ಬುಮ್ರಾ, ಬೌಲ್ಟ್ ದಾಳಿಗೆ ಕಂಗೆಟ್ಟ ಡೆಲ್ಲಿ : ಐಪಿಎಲ್ ಫೈನಲ್ ಹಂತಕ್ಕೇರಿದ ಮುಂಬೈ - Karavali Times ಬುಮ್ರಾ, ಬೌಲ್ಟ್ ದಾಳಿಗೆ ಕಂಗೆಟ್ಟ ಡೆಲ್ಲಿ : ಐಪಿಎಲ್ ಫೈನಲ್ ಹಂತಕ್ಕೇರಿದ ಮುಂಬೈ - Karavali Times

728x90

5 November 2020

ಬುಮ್ರಾ, ಬೌಲ್ಟ್ ದಾಳಿಗೆ ಕಂಗೆಟ್ಟ ಡೆಲ್ಲಿ : ಐಪಿಎಲ್ ಫೈನಲ್ ಹಂತಕ್ಕೇರಿದ ಮುಂಬೈ

 


ಒಂದೇ ಪಂದ್ಯದಲ್ಲಿ 6 ದಾಂಡಿಗರು ಡಕೌಟ್


ದುಬೈ, ನ. 06, 2020 (ಕರಾವಳಿ ಟೈಮ್ಸ್) : ಇಲ್ಲಿನ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಮೊದಲ ಕ್ವಾಲಿಫಯರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 57 ರನ್‍ಗಳ ಅಂತರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪರಾಭವಗೊಳಿಸಿ ಐಪಿಎಲ್-2020 ರ ಫೈನಲ್ ಹಂತಕ್ಕೇರಿದೆ.

 ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ ಬೇಗನೇ ಔಟ್ ಆದರೂ ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಅವರ ಉಪಯುಕ್ತ ಆಟದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 200 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಟ್ರೆಂಟ್ ಬೌಲ್ಟ್ ಹಾಗೂ ಜಸ್ಪ್ರೀತ್ ಬುಮ್ರಾ ದಾಳಿಗೆ ತತ್ತರಿಸಿ ನಿಗದಿತ 20 ಓವರಿನಲ್ಲಿ 143 ರನ್‍ ಗಳಿಸಿ ಪರಾಭವಗೊಡಿತು.

 ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಅಕ್ಷರಶಃ ಪರಾಕ್ರಮ ಮೆರೆದರು. ತಮ್ಮ ಕೋಟಾದ ನಾಲ್ಕು ಓವರ್ ಬೌಲ್ ಮಾಡಿದ ಬುಮ್ರಾ ಒಂದು ಮೇಡನ್ ಸಹಿತ ಕೇವಲ 14 ರನ್ ನೀಡಿ 4 ಪ್ರಮುಖ ವಿಕೆಟ್ ಕಿತ್ತರು. ಟ್ರೆಂಟ್ ಬೌಲ್ಟ್ 2 ಓವರ್ ಬೌಲ್ ಮಾಡಿ ಕೇವಲ 9 ರನ್ ನೀಡಿ 2 ವಿಕೆಟ್ ಕಿತ್ತರು. 

 ಪಂದ್ಯದಲ್ಲಿ ಐಪಿಎಲ್ ಇತಿಹಾಸದಲ್ಲೇ ಒಂದೇ ಪಂದ್ಯದಲ್ಲಿ ಆರು ಜನ ಆಟಗಾರರು ಶೂನ್ಯಕ್ಕೆ ಔಟ್ ಆಗಿದ್ದಾರೆ. ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡದಿಂದ ನಾಯಕ ರೋಹಿತ್ ಶರ್ಮಾ ಮತ್ತು ಕೀರನ್ ಪೊಲಾರ್ಡ್ ಶೂನ್ಯಕ್ಕೆ ಔಟ್ ಆದರೆ, ಡೆಲ್ಲಿ ತಂಡದ ಪೃಥ್ವಿ ಶಾ, ಶಿಖರ್ ಧವನ್, ಅಜಿಂಕ್ಯ ರಹಾನೆ ಮತ್ತು ಡೇನಿಯಲ್ ಸ್ಯಾಮ್ಸ್ ಶೂನ್ಯಕ್ಕೆ ಔಟ್ ಆದರು.

ಮುಂಬೈ ಇಂಡಿಯನ್ಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಮುಂಬೈ ವೇಗಿ ಟ್ರೆಂಟ್ ಬೌಲ್ಟ್ ಅವರು ಡಬಲ್ ಶಾಕ್ ನೀಡಿದರು. ಆರಂಭಿಕನಾಗಿ ಕಣಕ್ಕಿಳಿದ ಪೃಥ್ವಿ ಶಾ ಇನ್ನಿಂಗ್ಸ್ ನ ಎರಡನೇ ಬಾಲಿನಲ್ಲಿ ಕ್ಯಾಚ್ ನೀಡಿ ಶೂನ್ಯಕ್ಕೆ ಔಟ್ ಆದರು. ನಂತರ ಬಂದ ಅಜಿಂಕ್ಯ ರಹಾನೆ ಅವರು ಕೂಡ ಮೊದಲನೇ ಓವರಿನ 5ನೇ ಎಸೆತದಲ್ಲಿ ಶೂನ್ಯ ಸುತ್ತಿ ಟ್ರೆಂಟ್ ಬೌಲ್ಟ್ ಗೆ ವಿಕೆಟ್ ಒಪ್ಪಿಸಿದರು. 

ಎರಡನೇ ಓವರ್ ದಾಳಿಗಿಳಿದ ಜಸ್ಪ್ರೀತ್ ಬುಮ್ರಾ ತಮ್ಮ ಸ್ಪೀಡ್ ಯಾರ್ಕರ್ ಮೂಲಕ ಶಿಖರ್ ಧವನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ನಂತರ ತಾಳ್ಮೆಯಿಂದ ಬ್ಯಾಟ್ ಬೀಸುತ್ತಿದ್ದ ನಾಯಕ ಶ್ರೇಯಸ್ ಐಯ್ಯರ್ ಅವರೂ ಕೂಡಾ ಬುಮ್ರಾಗೆ ವಿಕೆಟ್ ಒಪ್ಪಿಸಿದರು. 

ಒಂದೆಡೆ ವಿಕೆಟ್ ಉರುಳುತ್ತಿದ್ದರೂ  ಉತ್ತಮವಾಗಿ ಆಡಿದ ಮಾರ್ಕಸ್ ಸ್ಟೊಯಿನಿಸ್ ಅವರು 36 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.








  • Blogger Comments
  • Facebook Comments

0 comments:

Post a Comment

Item Reviewed: ಬುಮ್ರಾ, ಬೌಲ್ಟ್ ದಾಳಿಗೆ ಕಂಗೆಟ್ಟ ಡೆಲ್ಲಿ : ಐಪಿಎಲ್ ಫೈನಲ್ ಹಂತಕ್ಕೇರಿದ ಮುಂಬೈ Rating: 5 Reviewed By: karavali Times
Scroll to Top