ಪೂಂಜಾ ಅವರು ಸಜಿಪದ ಶೈಕ್ಷಣಿಕ ಅಭಿವೃದ್ದಿ ಹಾಗೂ ಸಾಮಾಜಿಕ ಸೌಹಾರ್ದತೆಯ ಪ್ರತೀಕ ಆಗಿದ್ದರು : ಯೂಸುಫ್ ಕರಂದಾಡಿ - Karavali Times ಪೂಂಜಾ ಅವರು ಸಜಿಪದ ಶೈಕ್ಷಣಿಕ ಅಭಿವೃದ್ದಿ ಹಾಗೂ ಸಾಮಾಜಿಕ ಸೌಹಾರ್ದತೆಯ ಪ್ರತೀಕ ಆಗಿದ್ದರು : ಯೂಸುಫ್ ಕರಂದಾಡಿ - Karavali Times

728x90

13 March 2021

ಪೂಂಜಾ ಅವರು ಸಜಿಪದ ಶೈಕ್ಷಣಿಕ ಅಭಿವೃದ್ದಿ ಹಾಗೂ ಸಾಮಾಜಿಕ ಸೌಹಾರ್ದತೆಯ ಪ್ರತೀಕ ಆಗಿದ್ದರು : ಯೂಸುಫ್ ಕರಂದಾಡಿ



ಬಂಟ್ವಾಳ, ಮಾ.  13, 2021 (ಕರಾವಳಿ ಟೈಮ್ಸ್) :  ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಧುರೀಣ ಬಿ ಸದಾನಂದ ಪೂಂಜಾ ಅವರ ನಿಧನ ಸಜಿಪಮೂಡ ಗ್ರಾಮಕ್ಕೆ ಸೇರಿದಂತೆ ನೆರೆಕರೆಯ ಗ್ರಾಮಗಳಾದ ಸಜಿಪಮುನ್ನೂರು ಹಾಗೂ ಸಜಿಪನಡು ಗ್ರಾಮಗಳಿಗೂ ತುಂಬಲಾರದ ನಷ್ಟ ಎಂದು ಸಜಿಪಮುನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ, ಸಜಿಪಮುನ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯೂಸುಫ್ ಕರಂದಾಡಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ರಾಜಕೀಯ, ಸಾಮಾಜಿಕ, ಧಾರ್ಮಿ ಹಾಗೂ ಶೈಕ್ಷಣಿಕ ಸಹಿತ ಎಲ್ಲ ರಂಗಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು, ಸಜಿಪಮೂಡ ಗ್ರಾಮದ ಸರ್ವತೋಮುಖ ಅಭಿವೃದ್ದಿಯ ರೂವಾರಿಯಾಗಿ ಗುರುತಿಸಿಕೊಂಡಿದ್ದ ಇವರು ಸಜಿಪಮೂಡ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ಕಾಲೇಜು ಸ್ಥಾಪನೆಯ ರೂವಾರಿಯಾಗಿ ಗ್ರಾಮದ ಮಕ್ಕಳ ಶೈಕ್ಷಣಿಕ ಅಭಿವೃದ್ದಿಗೆ ಶ್ರಮಿಸಿದವರು. ಜೊತೆಗೆ ತಮ್ಮ ಜಾತಿ-ಧರ್ಮ ಬೇಧ ಮರೆತು ನಡೆಸಿದ ಕಾರ್ಯ ಚಟುವಟಿಕೆಗಳಿಂದ ಸಜಿಪಮೂಡ ಸಹಿತ ಆಸುಪಾಸಿನ ಗ್ರಾಮಗಳಲ್ಲಿ ಕೋಮು ಸೌಹಾರ್ದತೆ ಸದಾ ಕಾಪಾಡಿಕೊಂಡು ಬರುವಲ್ಲಿ ವಿಶೇಷವಾಗಿ ಶ್ರಮಿಸಿದವರು. ಸ್ಥಳೀಯವಾಗಿ ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಯುವಕರು ಸಮಾಜಕ್ಕೆ ಪೂರಕವಾಗಿ ತೊಡಗಿಸಿಕೊಳ್ಳಲು ಸ್ಪೂರ್ತಿಯಾಗಿದ್ದರು ಎಂದು ಯೂಸುಫ್ ಕರಂದಾಡಿ ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ಸ್ಮರಿಸಿಕೊಂಡಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಪೂಂಜಾ ಅವರು ಸಜಿಪದ ಶೈಕ್ಷಣಿಕ ಅಭಿವೃದ್ದಿ ಹಾಗೂ ಸಾಮಾಜಿಕ ಸೌಹಾರ್ದತೆಯ ಪ್ರತೀಕ ಆಗಿದ್ದರು : ಯೂಸುಫ್ ಕರಂದಾಡಿ Rating: 5 Reviewed By: karavali Times
Scroll to Top