ಜ. 14 ರಂದು ಬಿ.ಸಿ.ರೋಡಿನಲ್ಲಿ ಕುಂಬಾರಿಕೆ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ - Karavali Times ಜ. 14 ರಂದು ಬಿ.ಸಿ.ರೋಡಿನಲ್ಲಿ ಕುಂಬಾರಿಕೆ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ - Karavali Times

728x90

12 January 2021

ಜ. 14 ರಂದು ಬಿ.ಸಿ.ರೋಡಿನಲ್ಲಿ ಕುಂಬಾರಿಕೆ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ

ಬಂಟ್ವಾಳ, ಜ. 12, 2021 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘ ನಿಯಮಿತದ ಕುಂಬಾರಿಕೆ ಉತ್ಪನ್ನಗಳ ಮಾರಾಟ ಮಳಿಗೆಯು ಬಿ.ಸಿ.ರೋಡಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿರುವ ಸಂಘದ ಸ್ವಂತ ಕಟ್ಟಡ ಅಚ್ಚುತ ಕಾಂಪ್ಲೆಕ್ಸ್‍ನಲ್ಲಿ ಜ. 14 ರಿಂದ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಅಧ್ಯಕ್ಷ ಭಾಸ್ಕರ ಎಂ. ಪೆರುವಾಯಿ ತಿಳಿಸಿದರು. ಮಂಗಳವಾರ ಸಂಜೆ ಬಿ ಸಿ ರೋಡಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್ ದಾಸ್ ಮಾರಾಟ ಮಳಿಗೆ ಉದ್ಘಾಟಿಸಲಿದ್ದು, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಅಧ್ಯಕ್ಷತೆ ವಹಿಸುವರು. ಬಂಟ್ವಾಳ ಪುರಸಭಾ ಸದಸ್ಯ ಹರಿಪ್ರಸಾದ್, ನಿವೃತ್ತ ಬ್ಯಾಂಕ್ ಮೆನೇಜರ್ ಸುಂದರ ಬಿ., ನಿವೃತ್ತ ಅಭಿಯಂತರ ಲೋಕನಾಥ್ ಡಿ. ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು. ಗ್ರಾಮೀಣ ಕುಂಬಾರಿಕೆಯ ಅಭಿವೃದ್ಧಿಗೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಕುಂಬಾರಿಕೆಯ ಮಾರಾಟ ಮಳಿಗೆ ತೆರೆಯಲಾಗುತ್ತಿದೆ. ಸಂಸ್ಥೆಯ ಮೂರನೇ ಶಾಖೆ ಇದಾಗಿದ್ದು, ಗ್ರಾಮೀಣ ಕುಂಬಾರರ ಕುಶಲ ಕರ್ಮಿಗಳಿಂದ ಗ್ರಾಹಕರಿಗೆ ನೇರವಾಗಿ ಗುಣಮಟ್ಟದ ಕುಂಬಾರಿಕೆ ಉತ್ಪನ್ನಗಳನ್ನು ದೊರೆಯುವಂತೆ ಮಾಡುವ ಉದ್ದೇಶವನ್ನು ಸಹಕಾರ ಸಂಘ ಹೊಂದಿದೆ ಎಂದರು. ದ.ಕ. ಜಿಲ್ಲೆಯಲ್ಲಿ ಎಲ್ಲಾ ಕುಶಲ ಕರ್ಮಿಗಳು ಉತ್ಪಾದಿಸಿದ ಎಲ್ಲಾ ರೀತಿಯ ಮಣ್ಣಿನ ಪರಿಕರಗಳನ್ನು ಸಹಕಾರ ಸಂಘ ಖರೀದಿಸಿ ಮಾರುಕಟ್ಟೆ ಒದಗಿಸುತ್ತದೆ. ಉತ್ಪನ್ನಗಳಿಗನುಸಾರವಾಗಿ ಅವರಿಗೆ ಪೆÇ್ರೀತ್ಸಾಧನವಾಗಿ ಬೋನಸ್ ನೀಡಲಾಗುತ್ತಿದೆ ಎಂದ ಅವರು ಪುತ್ತೂರು ಸಮೀಪದ ಕೌಡಿಚಾರಿನಲ್ಲಿರುವ ಸಂಘದ ಉತ್ಪಾದನಾ ಕೇಂದ್ರವನ್ನು ಅಧುನಿಕವಾಗಿ ಯಾಂತ್ರೀಕರಣಗೊಳಿಸುವ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸಿ ಸರಕಾರದ ಮುಂದೆ ಪ್ರಸ್ತಾಪ ಇಡಲು ಯೋಚಿಸಲಾಗಿದೆ ಎಂದರು. 1958ರಲ್ಲಿ ಪ್ರಾರಂಭಗೊಂಡ ಸಂಘವು ಗ್ರಾಮೀಣ ಕುಶಲ ಕರ್ಮಿಗಳಿಗೆ ಆಧುನಿಕ ರೀತಿಯ ತರಬೇತಿಯನ್ನು ನೀಡಿ ಅವರು ತಮ್ಮ ಗುಡಿಕೈಗಾರಿಕೆಯನ್ನು ಸ್ವತಂತ್ರವಾಗಿ ನಡೆಸಲು ಅನುಕೂಲವಾಗುವಂತೆ ಮಾರ್ಗದರ್ಶನ ನೀಡುತ್ತಿದೆ. ಸಂಘದ ಉತ್ಪಾದನಾ ತರಬೇತಿ ಕೇಂದ್ರದಲ್ಲಿ ಸುಂದರ ಹೂದಾನಿಗಳು, ಮ್ಯಾಜಿಕ್ ಜಗ್‍ಗಳು, ಅಲಂಕಾರಿಕ ಪಾತ್ರೆಗಳು, ನೀರಿನ ಹೂಜಿಗಳು, ವಿವಿಧ ವಿನ್ಯಾಸದ ಹೂ ಚಟ್ಟಿಗಳು, ತಂದೂರಿ ರೊಟ್ಟಿ ತಯಾರಿಸುವ ಗುಡಾಣಗಳು, ಹೈಟೆಕ್ ಯುಗದ ಹೊಟೇಲ್‍ಗಳನ್ನು ಅಲಂಕರಿಸುವ ಸುಂದರವಾದ ಮಣ್ಣಿನ ಕಲಾಕೃತಿಗಳು, ದಿನಬಳಕೆಯ ಮಣ್ಣಿನ ಪಾತ್ರೆಗಳು ಹಾಗೂ ಇನ್ನೂ ಹಲವು ಜನರ ಬೇಡಿಕೆಗೆ ಅನುಸಾರವಾಗಿ ಎಲ್ಲಾ ರೀತಿಯ ಉತ್ಪನ್ನಗಳು ನಮ್ಮ ಕಾರ್ಯಾಗಾರದಲ್ಲಿ ತಯಾರಾಗುತ್ತಿದೆ ಎಂದು ತಿಳಿಸಿದರು. 1958ರಲ್ಲಿ ಸ್ಥಾಪನೆಯಾದ ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘವು ನಿರಂತರವಾಗಿ ಲಾಭದಲ್ಲಿ ಮುನ್ನಡೆಯುತ್ತಿದೆ. 2019-20ರ ಸಾಲಿನಲ್ಲು 174.47 ಕೋಟಿ ರೂಪಾಯಿ ವ್ಯವಹಾರ ನಡೆಸಿದ್ದು, 85.83 ಲಕ್ಷ ರೂಪಾಯಿ ಲಾಭ ಗಳಿಸಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ದಾಮೋದರ ವಿ., ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ಜನಾರ್ದನ ಮೂಲ್ಯ, ನಿರ್ದೇಶಕರಾದ ಗಣೇಶ, ಪ್ರಶಾಂತ್ ಭಂಜನ್, ಸೇಸಪ್ಪ ಕುಲಾಲ್ ಉಪಸ್ಥಿತರಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಜ. 14 ರಂದು ಬಿ.ಸಿ.ರೋಡಿನಲ್ಲಿ ಕುಂಬಾರಿಕೆ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನೆ Rating: 5 Reviewed By: karavali Times
Scroll to Top