ಕರ್ನಾಟಕ ಬಂದ್ ಹಿನ್ನಲೆ : ದ.ಕ. ಜಿಲ್ಲೆಯಲ್ಲಿ ಬಿಗು ಬಂದೋಬಸ್ತ್ ಕೈಗೊಂಡ ಪೊಲೀಸ್ ಇಲಾಖೆ - Karavali Times ಕರ್ನಾಟಕ ಬಂದ್ ಹಿನ್ನಲೆ : ದ.ಕ. ಜಿಲ್ಲೆಯಲ್ಲಿ ಬಿಗು ಬಂದೋಬಸ್ತ್ ಕೈಗೊಂಡ ಪೊಲೀಸ್ ಇಲಾಖೆ - Karavali Times

728x90

27 September 2020

ಕರ್ನಾಟಕ ಬಂದ್ ಹಿನ್ನಲೆ : ದ.ಕ. ಜಿಲ್ಲೆಯಲ್ಲಿ ಬಿಗು ಬಂದೋಬಸ್ತ್ ಕೈಗೊಂಡ ಪೊಲೀಸ್ ಇಲಾಖೆ

 


ಬಲವಂತದ ಬಂದ್ ಹಾಗೂ ಕೋವಿಡ್ ನಿಯಮಾವಳಿ ಉಲ್ಲಂಘಿಸಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಎಸ್ಪಿ


ಮಂಗಳೂರು, ಸೆ. 27, 2020 (ಕರಾವಳಿ ಟೈಮ್ಸ್) : ರೈತ ಸಂಘಟನೆಗಳು ನಾಳೆ (ಸೆ. 28 ಸೋಮವಾರ) ತಿದ್ದುಪಡಿ ಕಾಯ್ದೆಗಳ ವಿರುದ್ದ ಕರ್ನಾಟಕ ಬಂದ್‍ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಮುಂಜಾಗ್ರತೆ ಹಾಗೂ ಬಂದೋಬಸ್ತ್ ಕ್ರಮಗಳನ್ನು ಕೈಗೊಂಡಿದೆ. 

ಜಿಲ್ಲೆಯಲ್ಲಿ 3 ಮಂದಿ ಎಎಸ್ಪಿ/ ಡಿವೈಎಸ್ಪಿ, 8 ಮಂದಿ ಸಿಪಿಐ/ ಪಿಐ, 25 ಮಂದಿ ಪಿಎಸ್‍ಐ, 45 ಮಂದಿ ಎಎಸ್‍ಐ, 320 ಮಂದಿ ಎಚ್‍ಸಿ/ ಪಿಸಿ, 50 ಮಂದಿ ಗೃಹರಕ್ಷಕ ಸಿಬ್ಬಂದಿಗಳನ್ನು ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾಗಿರುತ್ತದೆ. ಅಲ್ಲದೇ ಇದರೊಂದಿಗೆ 3 ಕೆ.ಎಸ್.ಅರ್.ಪಿ. ತುಕಡಿ, ಹಾಗೂ 3 ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತುಕಡಿಗಳನ್ನು ಬಿ.ಸಿ.ರೋಡು, ಪುತ್ತೂರು, ಕಲ್ಲಡ್ಕ, ಉಪ್ಪಿನಂಗಡಿ, ಸುಳ್ಯ ಹಾಗೂ ಬೆಳ್ತಂಗಡಿ ಪ್ರದೇಶಗಳಲ್ಲಿ ನಿಯೋಜಿಸಿದೆ. ಸಾರ್ವಜನಿಕರು ಯಾವುದೇ ಅತಂಕಕ್ಕೆ ಒಳಗಾಗದಂತೆ ಸಂಯಮದಿಂದ ವರ್ತಿಸುವಂತೆ ಹಾಗೂ ಬಲವಂತವಾಗಿ ಯಾರಾದರೂ ಬಂದ್ ಮಾಡಲು ಪ್ರಯತ್ನಿಸಿದಲ್ಲಿ ಅಥವಾ ಒತ್ತಾಯಿಸಿದಲ್ಲಿ ಜಿಲ್ಲಾ ನಿಯಂv್ರÀಣ ಕೊಠಡಿ ದೂರವಾಣಿ ಸಂಖ್ಯೆ 0824-2220508ಗೆ ಕರೆ ಮಾಡಿ ತಿಳಿಸುವಂತೆ ಸಾರ್ವಜನಿಕರಲ್ಲಿ ವಿನಂತಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಬಂದ್ ವೇಳೆಯಲ್ಲಿ ಕೋವಿಡ್-19 ತಡೆಗಾಗಿ ಇರುವ ನಿಯಾಮಾವಳಿಗಳನ್ನು ಉಲ್ಲಂಘಿಸಿದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. 


  • Blogger Comments
  • Facebook Comments

0 comments:

Post a Comment

Item Reviewed: ಕರ್ನಾಟಕ ಬಂದ್ ಹಿನ್ನಲೆ : ದ.ಕ. ಜಿಲ್ಲೆಯಲ್ಲಿ ಬಿಗು ಬಂದೋಬಸ್ತ್ ಕೈಗೊಂಡ ಪೊಲೀಸ್ ಇಲಾಖೆ Rating: 5 Reviewed By: karavali Times
Scroll to Top