ಪ್ರಧಾನಿ ಮನ್ ಕೀ ಬಾತ್ ವೀಡಿಯೋ 5.60 ಲಕ್ಷ ಮಂದಿಯಿಂದ ಡಿಸ್ ಲೈಕ್ ! - Karavali Times ಪ್ರಧಾನಿ ಮನ್ ಕೀ ಬಾತ್ ವೀಡಿಯೋ 5.60 ಲಕ್ಷ ಮಂದಿಯಿಂದ ಡಿಸ್ ಲೈಕ್ ! - Karavali Times

728x90

31 August 2020

ಪ್ರಧಾನಿ ಮನ್ ಕೀ ಬಾತ್ ವೀಡಿಯೋ 5.60 ಲಕ್ಷ ಮಂದಿಯಿಂದ ಡಿಸ್ ಲೈಕ್ !



ನವದೆಹಲಿ (ಕರಾವಳಿ ಟೈಮ್ಸ್) : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಭಾನುವಾರದ ‘ಮನ್ ಕೀ ಬಾತ್’ ಎಪಿಸೋಡ್ ವಿಡಿಯೋ ಬಿಜೆಪಿಯ ಯೂ ಟ್ಯೂಬ್ ಚಾನೆಲ್ಲಿನಲ್ಲಿ 5.60 ಲಕ್ಷ ಮಂದಿ ಡಿಸ್ ಲೈಕ್ ಮಾಡಿಕೊಂಡಿದ್ದಾರೆ. ಮೋದಿ ಅವರ ಆಗಸ್ಟ್ ತಿಂಗಳ ಆಕಾಶವಾಣಿ ಕಾರ್ಯಕ್ರಮ ಬಿಜೆಪಿಯ ಯು ಟ್ಯೂಬ್ ಚಾನೆಲ್ಲಿನಲ್ಲಿ ಅತಿ ಹೆಚ್ಚು ಡಿಸ್ ಲೈಕ್ ಪಡೆದ ವಿಡಿಯೋಗಳಲ್ಲಿ ಒಂದಾಗಿದೆ. 

68ನೇ ಮನ್ ಕೀ ಬಾತ್ ಆವೃತ್ತಿಯಲ್ಲಿ ಜೆಇಇ ಮತ್ತು ನೀಟ್ ಪರೀಕ್ಷೆ ಬಗ್ಗೆ ಪ್ರಧಾನಿ ಪ್ರಸ್ತಾಪ ಮಾಡದಿರುವುದನ್ನು ಟ್ವೀಟರ್ ಹಾಗೂ ಯು ಟ್ಯೂಬ್‍ನಲ್ಲಿ ವಿದ್ಯಾರ್ಥಿ ಸಮೂಹ ಸಹಿತ ಹಲವು ಮಂದಿ ಪ್ರಶ್ನಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಉದ್ಯೋಗ, ಸಣ್ಣ ಕೈಗಾರಿಕೆಗಳು, ಶಿಕ್ಷಣದ ಬಗ್ಗೆ ಮಾತನಾಡಿಲ್ಲ, ನೀವು ದೇಶದ ಪ್ರಧಾನ ಮಂತ್ರಿ ನಮಗೆ ಮನ್ ಕಿ ಬಾತ್ ಅಗತ್ಯವಿಲ್ಲ, ನಾವು ನಿಮ್ಮನ್ನು ಆಯ್ಕೆ ಮಾಡಿದ್ದು, ಕರ್ತವ್ಯವನ್ನು ಪೂರ್ಣಗೊಳಿಸಬೇಕಾದ ಅಗತ್ಯವಿದೆ ಎಂದು ಒಬ್ಬರು ಪ್ರತಿಕ್ರಿಯಿಸಿ ಬರೆದುಕೊಂಡಿದ್ದಾರೆ. 

ಪ್ರಧಾನಿ ಮೋದಿ ಅವರೇ ಸಾಕು, ಸಾಕು, ಬರೀ ಮಾತನಾಡುವುದನ್ನು ಬಿಟ್ಟು ಅಭಿವೃದ್ಧಿಯ ಕಡೆಗೆ ಗಮನ ಹರಿಸಿ ಎಂದು ಮತ್ತೊಬ್ಬರು ಬರೆದಿದ್ದಾರೆ.

ಜಿಇಇ ಮತ್ತು ನೀಟ್ ಪರೀಕ್ಷೆ ಮುಂದೂಡಿರುವುದನ್ನು ಬಿಟ್ಟು ಆಟಿಕೆಗಳು, ಶ್ವಾನ ತಳಿಗಳ ಬಗ್ಗೆ ಮಾತನಾಡಿರುವುದಕ್ಕೆ ಅನೇಕ ಮಂದಿ ಮೋದಿ ವಿರುದ್ಧ ಅಸಮಾಧಾನ ಹೊರಗೆಡವಿದ್ದಾರೆ. ಮೋದಿ ಅವರ ಭಾನುವಾರದ ಮನ್ ಕಿ ಬಾತ್ ವಿಡಿಯೋ  2,182,558 ವೀಕ್ಷಣೆ ಪಡೆದಿದ್ದು, 83  ಸಾವಿರ ಲೈಕ್ ಹಾಗೂ 5.60 ಲಕ್ಷ ಡಿಸ್ ಲೈಕ್ ಪಡೆದುಕೊಂಡಿದೆ.








  • Blogger Comments
  • Facebook Comments

0 comments:

Post a Comment

Item Reviewed: ಪ್ರಧಾನಿ ಮನ್ ಕೀ ಬಾತ್ ವೀಡಿಯೋ 5.60 ಲಕ್ಷ ಮಂದಿಯಿಂದ ಡಿಸ್ ಲೈಕ್ ! Rating: 5 Reviewed By: karavali Times
Scroll to Top