ಬಿ.ಸಿ.ರೋಡು : ಜ್ಯೋತಿಷಿಗೆ ಚೂರಿ ಇರಿತ, ಆಸ್ಪತ್ರೆಗೆ ದಾಖಲು - Karavali Times ಬಿ.ಸಿ.ರೋಡು : ಜ್ಯೋತಿಷಿಗೆ ಚೂರಿ ಇರಿತ, ಆಸ್ಪತ್ರೆಗೆ ದಾಖಲು - Karavali Times

728x90

20 March 2021

ಬಿ.ಸಿ.ರೋಡು : ಜ್ಯೋತಿಷಿಗೆ ಚೂರಿ ಇರಿತ, ಆಸ್ಪತ್ರೆಗೆ ದಾಖಲು


ಬಂಟ್ವಾಳ, ಮಾ. 21, 2021 (ಕರಾವಳಿ ಟೈಮ್ಸ್) : ಇಲ್ಲಿನ ನಗರ ಠಾಣೆಯ ಅನತಿ ದೂರದಲ್ಲಿರುವ ಬಿ ಸಿ ರೋಡು ಪೇಟೆಯ ಹೃದಯ ಭಾಗದ ಪದ್ಮಾ ಕಾಂಪ್ಲೆಕ್ಸ್ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ದುರ್ಗಾ ಪರಮೇಶ್ವರಿ ಜ್ಯೋತಿಷ್ಯಾಲಯಕ್ಕೆ ಶನಿವಾರ ಮಧ್ಯಾಹ್ನ ಬಂದ ಅಪರಿಚಿತರು ಇಲ್ಲಿ ಜ್ಯೋತಿಷಿ ಹೇಳುವ ಪಂಡಿತ್ ಲಕ್ಷ್ಮಿಕಾಂತ್ ಭಟ್ ಎಂಬವರಿಗೆ ಚೂರಿ ಇರಿದು ಪರಾರಿಯಾಗಿರುವ ಘಟನೆ ವರದಿಯಾಗಿದೆ. 


    ಶನಿವಾರ ಮಧ್ಯಾಹ್ನ ಸುಮಾರು 3 ಗಂಟೆಯ ವೇಳೆಗೆ ಆಗಮಿಸಿದ ಇಬ್ಬರು ವ್ಯಕ್ತಿಗಳು ಪಂಡಿತ್ ಲಕ್ಷ್ಮೀಕಾಂತ್ ಭಟ್ ಅವರಿಗೆ ಚೂರಿ ಇರಿದು ಗಾಯಗೊಳಿಸಿ ಬಳಿಕ ಜ್ಯೋತಿಷಾಲಯದ ಬಾಗಿಲು ಹಾಕಿ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಕೆಲ ಸಮಯದ ಬಳಿಕ ಸ್ವತಃ ಎಚ್ಚರಗೊಂಡ ಭಟ್ ಅವರೇ ಎದ್ದು ಹೊರಗೆ ಬಂದಿದ್ದು, ಈ ಸಂದರ್ಭ ಅವರ ರಕ್ತಸಿಕ್ತ ದೇಹ ಕಂಡ ಸಮೀಪದ ಅಂಗಡಿಯವರು ತಕ್ಷಣ ಆಸ್ಪತ್ರೆಗೆ ಸಾಗಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. 


    ಘಟನೆಗೆ ನೈಜ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಬಂಟ್ವಾಳ  ನಗರ ಠಾಣಾ ಪೊಲೀಸ್ ಇನ್ಸ್‍ಪೆಕ್ಟರ್ ಚೆಲುವರಾಜು ನೇತೃತ್ವದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತತೆಗೆ ಬಲೆ ಬೀಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಬಿ.ಸಿ.ರೋಡು : ಜ್ಯೋತಿಷಿಗೆ ಚೂರಿ ಇರಿತ, ಆಸ್ಪತ್ರೆಗೆ ದಾಖಲು Rating: 5 Reviewed By: karavali Times
Scroll to Top