ಪರೀಕ್ಷಾ ಕೇಂದ್ರಗಳ ಹೆಚ್ಚಳ ಮೂಲಕ ನೀಟ್, ಜೆಇಇ ಪರೀಕ್ಷೆ ನಡೆಸಲಾಗುವುದು : ಕೇಂದ್ರ ಸರಕಾರ - Karavali Times ಪರೀಕ್ಷಾ ಕೇಂದ್ರಗಳ ಹೆಚ್ಚಳ ಮೂಲಕ ನೀಟ್, ಜೆಇಇ ಪರೀಕ್ಷೆ ನಡೆಸಲಾಗುವುದು : ಕೇಂದ್ರ ಸರಕಾರ - Karavali Times

728x90

26 August 2020

ಪರೀಕ್ಷಾ ಕೇಂದ್ರಗಳ ಹೆಚ್ಚಳ ಮೂಲಕ ನೀಟ್, ಜೆಇಇ ಪರೀಕ್ಷೆ ನಡೆಸಲಾಗುವುದು : ಕೇಂದ್ರ ಸರಕಾರ



ನವದೆಹಲಿ (ಕರಾವಳಿ ಟೈಮ್ಸ್) : ಕೊರೋನಾ ವೈರಸ್ ನಡುವೆ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ಮತ್ತು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಯನ್ನು ಮುಂದೂಡಲಾಗುವುದಿಲ್ಲ. ಬದಲಿಗೆ ಸಾಮಾಜಿಕ ಅಂತರ ಕಾಪಾಡಲು ಪೂರಕವಾಗುವಂತೆ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಕೇಂದ್ರ ಸರಕಾರ ಹೇಳಿದೆ.

ಕೇಂದ್ರ ಶಿಕ್ಷಣ ಸಚಿವಾಲಯದಡಿ ಬರುವ ರಾಷ್ಟ್ರೀಯ ಪರೀಕ್ಷಾ ವಿಭಾಗ ಈ ಪರೀಕ್ಷೆಗಳನ್ನು ನಡೆಸುವ ಉಸ್ತುವಾರಿ ವಹಿಸಿಕೊಂಡಿದ್ದು ಈ ಸಂಬಂಧ ನಿನ್ನೆ ಹೇಳಿಕೆ ಬಿಡುಗಡೆ ಮಾಡಿ ಜೆಇಇ ಪರೀಕ್ಷೆಗೆ ಈಗಿರುವ 570 ಪರೀಕ್ಷಾ ಕೇಂದ್ರಗಳಿಂದ 660ಕ್ಕೆ ಹೆಚ್ಚಿಸಲಾಗುವುದು ಮತ್ತು ನೀಟ್ ಪರೀಕ್ಷೆಗೆ 546ಕ್ಕೆ ಪರೀಕ್ಷಾ ಕೇಂದ್ರಗಳನ್ನು ಏರಿಕೆ ಮಾಡಲಾಗುವುದು ಎಂದು ಹೇಳಿದರು.

ಜೆಇಇ ಪರೀಕ್ಷೆ ಸೆಪ್ಟೆಂಬರ್ 1 ರಿಂದ 6 ರವರೆಗೆ ನಡೆಯಲಿದೆ. ನೀಟ್ ಪರೀಕ್ಷೆ ಸೆಪ್ಟೆಂಬರ್ 13 ರಂದು ನಡೆಯಲಿದೆ. ಈ ಬಾರಿ ದೇಶಾದ್ಯಂತ ಕ್ರಮವಾಗಿ 8.58 ಲಕ್ಷ ಹಾಗೂ 15.97 ಲಕ್ಷ ಅಭ್ಯರ್ಥಿಗಳು ಜೆಇಇ ಮತ್ತು ನೀಟ್ ಪರೀಕ್ಷೆಗೆ ಹಾಜರಾಗಲಿದ್ದಾರೆ.







  • Blogger Comments
  • Facebook Comments

0 comments:

Post a Comment

Item Reviewed: ಪರೀಕ್ಷಾ ಕೇಂದ್ರಗಳ ಹೆಚ್ಚಳ ಮೂಲಕ ನೀಟ್, ಜೆಇಇ ಪರೀಕ್ಷೆ ನಡೆಸಲಾಗುವುದು : ಕೇಂದ್ರ ಸರಕಾರ Rating: 5 Reviewed By: karavali Times
Scroll to Top