ಸಚಿವ ಡಾ ಸುಧಾಕರ್ ಚಾಲಕ-ಗನ್ ಮ್ಯಾನ್ ನಡುವೆ ಬೀದಿ ಕಾಳಗ - Karavali Times ಸಚಿವ ಡಾ ಸುಧಾಕರ್ ಚಾಲಕ-ಗನ್ ಮ್ಯಾನ್ ನಡುವೆ ಬೀದಿ ಕಾಳಗ - Karavali Times

728x90

18 March 2021

ಸಚಿವ ಡಾ ಸುಧಾಕರ್ ಚಾಲಕ-ಗನ್ ಮ್ಯಾನ್ ನಡುವೆ ಬೀದಿ ಕಾಳಗ


ಬೆಂಗಳೂರು, ಮಾ. 19, 2021 (ಕರಾವಳಿ ಟೈಮ್ಸ್) : ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ನಿವಾಸದ ಮುಂದೆ ಸಚಿವರ ಗನ್ ಮ್ಯಾನ್ ಹಾಗೂ ವಾಹನ ಚಾಲಕ ರಸ್ತೆಯಲ್ಲೇ ಹೊಡೆದಾಡಿಕೊಂಡ ಬಗ್ಗೆ ವರದಿಯಾಗಿದೆ. 

ಬೆಂಗಳೂರಿನ ಸದಾಶಿವನಗರದಲ್ಲಿರುವ ಸಚಿವ ಸುಧಾಕರ್ ಮನೆಯ ಮುಂದೆ, ಗನ್‍ಮ್ಯಾನ್ ತಿಮ್ಮಯ್ಯ ಹಾಗೂ ಡ್ರೈವರ್ ಸೋಮಶೇಖರ್ ನಡು ಬೀದಿಯಲ್ಲಿ ಉರುಳಾಡಿಕೊಂಡು ಅಂಗಿ ಕಿತ್ತು ಹೋಗುವಂತೆ ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಈ ಬಗ್ಗೆ ಪ್ರತಿಕ್ರಯಿಸಿರುವ ಸಚಿವರ ಚಾಲಕ ಸÉೂೀಮಶೇಖರ್, ನಿನ್ನೆ ಟೀ ಮಾರುವ ಅಂಗವಿಕಲನ ಮೇಲೆ ತಿಮ್ಮಯ್ಯ ಹಲ್ಲೆ ನಡೆಸಿದ್ದಾನೆ. ಹೀಗಾಗಿ ನಾವು ಎಲ್ಲರೂ ಆತನ ವಿರುದ್ಧ ಬೇಸರ ವ್ಯಕ್ತಪಡಿಸಿದೆವು. ಅಲ್ಲದೆ ಈ ವಿಚಾರವನ್ನು ಎಲ್ಲೂ ಕೂಡ ನಾವು ಬಹಿರಂಗ ಪಡಿಸಿಲ್ಲ. ಆದರೂ ತಿಮ್ಮಯ್ಯ ಸಚಿವರಿಗೆ ಹಾಗೂ ಮೇಡಂಗೆ ಹೇಳಿದ್ದೇನೆ ಎಂದು ಭಾವಿಸಿ ಭಯದಿಂದ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.

ಹಲ್ಲೆಗೊಳಗಾದ ಅಂಗವಿಕಲ ವ್ಯಕ್ತಿ ಸಚಿವರಿಗೆ ತಿಳಿಸುವುದಾಗಿ ಮೂರು ಬಾರಿ ಬಂದಿದ್ದಾರೆ. ಆದರೆ ನಾನು ಹಾಗೂ ಪೆÇಲೀಸರು ಬೇಡಪ್ಪ ಹೋಗು ಎಂದು ತಿಳಿ ಹೇಳಿ ಕಳುಹಿಸಿದ್ದೇವೆ. ಆದರೂ ನಮ್ಮ ಮೇಲೆ ಅನುಮಾನಗೊಂಡ ತಿಮ್ಮಯ್ಯ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಸೋಮಶೇಖರ್ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಸಚಿವ ಡಾ ಸುಧಾಕರ್ ಚಾಲಕ-ಗನ್ ಮ್ಯಾನ್ ನಡುವೆ ಬೀದಿ ಕಾಳಗ Rating: 5 Reviewed By: karavali Times
Scroll to Top