ಅರ್ಕುಳ : ಫೆ. 28 ರಿಂದ ಮಾರ್ಚ್ 6 ರವರೆಗೆ ವರ್ಷಾವಧಿ ಜಾತ್ರೆ, ಬಂಡಿ ಉತ್ಸವ - Karavali Times ಅರ್ಕುಳ : ಫೆ. 28 ರಿಂದ ಮಾರ್ಚ್ 6 ರವರೆಗೆ ವರ್ಷಾವಧಿ ಜಾತ್ರೆ, ಬಂಡಿ ಉತ್ಸವ - Karavali Times

728x90

26 February 2021

ಅರ್ಕುಳ : ಫೆ. 28 ರಿಂದ ಮಾರ್ಚ್ 6 ರವರೆಗೆ ವರ್ಷಾವಧಿ ಜಾತ್ರೆ, ಬಂಡಿ ಉತ್ಸವ

ಮಂಗಳೂರು, ಫೆ. 26, 2021 (ಕರಾವಳಿ ಟೈಮ್ಸ್) : ಅರ್ಕುಳ ಶ್ರೀ ಉಳ್ಳಾಕ್ಲು ಮಗೃಂತಾಯಿ ಧರ್ಮ ದೇವತೆಗಳ ವರ್ಷಾವಧಿ ಸಾಣದ ಜಾತ್ರೆಯು ಫೆÉಬ್ರವರಿ 28 ರ ಭಾನುವಾರದಿಂದ ಮಾರ್ಚ್ 6 ರ ಶನಿವಾರದÀವರೆಗೆ ನಡೆಯಲಿದೆ. ಫೆ. 28 ರಂದು ಮುಂಜಾನೆ ತೋರಣ ಮುಹೂರ್ತ ಹಾಗೂ ಸಂಜೆ ಪ್ರಥಮ ಚೆಂಡು, ಮಾರ್ಚ್ 4 ರಂದು ಕೊನೆ ಚೆಂಡು, ರಾತ್ರಿ ಅರ್ಕುಳ ಬೀಡಿನಿಂದ ಶ್ರೀ ದೈವಗಳ ಭಂಡಾರ ಆಗಮಿಸಿ, ದ್ವಜಾರೋಹಣ ಹಾಗೂ ಕಂಚಿಲು ಸೇವೆ ನಡೆಯಲಿದೆ. ಮಾರ್ಚ್ 5 ರಂದು ಪೂರ್ವಾಹ್ನ ಬಸದಿಯಲ್ಲಿ ಶ್ರೀ ಪದ್ಮಾವತೀ ದೇವಿ ಪ್ರತಿಷ್ಠೆ, ಸಾಣದಲ್ಲಿ ಮಡಸ್ತಾನ ಸೇವೆ, ನವಕ ಕಲಶಾಭಿಷೇಕ, ಅನ್ನ ಸಂತರ್ಪಣೆ, ಸಂಜೆ 6.30ಕ್ಕೆ ಶ್ರೀ ಉಳ್ಳಾಕ್ಲು ಧರ್ಮ ದೇವತೆಗಳ ನೇಮ ಹಾಗೂ ಬಂಡಿ ಉತ್ಸವ ನಡೆಯಲಿದೆ. ಮಾರ್ಚ್ 6 ರಂದು ಪೂರ್ವಾಹ್ನ ಸಾಣದಲ್ಲಿ ಚಂಡಿಕಾಯಾಗ, ಮಧ್ಯಾಹ್ನ ಪಂಚಾಮೃತ ಅಭಿಷೇಕ, ನಂದಿ ಪೂಜೆ, ಅನ್ನ ಸಂತರ್ಪಣೆ, ಸಂಜೆ ಅರ್ಕುಳ ಬಸದಿಯಲ್ಲಿ ಮಹಾಮಾತೆ ಪದ್ಮಾವತೀ ದೇವಿಗೆ ಪುಷ್ಪಾಲಂಕಾರ ಪೂಜೆ, ಸಂಜೆ 6.30 ರಿಂದ ಶ್ರೀ ಮಗೃಂತಾಯಿ ಧರ್ಮ ದೈವದ ನೇಮ, ಬಂಡಿ ಉತ್ಸವಗಳು ಸಂಪನ್ನಗೊಳ್ಳಲಿದೆ ಎಂದು ಶ್ರೀ ಕ್ಷೇತ್ರ ಅರ್ಕುಳದ ಧರ್ಮದರ್ಶಿ ಅರ್ಕುಳ ಬೀಡು ವಜ್ರನಾಭ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  • Blogger Comments
  • Facebook Comments

0 comments:

Post a Comment

Item Reviewed: ಅರ್ಕುಳ : ಫೆ. 28 ರಿಂದ ಮಾರ್ಚ್ 6 ರವರೆಗೆ ವರ್ಷಾವಧಿ ಜಾತ್ರೆ, ಬಂಡಿ ಉತ್ಸವ Rating: 5 Reviewed By: karavali Times
Scroll to Top