ರಾಜಸ್ಥಾನ : ಜೈ ಶ್ರೀರಾಂ ಹೇಳುವಂತೆ ಬಲವಂತಪಡಿಸಿ ವಯೋವೃದ್ದ ಮುಸ್ಲಿಂ ಆಟೋ ಚಾಲಕನನ್ನು ಥಳಿಸಿದ ದುಷ್ಕರ್ಮಿಗಳು - Karavali Times ರಾಜಸ್ಥಾನ : ಜೈ ಶ್ರೀರಾಂ ಹೇಳುವಂತೆ ಬಲವಂತಪಡಿಸಿ ವಯೋವೃದ್ದ ಮುಸ್ಲಿಂ ಆಟೋ ಚಾಲಕನನ್ನು ಥಳಿಸಿದ ದುಷ್ಕರ್ಮಿಗಳು - Karavali Times

728x90

9 August 2020

ರಾಜಸ್ಥಾನ : ಜೈ ಶ್ರೀರಾಂ ಹೇಳುವಂತೆ ಬಲವಂತಪಡಿಸಿ ವಯೋವೃದ್ದ ಮುಸ್ಲಿಂ ಆಟೋ ಚಾಲಕನನ್ನು ಥಳಿಸಿದ ದುಷ್ಕರ್ಮಿಗಳು


ಹಲ್ಲುಗಳು ಹೊರಗೆ ಬರುವಂತೆ ಹಿಗ್ಗಾಮುಗ್ಗಾ ಥಳಿತ


ಇಬ್ಬರು ಆರೋಪಿಗಳು ಅರೆಸ್ಟ್


ಜೈಪುರ (ಕರಾವಳಿ ಟೈಮ್ಸ್) : ಜೈ ಶ್ರೀ ರಾಂ ಹಾಗೂ ಮೋದಿ ಝಿಂದಾಬಾದ್ ಎಂದು ಕೂಗುವಂತೆ ಬಲವಂತಪಡಿಸಿದ ದುಷ್ಕರ್ಮಿಗಳ ತಂಡವೊಂದು ಇಳಿ ವಯಸ್ಸಿನ ಆಟೋ ಚಾಲಕರೊಬ್ಬರನ್ನು ಹಿಗ್ಗಾ ಮುಗ್ಗಾ ಥಳಿಸಿ, ಗೂಂಡಾಗಿರಿ ಮೆರೆದ ಘಟನೆಯೊಂದು ರಾಜಸ್ಥಾನ ರಾಜ್ಯದ ಸಿಖರ್ ಜಿಲ್ಲೆಯಲ್ಲಿ  ನಡೆದಿದೆ.

52 ವರ್ಷ ಪ್ರಾಯದ ಗಫಾರ್ ಅಹ್ಮದ್ ಅವರೇ ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ವೃದ್ದ ರಿಕ್ಷಾ ಚಾಲಕ.  ಪ್ರಯಾಣಿಕರನ್ನು ರೈಲು ನಿಲ್ದಾಣಕ್ಕೆ ತಲುಪಿಸಿ ಮರಳುವಾಗ ಈ ಘಟನೆ ನಡೆದಿದೆ. ದುಷ್ಕರ್ಮಿಗಳ ವಿರುದ್ದ ಎಫ್‍ಐಆರ್ ದಾಖಲಾಗಿದ್ದು, ರಾಜೇಂದ್ರ ಜಾಟ್ ಮತ್ತು ಶಂಬು ದಯಾಳ್ ಜಾಟ್ ಎಂಬ ಇಬ್ಬರು ದುಷ್ಕರ್ಮಿಗಳನ್ನು ಪೆÇಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. 

ದುಷ್ಕರ್ಮಿಗಳು ಚಾಲಕನ ಗಡ್ಡವನ್ನು ಎಳೆದು, ಮುಖಕ್ಕೆ ಹೊಡೆದಿದ್ದಾರೆ. ಹಲ್ಲುಗಳು ಹೊರಗೆ ಬರುವಂತೆ ಹಲ್ಲೆ ನಡೆಸಲಾಗಿದೆ. ಪಾಕಿಸ್ತಾನಕ್ಕೆ ಹೋಗುವಂತೆ ಪೀಡಿಸಲಾಗಿದೆ. ಗಂಭೀರ ಹಲ್ಲೆಯಿಂದ ಗಫಾರ್ ಅಹ್ಮದ್ ಅವರ ಕಣ್ಣು ಮತ್ತು ಕೆನ್ನೆಗಳು ಊದಿಕೊಂಡಿದೆ. 

ಅಟೋ ರಿಕ್ಷಾದಲ್ಲಿ ಪ್ರಯಾಣಿಕರನ್ನು ರೈಲು ನಿಲ್ದಾಣಕ್ಕೆ ಬಿಟ್ಟು ವಾಪಾಸಾಗುತ್ತಿದ್ದ ವೇಳೆ ನನ್ನನ್ನು ತಡೆದ ವ್ಯಕ್ತಿಗಳು ತಂಬಾಕು ಕೇಳಿದ್ದಾರೆ. ಅದನ್ನು ಕೊಟ್ಟಾಗ ಮೋದಿ ಜಿಂದಾಬಾದ್ ಎಂದು ಹೇಳುವಂತೆ ಸೂಚಿಸಿದ್ದಾರೆ. ಅದನ್ನು ಹೇಳದಿದ್ದಾಗ ಕಪ್ಪಾಳಕ್ಕೆ ಹೊಡೆದಿದ್ದು, ಜೈ ಶ್ರೀರಾಮ್ ಎನ್ನುವಂತೆ ಪೀಡಿಸಿದ್ದಾರೆ. ಇದಕ್ಕೂ ಒಪ್ಪದಿದ್ದಾಗ ಬರ್ಬರ ರೀತಿಯಲ್ಲಿ ಹಲ್ಲೆ ನಡೆಸಲಾಗಿದೆ. 2-3 ಹಲ್ಲುಗಳು ಕಿತ್ತು ಬಂದಿವೆ. ಎಡಕಣ್ಣಿಗೂ ತೀವ್ರ ರೀತಿಯ ಗಾಯವಾಗಿದೆ. ಕೆಲ ಕಾಲ ಪ್ರಜ್ಞೆ ಹೀನನಾಗಿ ಬಿದಿದ್ದು, ನಂತರ ಮನೆಗೆ ವಾಪಸ್ಸಾಗಿರುವುದಾಗಿ ಗಫಾರ್ ಅವರು ಎಫ್‍ಐಆರ್‍ನಲ್ಲಿ ಉಲ್ಲೇಖಿಸಿದ್ದಾರೆ.

ಬಂಧಿತ ಆರೋಪಿಗಳಿಬ್ಬರೂ ಚಾಲಕ ವೃತ್ತಿ ಮಾಡುತ್ತಿದ್ದು, ದುಷ್ಕರ್ಮಿಗಳ ವಿರುದ್ದ ಐಪಿಸಿ ಸೆಕ್ಷನ್ 323, 341, 295ಎ, 504, 506, 327, 382 ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಸಿಕರ್ ಸಾದರ್ ಪೆÇಲೀಸ್ ಠಾಣಾಧಿಕಾರಿ ಪುಷ್ಪೇಂದ್ರ ಸಿಂಗ್ ತಿಳಿಸಿದ್ದಾರೆ.


  • Blogger Comments
  • Facebook Comments

0 comments:

Post a Comment

Item Reviewed: ರಾಜಸ್ಥಾನ : ಜೈ ಶ್ರೀರಾಂ ಹೇಳುವಂತೆ ಬಲವಂತಪಡಿಸಿ ವಯೋವೃದ್ದ ಮುಸ್ಲಿಂ ಆಟೋ ಚಾಲಕನನ್ನು ಥಳಿಸಿದ ದುಷ್ಕರ್ಮಿಗಳು Rating: 5 Reviewed By: karavali Times
Scroll to Top