ಕೋವಿಡ್ ಕಾರಣದಿಂದ ನೀಟ್ ಗೆ ಗೈರಾಗಿದ್ದ ವಿದ್ಯಾರ್ಥಿಗಳಿಗೆ ಅ. 14 ರಂದು ಪರೀಕ್ಷೆ ನಡೆಸಲು ಸುಪ್ರೀಂ ಕೊರ್ಟ್ ಸೂಚನೆ - Karavali Times ಕೋವಿಡ್ ಕಾರಣದಿಂದ ನೀಟ್ ಗೆ ಗೈರಾಗಿದ್ದ ವಿದ್ಯಾರ್ಥಿಗಳಿಗೆ ಅ. 14 ರಂದು ಪರೀಕ್ಷೆ ನಡೆಸಲು ಸುಪ್ರೀಂ ಕೊರ್ಟ್ ಸೂಚನೆ - Karavali Times

728x90

12 October 2020

ಕೋವಿಡ್ ಕಾರಣದಿಂದ ನೀಟ್ ಗೆ ಗೈರಾಗಿದ್ದ ವಿದ್ಯಾರ್ಥಿಗಳಿಗೆ ಅ. 14 ರಂದು ಪರೀಕ್ಷೆ ನಡೆಸಲು ಸುಪ್ರೀಂ ಕೊರ್ಟ್ ಸೂಚನೆ



ನವದೆಹಲಿ, ಅಕ್ಟೋಬರ್ 12, 2020 (ಕರಾವಳಿ ಟೈಮ್ಸ್) : ಕೋವಿಡ್ ವೈರಸ್ ಕಾರಣದಿಂದಾಗಿ ಪ್ರಸಕ್ತ ವರ್ಷದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್)ಗೆ ಗೈರು ಹಾಜರಾಗಿದ್ದ ವಿದ್ಯಾರ್ಥಿಗಳಿಗೆ ಅಕ್ಟೋಬರ್ 14 ರಂದು ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. 

ಸೆಪ್ಟೆಂಬರ್ ತಿಂಗಳಲ್ಲಿ ನಡೆದ ನೀಟ್ ಪರೀಕ್ಷೆಗೆ ಕೊರೋನಾ ಕಂಟೈನ್ಮೆಟ್ ವಲಯದಲ್ಲಿ ವಾಸ ಮಾಡುತ್ತಿದ್ದ ಅನೇಕ ವಿದ್ಯಾರ್ಥಿಗಳು ಹಾಜರಾಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನೀಟ್ ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ನ್ಯಾಯಪೀಠ ಮತ್ತೊಂದು ಅವಕಾಶ ನೀಡಿದೆ. 

ಅಕ್ಟೋಬರ್ 14 ರಂದು ನೀಟ್ ಪರೀಕ್ಷೆ ನಡೆಸಿ ಅಕ್ಟೋಬರ್ 16 ರಂದು ಫಲಿತಾಂಶ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಸೆಪ್ಟೆಂಬರ್ 13ರಂದು ದೇಶಾದ್ಯಂತ 3,843 ಕೇಂದ್ರಗಳಲ್ಲಿ ನಡೆದಿದ್ದ ನೀಟ್ ಪರೀಕ್ಷೆಗೆ 14 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು. 








  • Blogger Comments
  • Facebook Comments

0 comments:

Post a comment

Item Reviewed: ಕೋವಿಡ್ ಕಾರಣದಿಂದ ನೀಟ್ ಗೆ ಗೈರಾಗಿದ್ದ ವಿದ್ಯಾರ್ಥಿಗಳಿಗೆ ಅ. 14 ರಂದು ಪರೀಕ್ಷೆ ನಡೆಸಲು ಸುಪ್ರೀಂ ಕೊರ್ಟ್ ಸೂಚನೆ Rating: 5 Reviewed By: karavali Times
Scroll to Top