ಫೇಸ್ ಬುಕ್ ನಲ್ಲಿ ಶಾಸಕರ ಸಂಬಂಧಿಯಿಂದ ಪ್ರವಾದಿ ನಿಂದನೆ ಆರೋಪ : ಶಾಸಕರ ಮನೆ, ಕಛೇರಿ ಮೇಲೆ ದಾಳಿ ನಡೆಸಿದ ಗುಂಪು - Karavali Times ಫೇಸ್ ಬುಕ್ ನಲ್ಲಿ ಶಾಸಕರ ಸಂಬಂಧಿಯಿಂದ ಪ್ರವಾದಿ ನಿಂದನೆ ಆರೋಪ : ಶಾಸಕರ ಮನೆ, ಕಛೇರಿ ಮೇಲೆ ದಾಳಿ ನಡೆಸಿದ ಗುಂಪು - Karavali Times

728x90

11 August 2020

ಫೇಸ್ ಬುಕ್ ನಲ್ಲಿ ಶಾಸಕರ ಸಂಬಂಧಿಯಿಂದ ಪ್ರವಾದಿ ನಿಂದನೆ ಆರೋಪ : ಶಾಸಕರ ಮನೆ, ಕಛೇರಿ ಮೇಲೆ ದಾಳಿ ನಡೆಸಿದ ಗುಂಪು

 

ಬೆಂಗಳೂರು (ಕರಾವಳಿ ಟೈಮ್ಸ್) : ಪುಲಿಕೇಶಿ ನಗರದ ಕಾಂಗ್ರೆಸ್‌ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ ಮತ್ತು ಕಚೇರಿ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದೆ.


ಹದಿನೈದಕ್ಕೆ ಹೆಚ್ಚು ಕಿಡಿಗೇಡಿಗಳಿಂದ ಶಾಸಕರ ಮನೆ ಮೇಲೆ ದಾಳಿ ನಡೆಸಲಾಗಿದೆ. 


 ಶಾಸಕರ ಸೋದರಳಿಯ ನವೀನ್ ಎಂಬಾತ ಫೇಸ್​ಬುಕ್ ನಲ್ಲಿ ಇಸ್ಲಾಮಿನ ಪ್ರವಾದಿಗಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆಂದು ಆರೋಪಿಸಿ ನೂರಾರು ಜನರು ನಗರದ ಕೆಜಿ ಹಳ್ಳಿ ಪೋಲೀಸ್ ಠಾಣೆ ಎದುರು ಜಮಾಯಿಸಿದ್ದು ನವೀನ್ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.


ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು ಪರಿಸ್ಥಿತಿ ಉದ್ವಿಗ್ನವಾಗಿದೆ, ಸಧ್ಯ ಜನರನ್ನು ಸಮಾಧಾನಪಡಿಸಲು ಶಾಸಕ ಜಮೀರ್ ಅಹಮದ್ ಖಾನ್ ಸಹ  ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. 

ಇನ್ನು ಪರಿಸ್ಥಿತಿ ನಿಯಂತ್ರಿಸಲು ಇದಾಗಲೇ ಪೊಲೀಸ್ ಠಾಣಾ ಆವರಣದಲ್ಲಿ ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜನೆ ಮಾಡಲಾಗಿದ್ದು ಪೂರ್ವ ವಿಭಾಗದ ಎಲ್ಲಾ ಪೋಲೀಸ್ ಇನ್ಸ್​ಪೆಕ್ಟರ್​  ಹಾಗೂ ಸಿಬ್ಬಂದಿಗಳು ತಕ್ಷಣ ಕೆಜಿ ಹಳ್ಳಿ ಠಾಣೆಗೆ ಆಗಮಿಸಲು ಹಿರಿಯ ಪೋಲೀಸ್ ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.  • Blogger Comments
  • Facebook Comments

0 comments:

Post a Comment

Item Reviewed: ಫೇಸ್ ಬುಕ್ ನಲ್ಲಿ ಶಾಸಕರ ಸಂಬಂಧಿಯಿಂದ ಪ್ರವಾದಿ ನಿಂದನೆ ಆರೋಪ : ಶಾಸಕರ ಮನೆ, ಕಛೇರಿ ಮೇಲೆ ದಾಳಿ ನಡೆಸಿದ ಗುಂಪು Rating: 5 Reviewed By: karavali Times
Scroll to Top