ಚಕ್ರವರ್ತಿ ಸ್ಪಿನ್ ಮೋಡಿಗೆ ಡೆಲ್ಲಿ ತತ್ತರ : ಕೊಲ್ಕತ್ತಾ ತಂಡಕ್ಕೆ 59 ರನ್‍ಗಳ ಭಾರೀ ಜಯ - Karavali Times ಚಕ್ರವರ್ತಿ ಸ್ಪಿನ್ ಮೋಡಿಗೆ ಡೆಲ್ಲಿ ತತ್ತರ : ಕೊಲ್ಕತ್ತಾ ತಂಡಕ್ಕೆ 59 ರನ್‍ಗಳ ಭಾರೀ ಜಯ - Karavali Times

728x90

24 October 2020

ಚಕ್ರವರ್ತಿ ಸ್ಪಿನ್ ಮೋಡಿಗೆ ಡೆಲ್ಲಿ ತತ್ತರ : ಕೊಲ್ಕತ್ತಾ ತಂಡಕ್ಕೆ 59 ರನ್‍ಗಳ ಭಾರೀ ಜಯ



ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 5 ವಿಕೆಟ್ ಕಿತ್ತ ಮೊದಲ ಆಟಗಾರ ವರುಣ್ ಚಕ್ರವರ್ತಿ 


ಅಬುಧಾಬಿ, ಅ. 24, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಶನಿವಾರ ಸಂಜೆ ನಡೆದ ವೀಕೆಂಡ್ ದಿನದ ಮೊದಲ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ 59 ರನ್‍ಗಳಿಂದ ಡೆಲ್ಲಿ ತಂಡವನ್ನು ಸೋಲಿಸುವ ಮೂಲಕ ಪ್ಲೇ ಆಫ್ ಹಾದಿಯನ್ನು ಸುಗಮಗೊಳಿಸಿಕೊಂಡಿದೆ.

ಐಪಿಎಲ್-2020ಯ 42ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ ನರೈನ್ ಹಾಗೂ ರಾಣಾ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‍ಗಳಲ್ಲಿ 194 ರನ್ ಸಿಡಿಸಿದರು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್ ಮಾತ್ರ ಗಳಿಸಲು ಶಕ್ತವಾಗಿ ಹೀನಾಯವಾಗಿ ಸೋಲೊಪ್ಪಿಕೊಂಡಿತು. 

ಕೋಲ್ಕತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ತಮ್ಮ ಕೋಟಾದ 4 ಓವರ್ ಬೌಲ್ ಮಾಡಿ ಕೇವಲ 20 ರನ್ ನೀಡಿ 5 ವಿಕೆಟ್ ಪಡೆದರು. ಈ ಮೂಲಕ ಐಪಿಎಲ್-2020 ಟೂನಿಯಲ್ಲಿ 5 ವಿಕೆಟ್ ಕಿತ್ತ ಮೊದಲ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು. ಇವರಿಗೆ ಉತ್ತಮ ಸಾಥ್ ನೀಡಿದ ಪ್ಯಾಟ್ ಕಮ್ಮಿನ್ಸ್ 4 ಓವರ್‍ಗಳಲ್ಲಿ 17 ರನ್ ನೀಡಿ 3 ವಿಕೆಟ್ ಪಡೆದರು. 

195 ರನ್‍ಗಳ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೋಲ್ಕತಾ ನೈಟ್ ರೈಡರ್ಸ್ ವೇಗಿ ಪ್ಯಾಟ್ ಕಮ್ಮಿನ್ಸ್ ಆರಂಭಿಕ ಆಘಾತ ನೀಡಿದರು. ಇನ್ನಿಂಗ್ಸ್‍ನ ಮೊದಲ ಎಸೆತದಲ್ಲೇ ಅಜಿಂಕ್ಯ ರಹಾನೆ ಅವರನ್ನು ಶೂನ್ಯಕ್ಕೆ ಪೆವಿಲಿಯನ್‍ಗೆ ಅಟ್ಟಿದರು. ಬಳಿಕ ಶಿಖರ್ ಧವನ್ ಅವರನ್ನು 2ನೇ ಓವರ್‍ನ 3ನೇ ಎಸೆತದಲ್ಲಿ ಬೌಲ್ಡ್ ಮಾಡಿದರು.

ಬಳಿಕ ಒಂದಾದ ನಾಯಕ ಶ್ರೇಯಸ್ ಐಯ್ಯರ್ ಮತ್ತು ರಿಷಬ್ ಪಂತ್ ತಾಳ್ಮೆಯ ಆಟವಾಡಿ ತಂಡದ ಮೊತ್ತ ಏರಿಸಲು ಪ್ರಯತ್ನಿಸಿದರು. ಹೀಗಾಗಿ ಪವರ್ ಪ್ಲೇ ಅಂತ್ಯಕ್ಕೆ ಡೆಲ್ಲಿ 2 ವಿಕೆಟ್ ಕಳೆದುಕೊಂಡು 36 ರನ್ ಗಳಿಸಿತು. 11ನೇ ಓವರಿನ 2ನೇ ಎಸೆತದಲ್ಲಿ 33 ಎಸೆತಗಳಲ್ಲಿ 27 ರನ್ ಗಳಿಸಿದ್ದ ರಿಷಭ್ ಪಂತ್ ಔಟಾದರು. ನಂತರ ಬಂದ ಶಿಮ್ರಾನ್ ಹೆಟ್ಮಿಯರ್ ಅವರು ಕೂಡ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ಔಟಾದರು. 

ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದ ನಾಯಕ ಶ್ರೇಯಸ್ ಐಯ್ಯರ್ 13ನೇ ಓವರಿನ 3ನೇ ಎಸೆತದಲ್ಲಿ 38 ಎಸೆತಗಳಲ್ಲಿ 47 ರನ್ ಸಿಡಿಸಿ ಔಟಾದರು. ಈ ಮೂಲಕ 14ನೇ ಓವರ್ ಮುಕ್ತಾಯಕ್ಕೆ ಡೆಲ್ಲಿ ತಂಡ ಐದು ವಿಕೆಟ್ ಕಳೆದುಕೊಂಡು 98 ರನ್ ಗಳಿಸಿತು. ಈ ವೇಳೆ ಸ್ಫೋಟಕ ಆಟದ ಸೂಚನೆ ನೀಡಿದ ಮಾರ್ಕಸ್ ಸ್ಟೊಯಿನಿಸ್ ಅವರು ಕೂಡ ವರುಣ್ ಚಕ್ರವರ್ತಿ ಅವರ ಸ್ಪಿನ್ ಮೋಡಿಗೆ ಬಲಿಯಾದರು. 

ಅದೇ ಓವರಿನಲ್ಲಿ ಆಕ್ಸರ್ ಪಟೇಲ್ ಕೂಡ ವರುಣ್ ಚಕ್ರವರ್ತಿ ಅವರಿಗೆ ಬೌಲ್ಡ್ ಆದರು. ನಂತರ 18ನೇ ಓವರಿನಲ್ಲಿ ಕಗಿಸೊ ರಬಾಡಾ ಅವರು 9 ರನ್ ಗಳಿಸಿ ಪ್ಯಾಟ್ ಕಮ್ಮಿನ್ಸ್ ಅವರಿಗೆ ಔಟ್ ಆದರು. ಇವರ ನಂತರ ತುಷಾರ್ ದೇಶಪಾಂಡೆ ಅವರು ಕೂಡಾ ಮರಳಿದರು. ಅಂತಿಮವಾಗಿ ಡೆಲ್ಲಿ ತಂಡ 20 ಓವರ್‍ಗಳಲ್ಲಿ 9 ವಿಕೆಟ್ ಕಳೆದು ಕೊಂಡು ಕೇವಲ 135 ರನ್ ಗಳಿಸಲು ಮಾತ್ರ ಶಕ್ತವಾಗಿ ಸೋಲೊಪ್ಪಿಕೊಂಡಿತು. 








  • Blogger Comments
  • Facebook Comments

0 comments:

Post a Comment

Item Reviewed: ಚಕ್ರವರ್ತಿ ಸ್ಪಿನ್ ಮೋಡಿಗೆ ಡೆಲ್ಲಿ ತತ್ತರ : ಕೊಲ್ಕತ್ತಾ ತಂಡಕ್ಕೆ 59 ರನ್‍ಗಳ ಭಾರೀ ಜಯ Rating: 5 Reviewed By: karavali Times
Scroll to Top