ಪಶ್ಚಿಮ ಬಂಗಾಳ‌ : ಸೆ. 20 ರವರೆಗೂ ಲಾಕ್ ಡೌನ್ ವಿಸ್ತರಣೆ - Karavali Times ಪಶ್ಚಿಮ ಬಂಗಾಳ‌ : ಸೆ. 20 ರವರೆಗೂ ಲಾಕ್ ಡೌನ್ ವಿಸ್ತರಣೆ - Karavali Times

728x90

26 August 2020

ಪಶ್ಚಿಮ ಬಂಗಾಳ‌ : ಸೆ. 20 ರವರೆಗೂ ಲಾಕ್ ಡೌನ್ ವಿಸ್ತರಣೆ

 


 ಸೆಪ್ಟೆಂಬರ್ 7,11,12 ರಂದು ಸಂಪೂರ್ಣ ಲಾಕ್ ಡೌನ್


ಕೋಲ್ಕತಾ ( ಕರಾವಳಿ ಟೈಮ್ಸ್) : ಪಶ್ಚಿಮ ಬಂಗಾಳದಲ್ಲಿ ಪ್ರಸ್ತುತ ಜಾರಿಯಲ್ಲಿರುವ ಲಾಕ್ ಡೌನ್ ಸೆಪ್ಟೆಂಬರ್ 20ರ ವರೆಗೆ ವಿಸ್ತರಿಸಲಾಗಿದ್ದು, ಸೆ. 7, 11 ಹಾಗೂ 12 ರಂದು ಸಂಪೂರ್ಣ ಲಾಕ್ ಡೌನ್ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

 ದೆಹಲಿ, ಮುಂಬೈ ಹಾಗೂ ಚೆನ್ನೈ ಸೇರಿದಂತೆ ಆರು ನಗರಗಳಿಂದ ಬರುವ ವಿಮಾನಗಳ ಮೇಲಿನ ನಿರ್ಬಂಧವನ್ನು ಸಡಿಲಿಸಿದ್ದು, ಸೆಪ್ಟೆಂಬರ್ 1 ರಿಂದ ವಾರದಲ್ಲಿ ಮೂರು ದಿನ ವಿಮಾನ ಲ್ಯಾಂಡಿಂಗಿಗೆ ಅನುಮತಿ ನೀಡಲಾಗಿದೆ. ಲೋಕಲ್ ರೈಲು ಹಾಗೂ ಮೆಟ್ರೋ ಸಂಚಾರಕ್ಕೂ ಗ್ರೀನ್ ಸಿಗ್ನಲ್ ನೀಡಲಾಗಿದೆ. ಆದರೆ ಶಾಲಾ ಕಾಲೇಜ್ ಗಳು ಸೆಪ್ಟೆಂಬರ್ 20ರ ವರೆಗೆ ತೆರೆಯುವಂತಿಲ್ಲ ಎಂದು ಮಮತಾ ಆದೇಶಿಸಿದ್ದಾರೆ.

  ಇದಕ್ಕೂ ಮುನ್ನ ಕೊರೋನಾ ವೈರಸ್ ಭೀತಿಯ ನಡುವೆಯೂ ನೀಟ್ ಹಾಗೂ ಜೆಇಇ ಮುಖ್ಯ ಪರೀಕ್ಷೆ ನಡೆಸಲು ಮುಂದಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳು ಸುಪ್ರೀಂ ಕೋರ್ಟ್ ಮೊರೆ ಹೋಗಬೇಕು ಎಂದು ಪ್ರತಿಪಕ್ಷಗಳ ಸಿಎಂಗಳ ಸಭೆಯಲ್ಲಿ ಮಮತಾ ಬ್ಯಾನರ್ಜಿ ಅವರು ಕರೆ ನೀಡಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಪಶ್ಚಿಮ ಬಂಗಾಳ‌ : ಸೆ. 20 ರವರೆಗೂ ಲಾಕ್ ಡೌನ್ ವಿಸ್ತರಣೆ Rating: 5 Reviewed By: karavali Times
Scroll to Top