ಡಿಕೆ ಸಹೋದರರ ನಿವಾಸಗಳಿಗೆ ಸೋಮವಾರ ಮುಂಜಾನೆಯೇ ಸಿಬಿಐ ದಾಳಿ : ಅಭಿಮಾನಿಗಳ ಆಕ್ರೋಶ - Karavali Times ಡಿಕೆ ಸಹೋದರರ ನಿವಾಸಗಳಿಗೆ ಸೋಮವಾರ ಮುಂಜಾನೆಯೇ ಸಿಬಿಐ ದಾಳಿ : ಅಭಿಮಾನಿಗಳ ಆಕ್ರೋಶ - Karavali Times

728x90

4 October 2020

ಡಿಕೆ ಸಹೋದರರ ನಿವಾಸಗಳಿಗೆ ಸೋಮವಾರ ಮುಂಜಾನೆಯೇ ಸಿಬಿಐ ದಾಳಿ : ಅಭಿಮಾನಿಗಳ ಆಕ್ರೋಶ

 


ಬೆಂಗಳೂರು, ಅ. 05, 2020 (ಕರಾವಳಿ ಟೈಮ್ಸ್) : ಕೆಪಿಸಿಸಿಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಅವರ ಸಹೋದರ ಸಂಸದ ಡಿ ಕೆ ಸುರೇಶ್ ಅವರಿಗೆ ಸೋಮವಾರ ಬೆಳ್ಳಂಬೆಳಗ್ಗೆ ಸಿಬಿಐ ಶಾಕ್ ನೀಡಿದೆ. ಸುಮಾರು 60ಕ್ಕೂ ಹೆಚ್ಚು ಸಿಬಿಐ ಅಧಿಕಾರಿಗಳು ಬೆಂಗಳೂರಿನ ಸದಾಶಿವ ನಗರದಲ್ಲಿರುವ ಡಿ ಕೆ ಶಿವಕುಮಾರ್ ನಿವಾಸ ಸೇರಿದಂತೆ ಅವರ ಊರು ರಾಮನಗರದ ಹಳ್ಳಿಯ ಮನೆ ಸೇರಿ 15ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

 ಬೆಳಗ್ಗೆ 6 ಗಂಟೆಯಿಂದ ನಿರಂತರವಾಗಿ ದಾಳಿ ನಡೆಸುತ್ತಿದ್ದು  ವ್ಯವಸ್ಥಿತವಾಗಿ ಸಿಬಿಐ ಅಧಿಕಾರಿಗಳು ಮಾಹಿತಿ ಕಲೆ ಹಾಕಿ ದಾಳಿ ನಡೆಸಿದ್ದಾರೆ. ಸದ್ಯ ಡಿ ಕೆ ಶಿವಕುಮಾರ್ ಒಬ್ಬರನ್ನೇ ಕೂರಿಸಿಕೊಂಡು ನಿರಂತರವಾಗಿ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಸಿಬಿಐ ಎಸ್ಪಿ ಥಾಮ್ಸನ್ ಜೋಸ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಅವರ ಕುಟುಂಬಸ್ಥರನ್ನೆಲ್ಲಾ ಮನೆ ಹತ್ತಿರದಲ್ಲಿರುವ ಕಚೇರಿಗೆ ಸದ್ಯ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಡಿ.ಕೆ ಸೋದರರ ನಿವಾಸಗಳ ಮೇಲೆ ದಾಳಿ ನಡೆಯುತ್ತಿದ್ದಂತೆ ಅವರ ಬೆಂಬಲಿಗರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ವರ್ಷ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಡಿ ಕೆ ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆಸಿದ ಬಳಿಕ ಡಿಕೆಶಿ  ಅವರು ಜೈಲಿಗೆ ಕೂಡ ಹೋಗಿ ಬಂದಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಡಿಕೆ ಸಹೋದರರ ನಿವಾಸಗಳಿಗೆ ಸೋಮವಾರ ಮುಂಜಾನೆಯೇ ಸಿಬಿಐ ದಾಳಿ : ಅಭಿಮಾನಿಗಳ ಆಕ್ರೋಶ Rating: 5 Reviewed By: karavali Times
Scroll to Top