

Item Reviewed: ಅಂತರಾಷ್ಟ್ರೀಯ ಪ್ರಯಾಣಿಕರ ಹೊಸ ಮಾರ್ಗ ಸೂಚಿ ಪ್ರಕಟಿಸಿದ ಗೃಹ ಸಚಿವಾಲಯ Rating: 5 Reviewed By: karavali Times
Scroll to Top