ದ್ವಿಚಕ್ರ ವಾಹನಗಳ ಮೇಲೆ ಪೊಲೀಸರ ನಿರಂತರ ಕಾರ್ಯಾಚರಣೆಗೆ ಸವಾರರು ಗರಂ, ಮಾತಿನ ರಂಪಾಟ - Karavali Times ದ್ವಿಚಕ್ರ ವಾಹನಗಳ ಮೇಲೆ ಪೊಲೀಸರ ನಿರಂತರ ಕಾರ್ಯಾಚರಣೆಗೆ ಸವಾರರು ಗರಂ, ಮಾತಿನ ರಂಪಾಟ - Karavali Times

728x90

28 January 2021

ದ್ವಿಚಕ್ರ ವಾಹನಗಳ ಮೇಲೆ ಪೊಲೀಸರ ನಿರಂತರ ಕಾರ್ಯಾಚರಣೆಗೆ ಸವಾರರು ಗರಂ, ಮಾತಿನ ರಂಪಾಟ

ಬಂಟ್ವಾಳ, ಜ. 29, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡಿನಲ್ಲಿ ದ್ವಿಚಕ್ರ ವಾಹನಗಳಿಗೆ ಮಾತ್ರ ಸೀಮಿತಗೊಂಡು ನಿರಂತರ ನಡೆಯುತ್ತಿರುವ ಪೊಲೀಸ್ ಕಾರ್ಯಾಚರಣೆ ಪೊಲೀಸರು ಹಾಗೂ ಸವಾರರ ಮಧ್ಯೆ ಕಳೆದ ಒಂದೆರಡು ದಿನಗಳಲ್ಲಿ ಬೀದಿ ರಂಪಾಟಕ್ಕೆ ಕಾರಣವಾಗುತ್ತಿರುವ ಘಟನೆಗಳು ನಡೆಯುತ್ತಿದೆ. ಗುರುವಾರ ಸಂಜೆ ಬಿ ಸಿ ರೋಡು ರಾಷ್ಟ್ರೀಯ ಹೆದ್ದಾರಿ ಮಧ್ಯ ಭಾಗದಲ್ಲಿ ಟ್ರಾಫಿಕ್ ಎಸ್ಸೈ ಅವರು ಆರೇಳು ಮಂದಿ ಸಿಬ್ಬಂದಿಗಳೊಂದಿಗೆ ದ್ವಿಚಕ್ರ ವಾಹನ ಸವಾರರ ವಿರುದ್ದ ಕಾರ್ಯಾಚರಣೆ ಕೈಗೊಂಡಿದ್ದರು. ಈ ಸಂದರ್ಭ ಹಿಂಬದಿ ಸವಾರನಿಗೆ ಹೆಲ್ಮೆಟ್ ಧರಿಸದೆ ಸಿದ್ದಕಟ್ಟೆ ಮೂಲದ ಬೈಕ್ ಸವಾರ ಹೆದ್ದಾರಿಯಲ್ಲಿ ಬರುತ್ತಿದ್ದ ವೇಳೆ ಸ್ವತಃ ಟ್ರಾಫಿಕ್ ಎಸೈ ಅವರು ಬೈಕಿಗೆ ಅಡ್ಡ ಬಂದು ನಿಲ್ಲಿಸಿದ್ದಾರೆ. ಈ ಸಂದರ್ಭ ಸವಾರ ಈಗತಾನೆ ಆ ಕಡೆ ಹೋಗುವ ಸಂದರ್ಭ ನೀವೆ ನಿಲ್ಲಿಸಿ ದಂಡ ವಿಧಿಸಿದ್ದೀರಿ.‌ ಇದೀಗ ನಾನು ಅಲ್ಪ ಸಮಯದಲ್ಲೇ ಕೆಲಸ ಮುಗಿಸಿ ವಾಪಾಸು ಬಂದಿರುತ್ತೇನೆ. ದಂಡ ವಿಧಿಸಿದ ರಶೀದಿ ಕೈಯಲ್ಲಿದ್ದು, ವಾಹನದ ಉಳಿದೆಲ್ಲಾ ದಾಖಲೆಗಳು ಸಮರ್ಪಕವಾಗಿದೆ. ತೋರಿಸುತ್ತೇನೆ ಎಂದು ವಾಹನದ ಡ್ಯಾಶ್ ತೆರೆಯುವಷ್ಟರಲ್ಲಿ ಪೊಲೀಸ್ ಅಧಿಕಾರಿ ಹಿಗ್ಗಾ ಮುಗ್ಗಾ ಮಾತಿನಲ್ಲೇ ಝಾಡಿಸಿದ್ದಾರೆ ಎನ್ನಲಾಗಿದೆ.‌ ಈ ಸಂದರ್ಭ ಗರಂ ಆದ ಬೈಕ್ ಸವಾರ ಕೂಡಾ ಪೊಲೀಸ್ ಅಧಿಕಾರಿಯ ಮಾತಿನ ರಂಪಾಟದ ವಿರುದ್ದ ಪ್ರತಿಕ್ರಯಿಸಿದ್ದಾರೆ. ಈ ಸಂದರ್ಭ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಭಾರೀ ಸಂಖ್ಯೆಯಲ್ಲಿ ಜನ ಜಮಾಯಿಸಿದ ಪರಿಣಾಮ ಹೆದ್ದಾರಿಯಲ್ಲಿ ಟ್ರಾಫಿಕ್ ಅವ್ಯವಸ್ಥೆಗೂ ಕಾರಣವಾಯಿತು. ಟ್ರಾಫಿಕ್ ಎಸ್ಐ ಈ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುವುದಕ್ಕಿಂತ ಕೆಲ ನಿಮಿಷಗಳ ಮೊದಲು ನಗರ ಠಾಣಾ ಎಸ್ಐ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಕಾರ್ಯಾಚರಣೆ ನಡೆಸಿ ತೆರಳಿದ್ದರಷ್ಟೆ. ಎರಡು ದಿನಗಳ ಹಿಂದೆ ಇದೇ ಜಾಗದಲ್ಲಿ ನಗರ ಠಾಣಾ ಎಸ್ಐ ಅವರು ಕಾರ್ಯಾಚರಣೆ ನಡೆಸಿ ಹೆದ್ದಾರಿ ಮಧ್ಯೆ ಬಂದು ದ್ವಿಚಕ್ರ ವಾಹನದ ಹ್ಯಾಂಡಲ್ ಹಿಡಿದು ನಿಲ್ಲಿಸುವ ಸಂದರ್ಭ ಅನಾಹುತ ಸಂಭವಿಸುವ ಸಾಧ್ಯತೆ ಬಗ್ಗೆ ಸವಾರನೋರ್ವ ಪ್ರಶ್ನಿಸಿದ ವೇಳೆಯೂ ಸವಾರ ಹಾಗೂ ಪೊಲೀಸ್ ಅಧಿಕಾರಿಯ ನಡುವೆ ಇದೇ ರೀತಿಯ ಮಾತಿನ ವಿನಿಮಯ ನಡೆದಿತ್ತು. ಪೊಲೀಸರು ಹೆದ್ದಾರಿ ಮಧ್ಯೆ ನಿಂತು ಈ ರೀತಿಯ ಕಾರ್ಯಚರಣೆ ನಡೆಸುವ ವೇಳೆ ಹೆದ್ದಾರಿಯಲ್ಲಿ ಅತೀ ವೇಗವಾಗಿ ಬರುವ ವಾಹನಗಳು ಸವಾರರ ನಿಯಂತ್ರಣಕ್ಕೆ ಸಿಲುಕದೆ ಅಪಘಾತದಂತಹ ಅನಾಹುತಗಳು ಸಂಭವಿಸುವ ಸನ್ನಿವೇಶ ಜಾಸ್ತಿಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಾಲೂಕಿನ ಬಿ ಸಿ ರೋಡು, ಬಂಟ್ವಾಳ, ಕೈಕಂಬ, ಫರಂಗಿಪೇಟೆ, ಕಲ್ಲಡ್ಕ, ಮೆಲ್ಕಾರ್, ಪಾಣೆಮಂಗಳೂರು ಮೊದಲಾದ ಕಿರಿಕ್ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಅಧಿಕವಾಗಿದ್ದು, ಇಲ್ಲಿನ ಟ್ರಾಫಿಕ್ ಅವ್ಯವಸ್ಥೆ ನಿವಾರಣೆಗೆ ಯಾವುದೇ ಕ್ರಮ ಕೈಗೊಳ್ಳದ ಇಲ್ಲಿನ ಪೊಲೀಸ್ ಅಧಿಕಾರಿಗಳು ದ್ವಿಚಕ್ರ ವಾಹನ ಸವಾರರ ಬೇಟೆಗೆ ಹಲವು ಪೊಲೀಸ್ ಸಿಬ್ಬಂದಿಗಳೊಂದಿಗೆ ಕ್ರಿಮಿನಲ್ ಗಳ ಬೇಟೆಗೆ ಮುಂದಾಗುವಂತೆ ಅತಿರೇಕದ ವರ್ತನೆ ತೋರುವುದರ ಹಿಂದಿರುವ ಮರ್ಮವಾದರೂ ಏನು ಎಂದು ಪ್ರಶ್ನಿಸುವ ಸವಾರರು ಕೇವಲ ದ್ವಿಚಕ್ರ ವಾಹನ ಸವಾರರ ಮೇಲೆ ಮಾತ್ರ ಮುಗಿಬೀಳುವ ಸವಾರರು ಇತರ ಲಘು ಹಾಗೂ ಘನ ವಾಹನಗಳ ಸಂಚಾರಿ ನಿಯಮ ಉಲ್ಲಂಘನೆ ಮತ್ತು ಪೇಟೆಯ ಪಾರ್ಕಿಂಗ್ ನಿಯಮ ಉಲ್ಲಂಘಿಸುವ ವಾಹನಗಳು ಹಾಗೂ ಕಟ್ಟಡ ಮಾಲಕರ ವಿರುದ್ದ ಯಾಕೆ ಮಲತಾಯಿ ಧೋರಣೆ ಅನುಸರಿಸುತ್ತಾರೆ ಎಂದು ಪ್ರಶ್ನಿಸುತ್ತಾರೆ.
  • Blogger Comments
  • Facebook Comments

0 comments:

Post a Comment

Item Reviewed: ದ್ವಿಚಕ್ರ ವಾಹನಗಳ ಮೇಲೆ ಪೊಲೀಸರ ನಿರಂತರ ಕಾರ್ಯಾಚರಣೆಗೆ ಸವಾರರು ಗರಂ, ಮಾತಿನ ರಂಪಾಟ Rating: 5 Reviewed By: karavali Times
Scroll to Top