ಕರ್ನಾಟಕಕ್ಕೆ ಬರುವ ಕೋವಿಡ್ ರಹಿತ ಪ್ರಯಾಣಿಕರಿಗೆ ಇನ್ನು ಯಾವುದೇ ನಿರ್ಬಂಧವಿಲ್ಲ, ಸರಕಾರದಿಂದ‌ ಪರಿಷ್ಕೃತ ಮಾರ್ಗಸೂಚಿ ಪ್ರಕಟ - Karavali Times ಕರ್ನಾಟಕಕ್ಕೆ ಬರುವ ಕೋವಿಡ್ ರಹಿತ ಪ್ರಯಾಣಿಕರಿಗೆ ಇನ್ನು ಯಾವುದೇ ನಿರ್ಬಂಧವಿಲ್ಲ, ಸರಕಾರದಿಂದ‌ ಪರಿಷ್ಕೃತ ಮಾರ್ಗಸೂಚಿ ಪ್ರಕಟ - Karavali Times

728x90

24 August 2020

ಕರ್ನಾಟಕಕ್ಕೆ ಬರುವ ಕೋವಿಡ್ ರಹಿತ ಪ್ರಯಾಣಿಕರಿಗೆ ಇನ್ನು ಯಾವುದೇ ನಿರ್ಬಂಧವಿಲ್ಲ, ಸರಕಾರದಿಂದ‌ ಪರಿಷ್ಕೃತ ಮಾರ್ಗಸೂಚಿ ಪ್ರಕಟ

 

ಬೆಂಗಳೂರು (ಕರಾವಳಿ ಟೈಮ್ಸ್) : ಇತರ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರಿಗೆ ರಾಜ್ಯ ಸರಕಾರ ಸೋಮವಾರ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ. ಸರಕುಗಳ ಅಂತರ-ರಾಜ್ಯ ಚಲನೆಗೆ ಯಾವುದೇ ನಿರ್ಬಂಧಗಳಿರುವುದಿಲ್ಲ.


ಅಂತರ-ರಾಜ್ಯ ಪ್ರಯಾಣಕ್ಕೆ ಸಂಬಂಧಿಸಿದಂತೆ ಹಿಂದಿನ ಎಲ್ಲ ಸುತ್ತೋಲೆಗಳನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಸೇವಾಸಿಂಧು ಪೋರ್ಟಲ್ ನಲ್ಲಿ ನೋಂದಣಿ, ಗಡಿ ಭಾಗಗಳಲ್ಲಿ ವೈದ್ಯಕೀಯ ತಪಾಸಣೆ, ಜಿಲ್ಲೆಗಳಲ್ಲಿ ತಪಾಸಣೆ, ಪ್ರಯಾಣಿಕರ ವರ್ಗೀಕರಣ, ಕೈಗಳ ಮೇಲೆ ಸೀಲ್, ಮನೆ ಬಾಗಿಲುಗಳಿಗೆ ಪೋಸ್ಟರ್ ಅಂಟಿಸುವುದು ಇವೇ ಮೊದಲಾದ ಷರತ್ತುಗಳನ್ನು ರದ್ದುಪಡಿಸಲಾಗಿದೆ.


ಇತರ ರಾಜ್ಯಗಳಿಂದ‌ ಪ್ರಯಾಣಿಕರು ಕರ್ನಾಟಕಕ್ಕೆ ಬರುವ ವೇಳೆ ಕೋವಿಡ್ ಲಕ್ಷಣಗಳು ಇಲ್ಲದಿದ್ರೆ 14 ದಿನಗಳ ಕ್ವಾರಂಟೈನ್ ಅಗತ್ಯವಿಲ್ಲ ಮತ್ತು ಅವರು ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳಬಹುದು. ರಾಜ್ಯಕ್ಕೆ ಬಂದ 14 ದಿನಗೊಳಗಾಗಿ ಕೋವಿಡ್-19 ಲಕ್ಷಣಗಳ ಕಂಡು ಬಂದಲ್ಲಿ ಸ್ವಯಂ ನಿಗಾ ವಹಿಸುವುದು. ಆಪ್ತಮಿತ್ರ ಸಹಾಯವಾಣಿ 14410ಗೆ ಕರೆ ಮಾಡುವುದು. ರಾಜ್ಯಕ್ಕೆ ಆಗಮಿಸುವ ವೇಳೆ ಕೋವಿಡ್-19 ಲಕ್ಷಣಗಳಿದ್ರೆ ತಕ್ಷಣವೇ ಸ್ವಯಂ ಪ್ರತ್ಯೇಕವಾಗಿರುವುದು. ತಪ್ಪದೇ ವೈದ್ಯಕೀಯ ಸಮಾಲೋಚನೆ ಪಡೆಯುವುದು ಮತ್ತು ಆಪ್ತಮಿತ್ರ ಸಹಾಯವಾಣಿ 14410ಗೆ ಕರೆ ಮಾಡುವುದು. ಕೋವಿಡ್-19 ತಡೆಗಟ್ಟಲು ಫೇಸ್ ಮಾಸ್ಕ್ ಧರಿಸುವುದು. 2 ಮೀಟರ್ ದೈಹಿಕ ಅಂತರ ಕಾಪಾಡಿಕೊಳ್ಳುವುದು. ಆಗಾಗ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಕೆ ಸೇರಿದಂತೆ ಇತ್ಯಾದಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು.



  • Blogger Comments
  • Facebook Comments

0 comments:

Post a Comment

Item Reviewed: ಕರ್ನಾಟಕಕ್ಕೆ ಬರುವ ಕೋವಿಡ್ ರಹಿತ ಪ್ರಯಾಣಿಕರಿಗೆ ಇನ್ನು ಯಾವುದೇ ನಿರ್ಬಂಧವಿಲ್ಲ, ಸರಕಾರದಿಂದ‌ ಪರಿಷ್ಕೃತ ಮಾರ್ಗಸೂಚಿ ಪ್ರಕಟ Rating: 5 Reviewed By: karavali Times
Scroll to Top