2021ರ ಜನವರಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ - Karavali Times 2021ರ ಜನವರಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ - Karavali Times

728x90

7 November 2020

2021ರ ಜನವರಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ

 


ನವದೆಹಲಿ, ನ. 08, 2020 (ಕರಾವಳಿ ಟೈಮ್ಸ್) : ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, 2021ರ ಜನವರಿ 1 ರಿಂದ ಎಲ್ಲ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಿದೆ.

ಅಲ್ಲದೆ ಕೇಂದ್ರ ಮೋಟಾರು ವಾಹನ ಕಾಯ್ದೆ 1981ರ ತಿದ್ದುಪಡಿಯಂತೆ 2017ರ ಡಿಸೆಂಬರ್ 1 ಕ್ಕೆ ಮುಂಚಿತವಾಗಿ ಮಾರಾಟವಾಗಿರುವ ಎಲ್ಲಾ ‘ಎಂ’ ಮತ್ತು ‘ಎನ್’ ವರ್ಗದ ಹಳೆಯ ಮೋಟಾರು ವಾಹನ ಗಳಿಗೂ (ದ್ವಿಚಕ್ರ ವಾಹನಗಳಿಗೆ) ಫಾಸ್ಟ್ ಟ್ಯಾಗ್ ಕಡ್ಡಾಯವಾಗಿದೆ. ಈ ಕುರಿತಂತೆ ಸಚಿವಾಲಯ 2020ರ ನವೆಂಬರ್ 6 ರಂದು ಜಿಎಸ್ಆರ್ 690(ಇ) ಅಧಿಸೂಚನೆಯನ್ನು ಹೊರಡಿಸಿತ್ತು.

ಕೇಂದ್ರೀಯ ಮೋಟಾರು ವಾಹನ ನಿಯಮ 1989ರ ಅನ್ವಯ 2017ರ ಡಿಸೆಂಬರ್ 1 ರ ನಂತರ ನೋಂದಾಯಿಸಲ್ಪಟ್ಟಿರುವ ಎಲ್ಲಾ ಹೊಸ ನಾಲ್ಕು ಚಕ್ರದ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯ ಗೊಳಿಸಲಾಗಿದ್ದು, ಅವುಗಳನ್ನು ವಾಹನ ಉತ್ಪಾದಕರು ಅಥವಾ ಡೀಲರ್ ಗಳು ಪೂರೈಸಬೇಕಾಗಿದೆ. ಅಲ್ಲದೆ ಸಾರಿಗೆ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆಯ ನಂತರವೇ ಅವುಗಳ ಕ್ಷಮತಾ ಪ್ರಮಾಣಪತ್ರ (ಫಿಟ್ ನೆಸ್ ಸರ್ಟಿಫಿಕೇಟ್)  ನವೀಕರಣ ಮಾಡಿಕೊಡಬೇಕು ಎಂದು ಕಡ್ಡಾಯ ಗೊಳಿಸಲಾಗಿದೆ. ಅಲ್ಲದೆ 2019ರ ಅಕ್ಟೋಬರ್ 1ರಿಂದೀಚೆಗೆ ರಾಷ್ಟ್ರೀಯ ಪರ್ಮಿಟ್ ಹೊಂದಿರುವ ಎಲ್ಲ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.

ಅರ್ಜಿ ನಮೂನೆ ಸಂಖ್ಯೆ 51 (ವಿಮಾ ಪ್ರಮಾಣಪತ್ರ)ಕ್ಕೆ ತಿದ್ದುಪಡಿ ತರಲಾಗಿದ್ದು, ಆ ಮೂಲಕ ಹೊಸದಾಗಿ ಮೂರನೇ ವ್ಯಕ್ತಿ ವಿಮೆಯನ್ನು ಪಡೆಯಬೇಕಾದರೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯವಾಗಿದ್ದು,ಅದರಲ್ಲಿ ಫಾಸ್ಟ್ ಟ್ಯಾಗ್ ವಿವರಗಳನ್ನು ಸೆರೆಹಿಡಿಯಲಾಗುವುದು. ಇದು 2020ರ ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ.








  • Blogger Comments
  • Facebook Comments

0 comments:

Post a Comment

Item Reviewed: 2021ರ ಜನವರಿ 1ರಿಂದ ಫಾಸ್ಟ್ ಟ್ಯಾಗ್ ಕಡ್ಡಾಯ Rating: 5 Reviewed By: karavali Times
Scroll to Top