ಆಗಸ್ಟ್ 1 ರಂದು ನೀಟ್ ಪರೀಕ್ಷೆ : ಎನ್.ಟಿ.ಎ ಪ್ರಕಟಣೆ - Karavali Times ಆಗಸ್ಟ್ 1 ರಂದು ನೀಟ್ ಪರೀಕ್ಷೆ : ಎನ್.ಟಿ.ಎ ಪ್ರಕಟಣೆ - Karavali Times

728x90

12 March 2021

ಆಗಸ್ಟ್ 1 ರಂದು ನೀಟ್ ಪರೀಕ್ಷೆ : ಎನ್.ಟಿ.ಎ ಪ್ರಕಟಣೆ


ನವದೆಹಲಿ, ಮಾ. 13, 2021 (ಕರಾವಳಿ ಟೈಮ್ಸ್) : ಎಂಬಿಬಿಎಸ್, ಬಿಡಿಎಸ್, ಬಿಎಎಂಎಸ್, ಬಿಎಸ್‍ಎಂಎಸ್, ಬಿಎಂಎಸ್, ಬಿಎಚ್‍ಎಂಎಸ್ ಮೊದಲಾದ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್ ಗಳ 2021ನೇ ಸಾಲಿನ ಪ್ರವೇಶಕ್ಕಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ (ನೀಟ್) ಪರೀಕ್ಷೆ 2021 ರ ಆಗಸ್ಟ್ 1 ರಂದು ದೇಶಾದ್ಯಂತ 11 ಭಾಷೆಗಳಲ್ಲಿ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‍ಟಿಎ) ಶುಕ್ರವಾರ ಪ್ರಕಟಿಸಿದೆ. 


    ಈ ಬಗ್ಗೆ ಎನ್.ಟಿ.ಎ. ಪ್ರಕಟಣೆ ಹೊರಡಿಸಿದ್ದು, ‘ನೀಟ್ (ಯುಜಿ)-2021 ನ್ನು ಪೆನ್ ಮತ್ತು ಪೇಪರ್ ಮೋಡ್ ಮೂಲಕ ಹಿಂದಿ ಮತ್ತು ಇಂಗ್ಲಿಷ್ ಸೇರಿದಂತೆ 11 ಭಾಷೆಗಳಲ್ಲಿ ನಡೆಯಲಿದೆ ಎಂದಿದೆ. ಆನ್ ಲೈನ್ ಮೂಲಕ ಈ ಬಾರಿ ಪರೀಕ್ಷೆ ನಡೆಸಲು ಸರಕಾರ ಚಿಂತನೆ ನಡೆಸಿತ್ತಾದರೂ ಇದೀಗ ಪೆನ್ ಮತ್ತು ಪೇಪರ್ ಮೋಡ್‍ನಲ್ಲಿ ಮುಂದುವರಿಯಲು ನಿರ್ಧರಿಸಿದೆ.

  • Blogger Comments
  • Facebook Comments

0 comments:

Post a Comment

Item Reviewed: ಆಗಸ್ಟ್ 1 ರಂದು ನೀಟ್ ಪರೀಕ್ಷೆ : ಎನ್.ಟಿ.ಎ ಪ್ರಕಟಣೆ Rating: 5 Reviewed By: karavali Times
Scroll to Top