ಮಾನವ ತನ್ನ ಅಸ್ತಿತ್ವ ಅರಿತುಕೊಂಡಾಗ ಭಗವಂತನನ್ನು ಅರಿತುಕೊಂಡಂತೆ : ಇರ್ಶಾದ್ ದಾರಿಮಿ - Karavali Times ಮಾನವ ತನ್ನ ಅಸ್ತಿತ್ವ ಅರಿತುಕೊಂಡಾಗ ಭಗವಂತನನ್ನು ಅರಿತುಕೊಂಡಂತೆ : ಇರ್ಶಾದ್ ದಾರಿಮಿ - Karavali Times

728x90

13 December 2020

ಮಾನವ ತನ್ನ ಅಸ್ತಿತ್ವ ಅರಿತುಕೊಂಡಾಗ ಭಗವಂತನನ್ನು ಅರಿತುಕೊಂಡಂತೆ : ಇರ್ಶಾದ್ ದಾರಿಮಿ
ಬಂಟ್ವಾಳ, ಡಿ. 13, 2020 (ಕರಾವಳಿ ಟೈಮ್ಸ್) : ಭಗವಂತನನ್ನು ಅರಿಯಬೇಕಾದರೆ ಮಾನವ ಸ್ವತಃ ತನ್ನ ಅಸ್ತಿತ್ವವನ್ನು ಅರ್ಥ ಮಾಡಿಕೊಂಡರೆ ಸಾಕು. ತನ್ನ ಸೃಷ್ಟಿ, ತನ್ನ ದೇಹದ ವಿವಿಧ ಅಂಗಾಂಗಗಳ ಸಹಿತ ಲೋಕದಲ್ಲಿ ದೊರೆತ ಅನುಗ್ರಗಗಳನ್ನು ದಯಪಾಲಿಸಿದ ಒಂದು ಶಕ್ತಿಯೇ ಭಗವಂತ. ಅಂತಹ ದೇವರನ್ನು ಅರ್ಥೈಸಿ ಅವನ ಅನುಗ್ರಹಗಳಿಗೆ ಸ್ತುತಿ ಅರ್ಪಿಸಿ ಜೀವಿಸಿದಾಗ ಜೀವನ ಧನ್ಯ ಎಂದು ಬಂಟ್ವಾಳ ವಲಯ ಎಸ್ಕೆಎಸ್ಸೆಸ್ಸೆಫ್ ಅಧ್ಯಕ್ಷ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಹೇಳಿದರು

ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಶಾಖಾ ವತಿಯಿಂದ ಭಾನುವಾರ ರಾತ್ರಿ ಇಲ್ಲಿನ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಛೇರಿಯಲ್ಲಿ ನಡೆದ ಶಂಸುಲ್ ಉಲಮಾ (ಖ.ಸಿ) ಹಾಗೂ ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಸಂಗಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಅಲ್ಲಾಹನ ಆದೇಶಗಳನ್ನು ಶಿರಸಾ ವಹಿಸಿ ಜೀವಿಸಿ, ಅವನ ಸಂತೃಪ್ತಿ ಗಳಿಸಿ ಮರಣ ಹೊಂದಿದ ಅಲ್ಲಾಹನ ಇಷ್ಟ ದಾಸರನ್ನು ಪ್ರೀತಿಸಿ ಗೌರವಿಸಿದಾಗ ಅಲ್ಲಾಹನ ಸಾಮೀಪ್ಯ ಸಂಪಾದಿಸಲು ಸಾಧ್ಯ ಎಂದರು.

 ಶಾಖಾಧ್ಯಕ್ಷ ಮುಹಮ್ಮದ್ ಹನೀಫ್ ಹಾಸ್ಕೋ ಅಧ್ಯಕ್ಷತೆ ವಹಿಸಿದ್ದರು.  ಖಲೀಲ್ ದಾರಿಮಿ ಉದ್ಘಾಟಿಸಿದರು. ಪಾಣೆಮಂಗಳೂರು ಕ್ಲಸ್ಟರ್ ಅಧ್ಯಕ್ಷ ಅಬೂಸ್ವಾಲಿಹ್ ಫೈಝಿ ಅನುಸ್ಮರಣಾ ಭಾಷಣಗೈದರು.

ಪ್ರಮುಖರಾದ ಅಬ್ದುಲ್ ಖಾದರ್ ಹಾಜಿ ಬೋಗೋಡಿ, ಪಿ.ಬಿ. ಹಾಮದ್ ಹಾಜಿ ಬಂಗ್ಲೆಗುಡ್ಡೆ, ಅಬ್ದುಲ್ ಖಾದರ್ ಮದನಿ, ಅಬೂಬಕರ್ ಮದನಿ, ಹನೀಫ್ ಯಮಾನಿ, ಅಬ್ದುಲ್ಲಾಹ್ ರಬ್ಬಾನಿ, ಅಬೂಬಕರ್ ಹಾಜಿ ಎನ್.ಬಿ., ಅಬ್ದುಲ್ ಮಜೀದ್ ಬೋಳಂಗಡಿ, ಇಸಾಕ್ ಫೇಶನ್ ವೇರ್, ಮುಹಮ್ಮದ್ ಶಫೀಕ್, ಬಶೀರ್ ಕೆ4, ರಫೀಕ್ ಇನೋಳಿ, ಸಿ.ಪಿ. ಶಾಕಿರ್, ಅಬ್ದುಲ್ ಜಬ್ಬಾರ್ ಬುರ್ಖಾ, ಸಲಾಂ ಸೆಂಟರಿಂಗ್, ಸುಲೈಮಾನ್ ಬೋಳಂಗಡಿ,‌ ಅಬ್ದುಲ್ ಖಾದರ್ ಪೈಂಟರ್,  ಹನೀಫ್ ಡ್ರೈ ಫಿಶ್, ಅಬ್ದುಲ್ ಮುತ್ತಲಿಬ್, ಮುಹಮ್ಮದ್ ಬಂಗ್ಲೆಗುಡ್ಡೆ ಮೊದಲಾದವರು ಭಾಗವಹಿಸಿದ್ದರು.

ಇದೇ ವೇಳೆ ಇರ್ಶಾದ್ ದಾರಿಮಿ ನೇತೃತ್ವದಲ್ಲಿ
ಶಂಸುಲ್ ಉಲಮಾ ಮೌಲಿದ್ ನಡೆಯಿತು.  ಶಾಖಾ ಕಾರ್ಯದರ್ಶಿ ಅಬ್ದುಲ್ ಬಶೀರ್ ಎನ್. ಸ್ವಾಗತಿಸಿ, ಅಬ್ದುಲ್‌ ಅಝೀಝ್ ಪಿ.ಐ. ವಂದಿಸಿದರು.

  • Blogger Comments
  • Facebook Comments

0 comments:

Post a Comment

Item Reviewed: ಮಾನವ ತನ್ನ ಅಸ್ತಿತ್ವ ಅರಿತುಕೊಂಡಾಗ ಭಗವಂತನನ್ನು ಅರಿತುಕೊಂಡಂತೆ : ಇರ್ಶಾದ್ ದಾರಿಮಿ Rating: 5 Reviewed By: karavali Times
Scroll to Top