ಡೆಲ್ಲಿ ವಿರುದ್ದ ಹೋರಾಡಿ ಸೋತರೂ ಪ್ಲೇ ಆಫ್‌ ಪ್ರವೇಶಿಸಿದ ಆರ್‌ಸಿಬಿ - Karavali Times ಡೆಲ್ಲಿ ವಿರುದ್ದ ಹೋರಾಡಿ ಸೋತರೂ ಪ್ಲೇ ಆಫ್‌ ಪ್ರವೇಶಿಸಿದ ಆರ್‌ಸಿಬಿ - Karavali Times

728x90

2 November 2020

ಡೆಲ್ಲಿ ವಿರುದ್ದ ಹೋರಾಡಿ ಸೋತರೂ ಪ್ಲೇ ಆಫ್‌ ಪ್ರವೇಶಿಸಿದ ಆರ್‌ಸಿಬಿ

 


ಅಬುಧಾಬಿ, ನ.  03, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಐಪಿಎಲ್ ಮಹತ್ವದ ಪಂದ್ಯದಲ್ಲಿ ಆರ್ಸಿಬಿ ತಂಡ ಡೆಲ್ಲಿ ವಿರುದ್ಧ ಆರು ವಿಕೆಟ್ ಗಳಿಂದ ಸೋತಿದೆ. ಆದರೂ ರಾಯಲ್‌ ಚಾಲೆಂಜರ್ಸ್‌ ಪ್ಲೇ ಆಫ್‌ಗೆ ಪ್ರವೇಶ ಪಡೆದಿದೆ. ಕೋಲ್ಕತ್ತಾಕ್ಕಿಂತ  ಉತ್ತಮ ರನ್‌ ರೇಟ್‌ ಹೊಂದಿದ್ದ ಕಾರಣ ಆರ್‌ಸಿಬಿಯ ಪ್ಲೇ ಆಫ್‌ ಕನಸು ನನಸಾಗಿದೆ.

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಬೆಂಗಳೂರು 7 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿತು. ಸುಲಭ ಸವಾಲು ಬೆನ್ನಟ್ಟಿದ ಡೆಲ್ಲಿ 19 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 154 ರನ್ ಭಾರಿಸಿ ಗೆಲುವಿನ ನಗೆ ಬೀರುವ ಮೂಲಕ   16 ಅಂಕಗಳೊಂದಿಗೆ ಎರಡನೇ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸಿದೆ.

ಡೆಲ್ಲಿ ಪರ ಶಿಖರ್‌ ಧವನ್‌ 54 ರನ್‌ (41 ಎಸೆತ,6 ಬೌಂಡರಿ), ಅಜಿಂಕ್ಯಾ ರಹಾನೆ 60 ರನ್‌ (46 ಎಸೆತ, 5 ಬೌಂಡರಿ,1 ಸಿಕ್ಸ್‌) ಭಾರಿಸಿದರು.

ಕೋಲ್ಕತ್ತಾದ ಪ್ಲೇ ಆಫ್‌ ಭವಿಷ್ಯ ಮಂಗಳವಾರ ನಡೆಯಲಿರುವ ಪಂದ್ಯದ ಫಲಿತಾಂಶವನ್ನು ಅವಲಂಬಿಸಿದೆ. ಮುಂಬೈ ವಿರುದ್ಧ ಹೈದರಾಬಾದ್‌ ಸೋತರೆ ಕೋಲ್ಕತ್ತಾ 14 ಅಂಕದ ಆಧಾರದ ಮೇಲೆ 4ನೇ ತಂಡವಾಗಿ ಪ್ಲೇ ಆಫ್‌ ಪ್ರವೇಶಲಿದೆ.

ಸೋಮವಾರದ ಪಂದ್ಯದಲ್ಲಿ ಒಂದು ವೇಳೆ 17.3 ಓವರ್ ಅಥವಾ ಅದಕ್ಕಿಂತ ಕಡಿಮೆ ಓವರಿನಲ್ಲಿ ಡೆಲ್ಲಿ ಗೆದ್ದಿದ್ದರೆ ಆರ್‌ಸಿಬಿ ನೆಟ್‌ ರನ್‌ ರೇಟ್‌ ಕೋಲ್ಕತ್ತಾಕ್ಕಿಂತ ಕಡಿಮೆ ಇರುತ್ತಿತ್ತು. ಒಂದು ವೇಳೆ ಆರ್‌ಸಿಬಿ 19 ರನ್‌ ಅಂತರದಿಂದ ಗೆದ್ದಿದ್ದರೆ ಡೆಲ್ಲಿ ನೆಟ್‌ ರನ್‌ ರೇಟ್‌ ಕೋಲ್ಕತ್ತಾಕ್ಕಿಂತ ಕಡಿಮೆ ಆಗುತ್ತಿತ್ತು.

ಇಂದಿನ ಪಂದ್ಯಕ್ಕೂ ಮೊದಲು ಆರ್‌ಸಿಬಿ ನೆಟ್‌ ರನ್‌ ರೇಟ್‌ -0.145 ಇದ್ದರೆ ಡೆಲ್ಲಿ -0.159 ಇತ್ತು. ಆದರೆ ಈಗ ಆರ್‌ಸಿಬಿ ನೆಟ್‌ ರನ್‌ ರೇಟ್‌ -0.172ಗೆ ಜಾರಿದರೆ ಕೋಲ್ಕತ್ತಾ -0.214 ನೆಟ್‌ ರನ್‌ ರೇಟ್‌ ಹೊಂದಿದೆ.

ಆರ್‌ಸಿಬಿ ಪರ ಪಡಿಕ್ಕಲ್‌ 50 ರನ್‌ (41 ಎಸೆತ, 5 ಬೌಂಡರಿ), ಕೊಹ್ಲಿ 29 ರನ್‌ (24 ಎಸೆತ, 2 ಬೌಂಡರಿ,1 ಸಿಕ್ಸರ್‌) ಎಬಿ ಡಿವಿಲಿರ್ಸ್‌ 35 ರನ್‌ (21 ಎಸೆತ, 1 ಬೌಂಡರಿ, 2 ಸಿಕ್ಸರ್‌) ಶಿವಂ ದುಬೆ 17 ರನ್‌ (11 ಎಸೆತ, 2 ಬೌಂಡರಿ,1 ಸಿಕ್ಸರ್‌) ಭಾರಿಸಿದರು.







  • Blogger Comments
  • Facebook Comments

0 comments:

Post a Comment

Item Reviewed: ಡೆಲ್ಲಿ ವಿರುದ್ದ ಹೋರಾಡಿ ಸೋತರೂ ಪ್ಲೇ ಆಫ್‌ ಪ್ರವೇಶಿಸಿದ ಆರ್‌ಸಿಬಿ Rating: 5 Reviewed By: karavali Times
Scroll to Top