ಮೂಡುಬಿದಿರೆ ಚಂದ್ರಪ್ರಭಸ್ವಾಮಿ ರಥೋತ್ಸವ : ಮಕ್ಕಿಮನೆ ಕಲಾವೃಂದದಿಂದ ಸಾಂಸ್ಕೃತಿಕ ವೈಭವ - Karavali Times ಮೂಡುಬಿದಿರೆ ಚಂದ್ರಪ್ರಭಸ್ವಾಮಿ ರಥೋತ್ಸವ : ಮಕ್ಕಿಮನೆ ಕಲಾವೃಂದದಿಂದ ಸಾಂಸ್ಕೃತಿಕ ವೈಭವ - Karavali Times

728x90

26 February 2021

ಮೂಡುಬಿದಿರೆ ಚಂದ್ರಪ್ರಭಸ್ವಾಮಿ ರಥೋತ್ಸವ : ಮಕ್ಕಿಮನೆ ಕಲಾವೃಂದದಿಂದ ಸಾಂಸ್ಕೃತಿಕ ವೈಭವ

ಮೂಡುಬಿದಿರೆ, ಫೆ. 26, 2021 (ಕರಾವಳಿ ಟೈಮ್ಸ್) : ಜೈನಕಾಶಿ ಮೂಡುಬಿದಿರೆಯ ಬಡಗಬಸ್ತಿಯ ಭಗವಾನ್ ಶ್ರೀ ಚಂದ್ರಪ್ರಭ ಸ್ವಾಮಿಯ ರಥೋತ್ಸವ ಗುರುವಾರ ನಡೆಯಿತು. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಮೂಡುಬಿದಿರೆ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು. ಅಳದಂಗಡಿ ಅರಮನೆಯ ಅರಸರಾದದ ಡಾ. ಪದ್ಮಪ್ರಸಾದ್ ಅಜಿಲರು, ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಸುರೇಂದ್ರ ಕುಮಾರ್ ಹೆಗ್ಗಡೆ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭ ಧವಲತ್ರಯ ಜೈನ ಕಾಶಿ ಟ್ರಸ್ಟ್ ಮೂಡುಬಿದಿರೆ ಆಶ್ರಯದಲ್ಲಿ ಸುದೇಶ್ ಜೈನ್ ಮಕ್ಕಿಮನೆ ನೇತೃತ್ವದ ಮಕ್ಕಿಮನೆ ಕಲಾವೃಂದದ ವತಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪಂಚಮಿ ಮಾರೂರು ಹಾಗೂ ಪ್ರಮಯಿ ಜೈನ್ ಮೂಡುಬಿದಿರೆ ನಿರೂಪಿಸಿದರು. ಚೇತನ ಕುಮಾರ್ ಜೈನ್ ವೇಣೂರು ಸಹಕರಿಸಿದರು.
  • Blogger Comments
  • Facebook Comments

0 comments:

Post a Comment

Item Reviewed: ಮೂಡುಬಿದಿರೆ ಚಂದ್ರಪ್ರಭಸ್ವಾಮಿ ರಥೋತ್ಸವ : ಮಕ್ಕಿಮನೆ ಕಲಾವೃಂದದಿಂದ ಸಾಂಸ್ಕೃತಿಕ ವೈಭವ Rating: 5 Reviewed By: karavali Times
Scroll to Top