ಯೋಗಿ ಅವರೇ ನಿಮ್ಮ ಬಳಿ ಮಹಿಳಾ ಪೊಲೀಸರೇ ಇಲ್ವಾ : ಯುಪಿ ಸರಕಾರವನ್ನು ಝಾಡಿಸಿದ ಶಿವಸೇನಾ ಸಂಸದ ರಾವತ್ - Karavali Times ಯೋಗಿ ಅವರೇ ನಿಮ್ಮ ಬಳಿ ಮಹಿಳಾ ಪೊಲೀಸರೇ ಇಲ್ವಾ : ಯುಪಿ ಸರಕಾರವನ್ನು ಝಾಡಿಸಿದ ಶಿವಸೇನಾ ಸಂಸದ ರಾವತ್ - Karavali Times

728x90

4 October 2020

ಯೋಗಿ ಅವರೇ ನಿಮ್ಮ ಬಳಿ ಮಹಿಳಾ ಪೊಲೀಸರೇ ಇಲ್ವಾ : ಯುಪಿ ಸರಕಾರವನ್ನು ಝಾಡಿಸಿದ ಶಿವಸೇನಾ ಸಂಸದ ರಾವತ್

 





ಪ್ರಿಯಾಂಕಾ ಕುರ್ತಾ ಎಳೆದ ಪೊಲೀಸ್ ಹಾಗೂ ಸಂತ್ರಸ್ತೆ ತಾಯಿಯನ್ನು ತಬ್ಬಿಕೊಂಡ ಪ್ರಿಯಾಂಕ ಚಿತ್ರಗಳು ಸಕತ್ ವೈರಲ್ 


ಮುಂಬೈ, ಅಕ್ಟೋಬರ್ 04, 2020 (ಕರಾವಳಿ ಟೈಮ್ಸ್) : ಹತ್ರಾಸ್ ಪ್ರದೇಶಕ್ಕೆ ಹೊರಟಿದ್ದ ತಡೆದ ಯುಪಿ ಪೊಲೀಸರು ಪ್ರಿಯಾಂಕಾ ಗಾಂಧಿ ಅವರ ಕುರ್ತಾವನ್ನು ಹಿಡಿದು ತಡೆದ ಘಟನೆಗೆ ಸಂಬಂಧಿಸಿದಂತೆ ಶಿವಸೇನಾ ಸಂಸದ ಸಂಯಜ್ ರಾವತ್ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ತೀವ್ರವಾಗಿ ಝಾಡಿಸಿದ್ದು, ಯೋಗಿ ಅವರೇ ನಿಮ್ಮ ಬಳಿ ಮಹಿಳಾ ಫೋಲೀಸರು ಇಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. 

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಕುರ್ತಾವನ್ನು ಫೋಲೀಸ್ ಅಧಿಕಾರಿ ಹಿಡಿದಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದ್ದು, ಇದು ಯುಪಿ ಪೊಲೀಸರ ಕರ್ತವ್ಯ ಪ್ರಜ್ಞೆಗೆ ಸವಾಲಾಗಿತ್ತು. ಇದೇ ಫೋಟೋವನ್ನು ತನ್ನ ಟ್ವೀಟ್‍ಗೆ ಹಂಚಿಕೊಂಡಿರುವ ಸಂಜಯ್ ರಾವತ್, ಉತ್ತರ ಪ್ರದೇಶ ಸರಕಾರಕ್ಕೆ ಗಂಭೀರ ಪ್ರಶ್ನೆ ಮಾಡಿದ್ದಾರೆ.

ಎರಡನೇ ಬಾರಿ ಸಹೋದರ ರಾಹುಲ್ ಗಾಂಧಿ ಜೊತೆ ಪ್ರಿಯಾಂಕಾ ಗಾಂಧಿ ವಾದ್ರಾ ಹತ್ರಾಸ್‍ನತ್ತ ಪ್ರಯಾಣ ಬೆಳೆಸಿದ್ದ ವೇಳೆ ದಾರಿ ಮಧ್ಯೆ ಫೋಲೀಸ್ ಸಿಬ್ಬಂದಿ ಕಾಂಗ್ರೆಸ್ ನಾಯಕರನ್ನು ತಡೆಯಲು ಮುಂದಾಗಿದ್ದರು. ಈ ವೇಳೆ ಓರ್ವ ಫೋಲೀಸ್ ಸಿಬ್ಬಂದಿ ಪ್ರಿಯಾಂಕಾ ಗಾಂಧಿಯ ಕುರ್ತಾ ಹಿಡಿದಿದ್ದಾರೆ. ಈ ಫೋಟೋಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೇ ಫೋಟೋಗೆ ಶಿವಸೇನೆ ಸಂಸದ ಸಂಜಯ್ ರಾವತ್ ಸಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹತ್ರಾಸ್‍ಗೆ ತೆರಳಿದ್ದ ವೇಳೆ ಪ್ರಿಯಾಂಕಾ ಗಾಂಧಿ ಸಂತ್ರಸ್ತೆಯ ತಾಯಿಯನ್ನು ಅಪ್ಪಿಕೊಂಡು ಸಾಂತ್ವನ ಹೇಳಿರುವ ಫೋಟೋವನ್ನು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ನಾಯಕರು ಸಹ ಹತ್ರಾಸ್ ಸಂತ್ರಸ್ತೆಯ ಕುಟುಂಬಸ್ಥರಿಗೆ ಭೇಟಿ ನೀಡಿರುವ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಫೋಟೋ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಆಗಮನ ಹಿನ್ನೆಲೆ ಸಂತ್ರಸ್ತೆ ಮನೆಯ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಮುಂಜಾಗ್ರತಾ ಕ್ರಮವಾಗಿ ಫೋಲೀಸರು ನಾಯಕರ ಆಗಮನ ಮತ್ತು ನಿರ್ಗಮನಕ್ಕಾಗಿ ತಾತ್ಕಾಲಿಕ ಮಾರ್ಗ ನಿರ್ಮಿಸಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಫೋಲೀಸರೇ ಕೊಠಡಿಯಲ್ಲಿ ನಾಯಕರ ಭೇಟಿಗೆ ಅವಕಾಶ ಕಲ್ಪಿಸಿದ್ದರು. ಕೊಠಡಿಯಲ್ಲಿ ಸುಮಾರು 40 ನಿಮಿಷ ಕುಟುಂಬಸ್ಥರ ಜೊತೆ ಕಾಂಗ್ರೆಸ್ ನಾಯಕರು ಮಾತುಕತೆ ನಡೆಸಿದರು.

ಇತ್ತ ಕಾಂಗ್ರೆಸ್ ನಾಯಕರ ಭೇಟಿ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ. ವಿಪಕ್ಷಗಳು ಸೇರಿದಂತೆ ದೇಶದ ಜನತೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಬೇಕೆಂದು ಆಗ್ರಹಿಸಿದ್ದವು. ಆದರೆ ಸಂತ್ರಸ್ತೆಯ ಕುಟುಂಬಸ್ಥರು ಸಿಬಿಐ ತನಿಖೆಯ ಬದಲಾಗಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಕಣ್ಗಾವಲಿನಲ್ಲಿ ತನಿಖೆ ನಡೆಯಬೆಕೆಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.









  • Blogger Comments
  • Facebook Comments

0 comments:

Post a Comment

Item Reviewed: ಯೋಗಿ ಅವರೇ ನಿಮ್ಮ ಬಳಿ ಮಹಿಳಾ ಪೊಲೀಸರೇ ಇಲ್ವಾ : ಯುಪಿ ಸರಕಾರವನ್ನು ಝಾಡಿಸಿದ ಶಿವಸೇನಾ ಸಂಸದ ರಾವತ್ Rating: 5 Reviewed By: karavali Times
Scroll to Top