ಡಿವೈಎಫ್‍ಐ ನರಿಮೊಗರು ಘಟಕಾಧ್ಯಕ್ಷರಾಗಿ ಬಾರಿಕ್ ಮುಕ್ವೆ ಆಯ್ಕೆ - Karavali Times ಡಿವೈಎಫ್‍ಐ ನರಿಮೊಗರು ಘಟಕಾಧ್ಯಕ್ಷರಾಗಿ ಬಾರಿಕ್ ಮುಕ್ವೆ ಆಯ್ಕೆ - Karavali Times

728x90

9 January 2021

ಡಿವೈಎಫ್‍ಐ ನರಿಮೊಗರು ಘಟಕಾಧ್ಯಕ್ಷರಾಗಿ ಬಾರಿಕ್ ಮುಕ್ವೆ ಆಯ್ಕೆ

ಪುತ್ತೂರು, ಜ. 09, 2021 (ಕರಾವಳಿ ಟೈಮ್ಸ್) : ತಾಲೂಕಿನ ನರಿಮೊಗರು ಡಿವೈಎಫ್‍ಐ ನೂತನ ಘಟಕದ ಅಧ್ಯಕ್ಷರಾಗಿ ಬಾರಿಕ್ ಮುಕ್ವೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಮೊಯ್ದಿನ್ ಸಫ್ವಾನ್ ಅವರು ಆಯ್ಕೆಯಾಗಿದ್ದಾರೆ. ಮುಕ್ವೆ ಮಿನಿ ಹಾಲ್‍ನಲ್ಲಿ ಇತ್ತೀಚೆಗೆ ನಡೆದ ಘಟಕ ರೂಪಿಕರಣ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಉಪಾಧ್ಯಕ್ಷರಾಗಿ ಶರೀಫ್ ಕುದ್ಕೋಳಿ ಹಾಗೂ ಅಬ್ದುಲ್ ರಹಿಮಾನ್, ಜೊತೆ ಕಾರ್ಯದರ್ಶಿಗಳಾಗಿ ಜಾವೆದ್, ಸಾದಿಕ್ ಮುಕ್ವೆ-ಪುರುಷರಕಟ್ಟೆ, ಕೋಶಾಧಿಕಾರಿಯಾಗಿ ಮುಹಮ್ಮದ್ ಪಟ್ಬಾಂಬಿ ಅವರನ್ನು ಆರಿಸಲಾಯಿತು. ಡಿವೈಎಫ್‍ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮುಖಂಡ ರಿಯಾಝ್ ಮಾಂತೂರು, ಡಿವೈಎಫ್‍ಐ ಉಳ್ಳಾಲ ವಲಯಾಧ್ಯಕ್ಷ ಅಶ್ರಫ್ ಕೆ.ಸಿ.ರೊಡು ಘಟಕ ರಚನಾ ಸಭೆಯಲ್ಲಿ ಭಾಗವಹಿಸಿದ್ದರು.
  • Blogger Comments
  • Facebook Comments

0 comments:

Post a Comment

Item Reviewed: ಡಿವೈಎಫ್‍ಐ ನರಿಮೊಗರು ಘಟಕಾಧ್ಯಕ್ಷರಾಗಿ ಬಾರಿಕ್ ಮುಕ್ವೆ ಆಯ್ಕೆ Rating: 5 Reviewed By: karavali Times
Scroll to Top