2ನೇ ತರಗತಿವರೆಗೆ ಹೋಮ್ ವರ್ಕ್ ನೀಡುವಂತಿಲ್ಲ, ಅಧಿಕ ಭಾರದ ಬ್ಯಾಗ್ ಹೊರಿಸುವಂತಿಲ್ಲ : ಕೇಂದ್ರ ಶಿಕ್ಷಣ ಸಚಿವಾಲಯದ ಮಾರ್ಗಸೂಚಿ ಪ್ರಕಟ - Karavali Times 2ನೇ ತರಗತಿವರೆಗೆ ಹೋಮ್ ವರ್ಕ್ ನೀಡುವಂತಿಲ್ಲ, ಅಧಿಕ ಭಾರದ ಬ್ಯಾಗ್ ಹೊರಿಸುವಂತಿಲ್ಲ : ಕೇಂದ್ರ ಶಿಕ್ಷಣ ಸಚಿವಾಲಯದ ಮಾರ್ಗಸೂಚಿ ಪ್ರಕಟ - Karavali Times

728x90

9 December 2020

2ನೇ ತರಗತಿವರೆಗೆ ಹೋಮ್ ವರ್ಕ್ ನೀಡುವಂತಿಲ್ಲ, ಅಧಿಕ ಭಾರದ ಬ್ಯಾಗ್ ಹೊರಿಸುವಂತಿಲ್ಲ : ಕೇಂದ್ರ ಶಿಕ್ಷಣ ಸಚಿವಾಲಯದ ಮಾರ್ಗಸೂಚಿ ಪ್ರಕಟ



ನವದೆಹಲಿ, ಡಿ. 09, 2020 (ಕರಾವಳಿ ಟೈಮ್ಸ್) : ಕೇಂದ್ರ ಶಿಕ್ಷಣ ಸಚಿವಾಲಯದ ‘ಪಾಲಿಸಿ ಆನ್ ಸ್ಕೂಲ್ ಬ್ಯಾಗ್ 2020’ ಮಾರ್ಗಸೂಚಿಯನ್ವಯ ಕೇಂದ್ರ ಸರಕಾರ ಮಹತ್ವದ ಅಧಿಸೂಚನೆ ಹೊರಡಿಸಿದ್ದು, 2ನೇ ತರಗತಿವರೆಗೆ ಮಕ್ಕಳಿಗೆ ಹೋಮ್ ವರ್ಕ್ ನೀಡುವಂತಿಲ್ಲ ಹಾಗೂ ಶಾಲಾ ಮಕ್ಕಳಿಗೆ ದೇಹದ ತೂಕದ ಶೇ. 10ಕ್ಕಿಂತ ಅಧಿಕ ಭಾರದ ಬ್ಯಾಗ್‍ಗಳನ್ನು ಹೊರಿಸುವಂತಿಲ್ಲ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. 

ಮಾರ್ಗಸೂಚಿಯನ್ವಯ, ಶಾಲಾ ಮಕ್ಕಳ ಬ್ಯಾಗ್ ತೂಕವನ್ನು ಶಾಲೆಗಳಲ್ಲಿ ನಿತ್ಯ ಗಮನಿಸುತ್ತಿರಬೇಕು. ಇದು ಲಘು ತೂಕದ್ದಾಗಿದ್ದು, ಎರಡು ಪಟ್ಟಿಗಳನ್ನು ಹೊಂದಿ ಮಕ್ಕಳ ಹೆಗಲಿನ ಎರಡೂ ಬದಿಗೆ ಸಮತೂಕ ಬೀಳುವ ರೀತಿಯಲ್ಲಿರಬೇಕು. ಚಕ್ರ ಇರುವ ಸ್ಕೂಲ್ ಬ್ಯಾಗ್‍ಗಳಿಗೆ ಅವಕಾಶ ಇಲ್ಲ. ಪ್ರಕಾಶಕರು ಮುದ್ರಿಸುವ ಪಠ್ಯಪುಸ್ತಕದ ತೂಕವನ್ನೂ ಶಿಕ್ಷಣ ನೀತಿ ಮಾರ್ಗಸೂಚಿಯಲ್ಲಿ ಸೂಚಿಸಿದೆ. 

ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‍ಸಿಇಆರ್‍ಟಿ) ನಡೆಸಿದ ಸಮೀಕ್ಷೆ ಹಾಗೂ ಅಧ್ಯಯನಗಳ ಆಧಾರದಲ್ಲಿ ಈ ಮಾರ್ಗಸೂಚಿ ತಯಾರಿಸಲಾಗಿದೆ. 2 ರಿಂz 10ನೇ ತರಗತಿವರೆಗಿನ ಮಕ್ಕಳಿಗೆ ಅವರ ದೇಹತೂಕದ ಶೇಕಡ 10ಕ್ಕಿಂತ ಹೆಚ್ಚು ಭಾರದ ಸ್ಕೂಲ್ ಬ್ಯಾಗ್‍ಗಳನ್ನು ಹೊರಿಸುವಂತಿಲ್ಲ ಹಾಗೂ 2ನೇ ತರಗತಿವರೆಗಿನ ಮಕ್ಕಳಿಗೆ ಹೋಮ್ ವರ್ಕ್ ನೀಡುವಂತಿಲ್ಲ ಎಂದು ಶಿಫಾರಸ್ಸು ಮುಖ್ಯವಾಗಿ ಬೊಟ್ಟು ಮಾಡಿದೆ. 

ನೂತನ ಶಿಕ್ಷಣ ನೀತಿಯು ಶಾಲಾ ಮಕ್ಕಳ ಬ್ಯಾಗ್‍ಗೆ ಸಂಬಂದಿಸಿದಂತೆ 11 ಶಿಫಾರಸುಗಳನ್ನು ಮಾಡಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಮಧ್ಯಾಹ್ನದ ಊಟ, ಕುಡಿಯಲು ಶುದ್ಧ ನೀರು ಒದಗಿಸುವ ಮೂಲಕ ಮಕ್ಕಳು ಲಂಚ್ ಬಾಕ್ಸ್ ಮತ್ತು ನೀರಿನ ಬಾಟಲಿ ಒಯ್ಯುವುದನ್ನು ತಪ್ಪಿಸಬೇಕು. ಇದು ಆಯಾ ಶಾಲೆಗಳ ಜವಾಬ್ದಾರಿಯಾಗಿರುತ್ತದೆ ಎಂದು ಶಿಫಾರಸ್ಸು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಪುಸ್ತಕ ಬ್ಯಾಂಕ್ ಮೂಲಕ ವಿಶೇಷ ಅಗತ್ಯತೆಯ ಮಕ್ಕಳಿಗೆ ಎರಡು ಸೆಟ್ ಪುಸ್ತಕಗಳನ್ನು ಒದಗಿಸಬೇಕು ಮತ್ತು ಶಾಲೆಗಳಲ್ಲಿ ಇದಕ್ಕೆ ಲಾಕರ್‍ಗಳನ್ನು ಒದಗಿಸಬೇಕು ಎಂದೂ ಶಿಫಾರಸು ಮಾಡಲಾಗಿದೆ. 

ಮಕ್ಕಳಿಗಾಗಿ ಪಠ್ಯಪುಸ್ತಕವನ್ನು ಆಯ್ಕೆ ಮಾಡಲು, ತೂಕದ ಮಾನ ದಂಡವನ್ನು ಗಣನೆಗೆ ತೆಗೆದುಕೊಳ್ಳಬೇಕು. ಪ್ರತಿ ಪಠ್ಯ ಪುಸ್ತಕದ ಜೊತೆಗೆ ಗ್ರಾಮ್ಸ್ ಪರ್ ಸ್ಕ್ವೇರ್ ಮೀಟರ್ (ಜಿಎಸ್‍ಎಂ) ತೂಕವನ್ನು ಪ್ರಕಾಶಕರು ಪಠ್ಯ ಪುಸ್ತಕದಲ್ಲಿ ಮುದ್ರಿಸಬಹುದು. 1 ಮತ್ತು 2ನೇ ತರಗತಿಯ ಮಕ್ಕಳು ತುಂಬಾ ಚಿಕ್ಕವರಾಗಿರುವುದರಿಂದ ಅವರಿಗೆ ಯಾವುದೇ ರೀತಿಯ ಹೋಮ್ ವರ್ಕ್ ನೀಡಬೇಕಾಗಿಲ್ಲ. ಬದಲಿಗೆ ಅವರು ತಮ್ಮ ಸಂಜೆಯನ್ನು ಮನೆಯಲ್ಲಿ ಹೇಗೆ ಕಳೆದರು, ಅವರು ಆಡಿದ ಆಟಗಳು, ಅವರು ಸೇವಿಸಿದ ಆಹಾರ ಇತ್ಯಾದಿಗಳ ಬಗ್ಗೆ ಮಾತನಾಡಲು ತರಗತಿಯಲ್ಲಿ ಅವರನ್ನು ಅವಕಾಶ ನೀಡಬೇಕು. 3, 4 ಮತ್ತು  5ನೇ ತರಗತಿಯ ಮಕ್ಕಳಿಗೆ ವಾರಕ್ಕೆ ಗರಿಷ್ಠ ಎರಡು ಗಂಟೆಗಳು ಮಾತ್ರ ಹೋಮ್ ವರ್ಕ್ ನೀಡಬೇಕು. ಶಿಕ್ಷಕರು ಪ್ರತಿ ಮಗುವಿಗೆ ಸಂಜೆ ದಿನಚರಿ, ಹಿಂದಿನ ರಾತ್ರಿ ಅವರು ತೆಗೆದುಕೊಂಡ ಭೋಜನ, ಆಹಾರ ಪದಾರ್ಥಗಳು, ವಿವಿಧ ರೀತಿಯ ಆಹಾರಗಳ ಬಗ್ಗೆ ಅವರ ಇಷ್ಟಗಳು ಮತ್ತು  ಇಷ್ಟಪಡದಿರುವಿಕೆಗಳು, ಹೋಮ್ ವರ್ಕ್ ತಮ್ಮ ಮನೆಗಳಲ್ಲಿ ಯಾರು ಮಾಡುತ್ತಾರೆ ಎಂಬ ಅಂಶಗಳನ್ನು ಕಲೆಹಾಕಬೇಕು. 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ದಿನಕ್ಕೆ ಗರಿಷ್ಠ 1 ಹೋಮ್ ವರ್ಕ್ ಮಾತ್ರ ನೀಡಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.









  • Blogger Comments
  • Facebook Comments

0 comments:

Post a Comment

Item Reviewed: 2ನೇ ತರಗತಿವರೆಗೆ ಹೋಮ್ ವರ್ಕ್ ನೀಡುವಂತಿಲ್ಲ, ಅಧಿಕ ಭಾರದ ಬ್ಯಾಗ್ ಹೊರಿಸುವಂತಿಲ್ಲ : ಕೇಂದ್ರ ಶಿಕ್ಷಣ ಸಚಿವಾಲಯದ ಮಾರ್ಗಸೂಚಿ ಪ್ರಕಟ Rating: 5 Reviewed By: karavali Times
Scroll to Top