ಕಾಲಿನಲ್ಲೇ ಹಲಸಿನ ಮೂಡೆ ಕಟ್ಟಿ ಮತ್ತೆ ಸುದ್ದಿಯಾದ ಬಂಟ್ವಾಳದ ಕೌಶಿಕ್ - Karavali Times ಕಾಲಿನಲ್ಲೇ ಹಲಸಿನ ಮೂಡೆ ಕಟ್ಟಿ ಮತ್ತೆ ಸುದ್ದಿಯಾದ ಬಂಟ್ವಾಳದ ಕೌಶಿಕ್ - Karavali Times

728x90

23 August 2020

ಕಾಲಿನಲ್ಲೇ ಹಲಸಿನ ಮೂಡೆ ಕಟ್ಟಿ ಮತ್ತೆ ಸುದ್ದಿಯಾದ ಬಂಟ್ವಾಳದ ಕೌಶಿಕ್






ಬಂಟ್ವಾಳ (ಕರಾವಳಿ ಟೈಮ್ಸ್) : ಕೈಗಳ ಅಂಗ ವೈಕಲ್ಯತೆ ಹೊಂದಿ ಕಾಲಿನಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣನಾಗಿ ನಾಡಿನಾದ್ಯಂತ ಸುದ್ದಿಯಾಗಿದ್ದ ತಾಲೂಕಿನ ಕಂಚಿಕಾರಪೇಟೆ ನಿವಾಸಿ ರಾಜೇಶ್ ಆಚಾರ್ಯ ಹಾಗೂ ಜಲಜಾಕ್ಷಿ ದಂಪತಿಯ ಪುತ್ರ, ಬಂಟ್ವಾಳ ಎಸ್ ವಿ ಎಸ್ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ ಕೌಶಿಕ್ ಇದೀಗ ಗಣೇಶ ಚತುರ್ಥಿ ಹಬ್ಬದ ದಿನ ಹಲಸಿನ ಕಡುಬು ತಿಂಡಿ ತಯಾರಿಸುವ ಸಲುವಾಗಿ ಮನೆಯಲ್ಲಿ ಹಲಸಿನ ಎಲೆಯ ಮೂಡೆಯನ್ನು ಕಾಲಿನಲ್ಲೇ ಕಟ್ಟುವ ಮೂಲಕ ಮತ್ತೆ ಸುದ್ದಿಯಾಗಿದ್ದಾನೆ. 

ಪ್ರತಿ ವರ್ಷವೂ ಅಷ್ಟಮಿ ಹಾಗೂ ಗಣೇಶ್ ಚತುರ್ಥು ದಿನ ಮನೆಯಲ್ಲಿ ತಯಾರಿಸುವ ಹಲಸಿನ ಕಡುಗೆ ತಯಾರಿಗೆ ಈ ಬಾರಿ ಕೌಶಿಕ್ ತನ್ನ ಕಾಲಿನ ಮೂಲಕವೇ ಹಲಸಿನ ಎಲೆಯ ಮೂಡೆ (ಕೊಟ್ಟಿಗೆ) ಕಟ್ಟಿದ್ದಾನೆ. ಈತ ಕಾಲಿನಲ್ಲೇ ಮೂಡೆ ಕಟ್ಟುವ ದೃಶ್ಯವನ್ನು ವೀಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಹರಿಯಬಿಡಲಾಗಿದೆ. ಈ ವೀಡಿಯೋ ಇದೀಗ ಜಾಲ ತಾಣಗಳಲ್ಲಿ ಸಕತ್ ವೈರಲ್ ಆಗಿದ್ದು, ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 






  • Blogger Comments
  • Facebook Comments

0 comments:

Post a Comment

Item Reviewed: ಕಾಲಿನಲ್ಲೇ ಹಲಸಿನ ಮೂಡೆ ಕಟ್ಟಿ ಮತ್ತೆ ಸುದ್ದಿಯಾದ ಬಂಟ್ವಾಳದ ಕೌಶಿಕ್ Rating: 5 Reviewed By: karavali Times
Scroll to Top