ಧಾರ್ಮಿಕ ಪಂಡಿತರ ಅಸ್ತಿತ್ವವೇ ಪವಿತ್ರ ಇಸ್ಲಾಮಿನ ಜೀವಾಳ : ಬಂಬ್ರಾಣ ಉಸ್ತಾದ್ - Karavali Times ಧಾರ್ಮಿಕ ಪಂಡಿತರ ಅಸ್ತಿತ್ವವೇ ಪವಿತ್ರ ಇಸ್ಲಾಮಿನ ಜೀವಾಳ : ಬಂಬ್ರಾಣ ಉಸ್ತಾದ್ - Karavali Times

728x90

18 December 2020

ಧಾರ್ಮಿಕ ಪಂಡಿತರ ಅಸ್ತಿತ್ವವೇ ಪವಿತ್ರ ಇಸ್ಲಾಮಿನ ಜೀವಾಳ : ಬಂಬ್ರಾಣ ಉಸ್ತಾದ್













ಮಿತ್ತಬೈಲು ಉಸ್ತಾದರ ಅನುಸ್ಮರಣಾ ಕಾರ್ಯಕ್ರಮ


ಬಂಟ್ವಾಳ, ಡಿ. 19, 2020 (ಕರಾವಳಿ ಟೈಮ್ಸ್) : ಪವಿತ್ರ ಇಸ್ಲಾಮಿನ ಅಸ್ತಿತ್ವ ಇರುವುದೇ ಧಾರ್ಮಿಕ ಪಂಡಿತರ ಅಸ್ತಿತ್ವದಿಂದಾಗಿದೆ. ಈ ಕಾರಣಕ್ಕಾಗಿ ಧಾರ್ಮಿಕ ಪಂಡಿತರಿಗೆ ಪರಮ ಗೌರವ ನೀಡಬೇಕಾದುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹಾಜಿ ಬಿ ಕೆ ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಬ್ರಾಣ ಹೇಳಿದರು. 

ಮಿತ್ತಬೈಲು ಉಸ್ತಾದರ ಶಿಷ್ಯಂದಿರ ಸಂಘಟನೆಯದ ಮದೀನತುಲ್ ಉಲಮಾ ಎಸೋಸಿಯೇಶನ್ ಮಿತ್ತಬೈಲು ಇದರ ಆಶ್ರಯದಲ್ಲಿ ಶೈಖುನಾ ಮರ್‍ಹೂಂ ಮಿತ್ತಬೈಲು ಉಸ್ತಾದರ 2ನೇ ಆಂಡ್ ನೇರ್ಚೆ ಪ್ರಯುಕ್ತ ಮಿತ್ತಬೈಲು ಉಸ್ತಾದರ ನಿವಾಸದಲ್ಲಿ ಶನಿವಾರ ನಡೆದ ಅನುಸ್ಮರಣಾ ಸಂಗಮ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಧಾರ್ಮಿಕ ವಿಷಯದಲ್ಲಿ ಅಪಾರ ಪರಿಣತಿ ಹೊಂದಿದ್ದ ಮಹಾ ಪಂಡಿತರಾಗಿದ್ದರು ಶೈಖುನಾ ಮಿತ್ತಬೈಲು ಜಬ್ಬಾರ್ ಉಸ್ತಾದ್. ಯಾವುದೇ ಕ್ಲಿಷ್ಟಕರ ಸಮಸ್ಯೆಗಳಿದ್ದರೂ ನಿಮಿಷದ ಅಂತರದಲ್ಲಿ ಪರಿಹರಿಸಿಕೊಡುವ ಸಾಮರ್ಥ್ಯ ಅವರಲ್ಲಿತ್ತು. ಅಂತಹ ಮಹಾನುಭಾವರುಗಳ ಅನುಸ್ಮರಣೆ ನಡೆಸುವುದು ನಮ್ಮೆಲ್ಲರ ಇಹ-ಪರ ವಿಜಯಕ್ಕೆ ಹೇತು ಎಂದರು. 

ಉಸ್ತಾದರ ಸುಪುತ್ರ ಇರ್ಶಾದ್ ದಾರಿಮಿ ಅಲ್-ಜಝರಿ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದರು. ಉಸ್ತಾದರ ಸಹೋದರ ಶೈಖುನಾ ಬೊಳ್ಳೂರು ಉಸ್ತಾದ್ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಡಾ. ಹೈದರ್, ಅಬೂಬಕ್ಕರ್ ಹಾಜಿ ಕಟ್ಟೆಕಾರ್ ಉಸ್ತಾದ್, ಹಂಝ ಉಸ್ತಾದ್, ಅಝೀಝ್ ದಾರಿಮಿ, ಅಶ್ರಫ್ ಫೈಝಿ, ಅಬ್ಬಾಸ್ ಫೈಝಿ, ಫಾರೂಕ್ ಫೈಝಿ ಮೊದಲಾದವರು ಅನುಸ್ಮರಣಾ ಭಾಷಣಗೈದರು. 

ಸಯ್ಯಿದ್ ಅಕ್ರಂ ಹಸನ್ ತಂಙಳ್, ಮಿತ್ತಬೈಲು ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಸಾಗರ್, ಕಾರ್ಯದರ್ಶಿ ಅಬ್ದುಸ್ಸಲಾಂ, ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ಹಮೀದ್, ಉಮರ್ ಫೈಝಿ ಸಾಲ್ಮರ, ಉಸ್ಮಾನ್ ದಾರಿಮಿ, ಇಬ್ರಾಹಿಂ ದಾರಿಮಿ, ಮಜೀದ್ ಫೈಝಿ ನಂದಾವರ ಮೊದಲಾದವರು ಭಾಗವಹಿಸಿದ್ದರು. 

ಅಬ್ದುಲ್ ರಹಿಮಾನ್ ದಾರಿಮಿ ಬುರ್‍ಹಾನಿ ಸ್ವಾಗತಿಸಿ, ಜಿ ಎಂ ಅಬ್ದುಲ್ಲ ಫೈಝಿ ವಂದಿಸಿದರು. ಅಮೀರ್ ಅರ್ಶದಿ ಕಿರಾಅತ್ ಪಠಿಸಿದರು. ಖಲಂದರ್ ತುಂಬೆ ಕಾರ್ಯಕ್ರಮ ನಿರೂಪಿಸಿದರುರ. 

ಸುಬ್‍ಹಿ ನಮಾಝ್ ಬಳಿಕ ಶೈಖುನಾ ಜಬ್ಬಾರ್ ಉಸ್ತಾದರ ಕಬ್‍ರ್ ಝಿಯಾರತ್‍ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಖತ್ಮುಲ್ ಕುರ್‍ಆನ್, ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೇತೃತ್ವದಲ್ಲಿ ಮೌಲಿದ್ ಪಾರಾಯಣ ನಡೆಯಿತು. 









  • Blogger Comments
  • Facebook Comments

0 comments:

Post a Comment

Item Reviewed: ಧಾರ್ಮಿಕ ಪಂಡಿತರ ಅಸ್ತಿತ್ವವೇ ಪವಿತ್ರ ಇಸ್ಲಾಮಿನ ಜೀವಾಳ : ಬಂಬ್ರಾಣ ಉಸ್ತಾದ್ Rating: 5 Reviewed By: karavali Times
Scroll to Top