ಅಮಿತ್ ಷಾಗೆ‌‌ ಕೊರೋನಾ‌ ಪಾಸಿಟಿವ್ : ಶೀಘ್ರ ಗುಣಮುಖರಾಗಲು ಗಣ್ಯರಿಂದ‌ ಹಾರೈಕೆ - Karavali Times ಅಮಿತ್ ಷಾಗೆ‌‌ ಕೊರೋನಾ‌ ಪಾಸಿಟಿವ್ : ಶೀಘ್ರ ಗುಣಮುಖರಾಗಲು ಗಣ್ಯರಿಂದ‌ ಹಾರೈಕೆ - Karavali Times

728x90

2 August 2020

ಅಮಿತ್ ಷಾಗೆ‌‌ ಕೊರೋನಾ‌ ಪಾಸಿಟಿವ್ : ಶೀಘ್ರ ಗುಣಮುಖರಾಗಲು ಗಣ್ಯರಿಂದ‌ ಹಾರೈಕೆ



ನವದೆಹಲಿ (ಕರಾವಳಿ‌ ಟೈಮ್ಸ್) : ಕೊರೊನಾ ಸೋಂಕು ತಗುಲಿದ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮಾಡುತ್ತಿದ್ದಂತೆ ಹಲವು ಗಣ್ಯರು ಶುಭ ಹಾರೈಸಿದ್ದು, ಶೀಘ್ರ ಗುಣ ಮುಖರಾಗಲು ಹಾರೈಸಿದ್ದಾರೆ.

 ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವು ಗಣ್ಯರು ಟ್ವೀಟ್ ಮಾಡಿ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿದ್ದಾರೆ.

ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿ ಅಮಿತ್ ಶಾ ಅವರು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೊನಾ ಸೋಂಕು ತಗುಲಿರುವ ಸುದ್ದಿ ತಿಳಿಯಿತು. ಅವರು ಬೇಗ ಗುಣಮುಖರಾಗಲಿ ಎಂದು ಈಶ್ವರನಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ತಮಗೆ ಕೊರೊನಾ ಪಾಸಿಟಿವ್ ಬಂದಿರುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಮಧ್ಯಾಹ್ನ ಟ್ವೀಟ್ ಮಾಡಿ ತಿಳಿಸಿದ್ದರು. ಕೊರೊನಾ ಲಕ್ಷಣಗಳು ಕಂಡು ಬಂದ ಹಿನ್ನಲೆ ಟೆಸ್ಟ್ ಮಾಡಿಸಲಾಗಿತ್ತು. ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ. ನಾನು ಆರೋಗ್ಯವಾಗಿದ್ದೇನೆ. ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ತಮ್ಮ ಸಂಪರ್ಕಕ್ಕೆ ಬಂದವರು ಐಸೂಲೇಷನ್ ಆಗುವಂತೆ ಅಮಿತ್ ಶಾ ಮನವಿ ಮಾಡಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಅಮಿತ್ ಷಾಗೆ‌‌ ಕೊರೋನಾ‌ ಪಾಸಿಟಿವ್ : ಶೀಘ್ರ ಗುಣಮುಖರಾಗಲು ಗಣ್ಯರಿಂದ‌ ಹಾರೈಕೆ Rating: 5 Reviewed By: karavali Times
Scroll to Top