ಬಿಐಎಸ್ ಪ್ರಮಾಣಿತ ಹೆಲ್ಮೆಟ್ ಇಲ್ಲದಿದ್ದರೆ ಇನ್ನು ಮುಂದೆ ಡಂಡ : ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಅಧಿಸೂಚನೆ - Karavali Times ಬಿಐಎಸ್ ಪ್ರಮಾಣಿತ ಹೆಲ್ಮೆಟ್ ಇಲ್ಲದಿದ್ದರೆ ಇನ್ನು ಮುಂದೆ ಡಂಡ : ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಅಧಿಸೂಚನೆ - Karavali Times

728x90

29 November 2020

ಬಿಐಎಸ್ ಪ್ರಮಾಣಿತ ಹೆಲ್ಮೆಟ್ ಇಲ್ಲದಿದ್ದರೆ ಇನ್ನು ಮುಂದೆ ಡಂಡ : ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಅಧಿಸೂಚನೆ



ನವದೆಹಲಿ, ನ. 29, 2020 (ಕರಾವಳಿ ಟೈಮ್ಸ್) : ಇನ್ನು ಮುಂದೆ ಕಡ್ಡಾಯವಾಗಿ ಐಎಸ್‍ಐ ಗುರುತಿರುವ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (ಬಿಐಎಸ್) ಪ್ರಮಾಣಿತ ಹೆಲ್ಮೆಟ್‍ಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟ ಮಾಡಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ಧಿಕ್ಕರಿಸಿದ್ದು ಕಂಡು ಬಂದರೆ ದಂಡ ವಿಧಿಸಲಾಗುತ್ತದೆ.

ದ್ವಿಚಕ್ರ ವಾಹನ ಸವಾರರ ಸಾವಿಗೆ ಕಳಪೆ ಗುಣಮಟ್ಟದ ಹೆಲ್ಮೆಟ್‍ಗಳು ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರ ಸವಾರರ ರಕ್ಷಣೆ ಮಾಡಲು ಈ ಅಧಿಸೂಚನೆ ಹೊರಡಿಸಿದೆ. ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಸಮಿತಿ 2018ರ ಮಾರ್ಚ್‍ನಲ್ಲಿ ಬಿಐಎಸ್ ಪ್ರಮಾಣಿತ ಹೆಲ್ಮೆಟ್‍ಗಳನ್ನು ಸವಾರರು ಕಡ್ಡಾಯವಾಗಿ ಧರಿಸಬೇಕೆಂದು ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಸರಕಾರ ಜಾರಿಗೆ ತಂದಿದೆ.

ಕಳೆದ ವರ್ಷ ದ್ವಿಚಕ್ರ ವಾಹನ ಅಪಘಾತದಲ್ಲಿ ಬಲಿಯಾದ 56 ಸಾವಿರ ಜನರ ಪೈಕಿ 43,600 ಜನರ ಸಾವಿಗೆ ಹೆಲ್ಮೆಟ್ ಧರಿಸದೇ ಇರುವುದೇ ಕಾರಣವಾಗಿತ್ತು. ದ್ವಿಚಕ್ರ ವಾಹನ ಹೆಲ್ಮೆಟ್ ತಯಾರಿಕಾ ಸಂಘಟನೆಯ ಅಧ್ಯಕ್ಷ ರಾಜೀವ್ ಕಪೂರ್ ಪ್ರತಿಕ್ರಿಯಿಸಿ, ಭಾರತದಲ್ಲಿ ದಿನನಿತ್ಯ ಮಾರಾಟವಾಗುತ್ತಿರುವ 2 ಲಕ್ಷ ಹೆಲ್ಮೆಟ್‍ಗಳ ಪೈಕಿ ಶೇ. 40 ರಷ್ಟು ಕಳಪೆ ಗುಣಮಟ್ಟದ ಹೆಲ್ಮೆಟ್‍ಗಳು ತಯಾರಾಗುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ದ್ವಿಚಕ್ರವಾಹನ ಸವಾರರು ಪ್ಲಾಸ್ಟಿಕ್ ಕ್ಯಾಪ್‍ಗಳನ್ನು ಧರಿಸುತ್ತಿದ್ದಾರೆ. ಐಎಸ್‍ಐ ಪ್ರಮಾಣಿತ ಹೆಲ್ಮೆಟ್‍ಗಳ ಬಳಕೆಯಿಂದ ನೂರಾರು ಜನರ ಪ್ರಾಣ ಉಳಿಸಬಹುದು ಎಂದವರು ಅಭಿಪ್ರಾಯಪಟ್ಟಿದ್ದಾರೆ. 









  • Blogger Comments
  • Facebook Comments

1 comments:

Item Reviewed: ಬಿಐಎಸ್ ಪ್ರಮಾಣಿತ ಹೆಲ್ಮೆಟ್ ಇಲ್ಲದಿದ್ದರೆ ಇನ್ನು ಮುಂದೆ ಡಂಡ : ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಅಧಿಸೂಚನೆ Rating: 5 Reviewed By: karavali Times
Scroll to Top