ಮಾರ್ಚ್ 27 ರಂದು ಅಂಚೆ ಇಲಾಖೆಯಿಂದ ಪತ್ರ ಲೇಖನ ಸ್ಪರ್ಧೆ - Karavali Times ಮಾರ್ಚ್ 27 ರಂದು ಅಂಚೆ ಇಲಾಖೆಯಿಂದ ಪತ್ರ ಲೇಖನ ಸ್ಪರ್ಧೆ - Karavali Times

728x90

18 March 2021

ಮಾರ್ಚ್ 27 ರಂದು ಅಂಚೆ ಇಲಾಖೆಯಿಂದ ಪತ್ರ ಲೇಖನ ಸ್ಪರ್ಧೆ


ಮಂಗಳೂರು, ಮಾ. 18, 2021 (ಕರಾವಳಿ ಟೈಮ್ಸ್) : ಭಾರತೀಯ ಅಂಚೆ ಇಲಾಖೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಪತ್ರಲೇಖನ ಸ್ಪರ್ಧೆ ಹಮ್ಮಿಕೊಂಡಿದ್ದು, ತಮ್ಮ ಕುಟುಂಬದ ಸದಸ್ಯರಿಗೆ ಕೋವಿಡ್ ಅನುಭವದ ಕುರಿತು ಪತ್ರ ಬರೆಯಿರಿ (Write a letter to family member about your experience with COVID- 19) ಎಂಬ ವಿಷಯಾಧಾರಿತವಾಗಿ ಈ ಪತ್ರ ಲೇಖನ ಸ್ಪರ್ಧೆ ನಡೆಯಲಿದೆ. 

15 ವರ್ಷದ ಒಳಗಿನ ಮಕ್ಕಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ನಿಗದಿತ ನಮೂನೆಯಲ್ಲಿ, ಎರಡು ಪ್ರತಿಯಲ್ಲಿ ಮಾಹಿತಿಯನ್ನು ತುಂಬಿ “ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ವಿಭಾಗ, ಮಂಗಳೂರು-75002” ಈ ವಿಳಾಸಕ್ಕೆ ಮಾರ್ಚ್ 25ರ ಒಳಗಾಗಿ ಪತ್ರವನ್ನು ಕಳುಹಿಸಬೇಕು. ಸ್ಪರ್ಧೆಯು ಮಾರ್ಚ್ 27 ರಂದು ಬಲ್ಮಠ ಅಂಚೆ ಭವನದಲ್ಲಿ ನಡೆಯಲಿದೆ. 

ಪತ್ರ ನಮೂನೆ ಪ್ರತಿಯನ್ನು ಸಮೀಪದ ಅಂಚೆ ಕಚೇರಿಯಲ್ಲಿ ಅಥವಾ https://tinyurl.com/4xcf3bmw ಈ ಲಿಂಕಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-2217076 ಅಥವಾ 0824-2218400ನ್ನು ಸಂಪರ್ಕಿಸಬಹುದು ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಛೇರಿ ಪ್ರಕಟಣೆ ತಿಳಿಸಿದೆ. 

  • Blogger Comments
  • Facebook Comments

0 comments:

Post a Comment

Item Reviewed: ಮಾರ್ಚ್ 27 ರಂದು ಅಂಚೆ ಇಲಾಖೆಯಿಂದ ಪತ್ರ ಲೇಖನ ಸ್ಪರ್ಧೆ Rating: 5 Reviewed By: karavali Times
Scroll to Top