ಮಂಗಳೂರು ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಆಗಿ ಸುಮಂಗಳಾ ರಾವ್ - Karavali Times ಮಂಗಳೂರು ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಆಗಿ ಸುಮಂಗಳಾ ರಾವ್ - Karavali Times

728x90

2 March 2021

ಮಂಗಳೂರು ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಆಗಿ ಸುಮಂಗಳಾ ರಾವ್

ಮಂಗಳೂರು, ಮಾ. 02, 2021 (ಕರಾವಳಿ ಟೈಮ್ಸ್) : ಇಲ್ಲಿನ ಮಹಾನರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ಹಿರಿಯ ಮುಖಂಡ, ಮಂಗಳಾದೇವಿ ವಾರ್ಡ್‍ನಿಂದ 5 ಬಾರಿ ಚುನಾಯಿತರಾಗಿರುವ ಪ್ರೇಮಾನಂದ ಶೆಟ್ಟಿ ಮಂಗಳವಾರ ಆಯ್ಕೆಯಾಗಿದ್ದು, ಉಪ ಮೇಯರ್ ಆಗಿ ಕುಂಜತ್‍ಬೈಲ್ ವಾರ್ಡ್‍ನ ಸದಸ್ಯ ಸುಮಂಗಲ ರಾವ್ ಆಯ್ಕೆಗೊಂಡಿದ್ದಾರೆ. ಮೇಯರ್ ಹುದ್ದೆ ಸಾಮಾನ್ಯ ಹಾಗೂ ಉಪ ಮೇಯರ್ ಹುದ್ದೆ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಕಾಂಗ್ರೆಸ್ಸಿನಿಂದ ಅನಿಲ್ ಕುಮಾರ್ ಮೇಯರ್ ಪಟ್ಟಕ್ಕೆ ಹಾಗೂ ಜಸಿಂತಾ ಆಲ್ಪ್ರೆಡ್ ಉಪಮೇಯರ್ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಪ್ರೇಮಾನಂದ ಶೆಟ್ಟಿ 46 ಮತಗಳನ್ನು ಗಳಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಕೇವಲ 14 ಮತಗಳನ್ನು ಪಡೆದರು. ಇಬ್ಬರು ಸದಸ್ಯರು ಚುನಾವಣೆಯಲ್ಲಿ ತಟಸ್ಥ ನಿಲುವು ಪ್ರಕಟಿಸಿದ್ದರು. ಮೈಸೂರು ಪ್ರಾದೇಶಿಕ ಆಯುಕ್ತ ಡಾ. ಪ್ರಕಾಶ್ ಚುನಾವಣಾಧಿಕಾರಿಯಾಗಿದ್ದರು. ಇದೇ ವೇಳೆ ವಿವಿಧ ಸ್ಥಾಯಿ ಸಮಿತಿಗಳ ಚುನಾವಣೆಗಳೂ ನಡೆಯಿತು.
  • Blogger Comments
  • Facebook Comments

0 comments:

Post a Comment

Item Reviewed: ಮಂಗಳೂರು ಮಹಾನಗರ ಪಾಲಿಕೆ ನೂತನ ಮೇಯರ್ ಆಗಿ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಆಗಿ ಸುಮಂಗಳಾ ರಾವ್ Rating: 5 Reviewed By: karavali Times
Scroll to Top