ಉಡುಪಿ : ಪ್ರದರ್ಶನ ವೇಳೆ ಹೃದಯಾಘಾತವಾಗಿ ಯಕ್ಷಗಾನ ಕಲಾವಿದ ಸಾಧು ಕೊಠಾರಿ ಮೃತ - Karavali Times ಉಡುಪಿ : ಪ್ರದರ್ಶನ ವೇಳೆ ಹೃದಯಾಘಾತವಾಗಿ ಯಕ್ಷಗಾನ ಕಲಾವಿದ ಸಾಧು ಕೊಠಾರಿ ಮೃತ - Karavali Times

728x90

5 January 2021

ಉಡುಪಿ : ಪ್ರದರ್ಶನ ವೇಳೆ ಹೃದಯಾಘಾತವಾಗಿ ಯಕ್ಷಗಾನ ಕಲಾವಿದ ಸಾಧು ಕೊಠಾರಿ ಮೃತಉಡುಪಿ, ಜ 05, 2021 (ಕರಾವಳಿ ಟೈಮ್ಸ್): ರಂಗಸ್ಥಳದಲ್ಲಿ ಯಕ್ಷಗಾನ ಪ್ರದರ್ಶನ ನೀಡುತ್ತಿದ್ದ ವೇಳೆಯಲ್ಲೇ ಹೃದಯಾಘಾತಕ್ಕೊಳಗಾದ ಕಲಾವಿದ, ಮಂದರ್ತಿ ಮೇಳದ ಪ್ರಧಾನ ವೇಷಧಾರಿ ಸಾಧು ಕೊಠಾರಿ (58) ನಿಧನರಾಗಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರದ ಶಿರಿಯಾರದಲ್ಲಿರುವ ಕಾಜ್ರಲ್ಲಿ ಸಮೀಪದ ಕಲ್ಕಟ್ಟೆಯಲ್ಲಿ ಮಂಗಳವಾರ ಮುಂಜಾನೆ ‘ಮಹಾಕಲಿ ಮಗಧೇಂದ್ರ’ ಪ್ರಸಂಗದಲ್ಲಿ ಮಾಗಧನಾಗಿ ಪ್ರದರ್ಶನ ನೀಡುತ್ತಿದ್ದ ವೇಳೆ ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ವೇದಿಕೆಯಲ್ಲೇ ಈ ಘಟನೆ ನಡೆದಿದೆ. 

ಪ್ರದರ್ಶನದ ವೇಳೆ ಎದೆ ಬೇನೆಯಿಂದ ಬಳಲಿದ್ದ ಕೊಠಾರಿ ಅವರನ್ನು ತಕ್ಷಣ ಯಕ್ಷಗಾನ ತಂಡ ವ್ಯವಸ್ಥಾಪಕ ಸದಾಶಿವ ಅಮೀನ್ ಅವರು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. 

ಸಾಧು ಕೊಠಾರಿ ಅವರು ಕುಟುಂಬದೊಂದಿಗೆ ಬಾರ್ಕೂರಿನಲ್ಲಿ ನೆಲೆಸಿದ್ದರು, ಬಟಗುತಿಟ್ಟು ಯಕ್ಷಗಾನ ಕಲೆಯ ಅತ್ಯುತ್ತಮ ಕಲಾವಿದರಲ್ಲಿ ಒಬ್ಬರಾಗಿದ್ದರು. ಕಳೆದ ನಾಲ್ಕು ದಶಕಗಳಿಂದ ಅವರು ಯಕ್ಷಗಾನ ಪ್ರದರ್ಶನ ನೀಡುತ್ತಿದ್ದರು. 
  • Blogger Comments
  • Facebook Comments

0 comments:

Post a Comment

Item Reviewed: ಉಡುಪಿ : ಪ್ರದರ್ಶನ ವೇಳೆ ಹೃದಯಾಘಾತವಾಗಿ ಯಕ್ಷಗಾನ ಕಲಾವಿದ ಸಾಧು ಕೊಠಾರಿ ಮೃತ Rating: 5 Reviewed By: karavali Times
Scroll to Top